ಅಪ್ಪುಗಾಗಿ ಡ್ಯಾನ್ಸ್ ಚಾಂಪಿಯನ್ ವೇದಿಕೆಯಲ್ಲಿ ಮೇಘನರಾಜ್ ಮಾಡಿದ್ದೇನು ಗೊತ್ತಾ?? ಭೇಷ್ ಎಂದ ನೆಟ್ಟಿಗರು. ಅಷ್ಟಕ್ಕೂ ನಡೆದ್ದದೇನು ಗೊತ್ತೇ??

24

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಚಿರುಸರ್ಜಾ ಅವರನ್ನು ಕಳೆದುಕೊಂಡ ನಂತರ ಇದೀಗ ಮೇಘನಾರಾಜ್ ರವರು ನಿಧಾನವಾಗಿ ಸಹಜ ಸ್ಥಿತಿಗೆ ಮರಳಿ ಬರುತ್ತಿದ್ದು ಮಗ ರಾಯನ್ ರಾಜ್ ಸರ್ಜಾ ರವರಿಗಾಗಿ ನಗು ಮುಖವನ್ನು ತಂದುಕೊಂಡು ಎಲ್ಲರೊಂದಿಗೆ ಬೆರೆಯುತ್ತಿದ್ದಾರೆ. ಇನ್ನು ಇತ್ತೀಚಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಮೇಘನಾರಾಜ್ ರವರು ಖಾಯಂ ತೀರ್ಪುಗಾರರಾಗಿ ಇರಬೇಕು ಎಂಬುದಾಗಿ ಪ್ರೇಕ್ಷಕರು ವಾಹಿನಿಯ ಮೇಲೆ ಒತ್ತಡವನ್ನು ಹೇರಿದ್ದರು ಎಂಬುದು ನಿಮಗೆಲ್ಲ ತಿಳಿದಿರುವ ವಿಚಾರವಾಗಿದೆ.

ಅಷ್ಟರಮಟ್ಟಿಗೆ ಮೇಘನಾರಾಜ್ ರವರನ್ನು ಕಿರುತೆರೆಯಲ್ಲಿ ನೋಡಬೇಕು ಎಂಬುದಾಗಿ ಪ್ರೇಕ್ಷಕರು ಹಾಗೂ ಅವರ ಅಭಿಮಾನಿಗಳು ಕಾತರರಾಗಿದ್ದರು. ಇಷ್ಟು ಮಾತ್ರವಲ್ಲದೆ ಕೆಲವು ಸಿನಿಮಾಗಳಲ್ಲಿ ನಟಿಸುವುದಕ್ಕೆ ಕೂಡ ಮೇಘನಾ ರಾಜ್ ರವರು ಒಪ್ಪಿಕೊಂಡಿರುವುದು ಇತ್ತೀಚಿಗೆ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಮೇಘನಾರಾಜ್ ರವರು ಆಕ್ಟಿವ್ ಇರುವ ಕಾರಣದಿಂದಾಗಿ ಅಲ್ಲಿ ಕುಳಿತ ಅಭಿಮಾನಿಗಳೊಂದಿಗೆ ಸದಾಕಾಲ ಸಕ್ರಿಯರಾಗಿರುತ್ತಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ನಾವೆಲ್ಲ ಕಳೆದುಕೊಂಡು ಈಗಾಗಲೇ ಬರೋಬ್ಬರಿ ಮೂರು ತಿಂಗಳುಗಳು ಕಳೆದು ಹೋಗಿದೆ. ಈ ಹಿನ್ನೆಲೆಯಲ್ಲಿ ಮೇಘನಾರಾಜ್ ರವರು ಮಾಡಿದ್ದೇನು ಗೊತ್ತಾ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾವು ಕಳೆದುಕೊಂಡು ಮೂರು ತಿಂಗಳು ಕಳೆದಂತಹ ಹಿನ್ನೆಲೆಯಲ್ಲಿ ಅವರ ಸಮಾಧಿಗೆ ಅವರ ಕುಟುಂಬಸ್ಥರು ಪೂಜೆ ಮಾಡಿದ್ದಾರೆ. ಮೇಘನಾ ರಾಜ್ ಹಾಗೂ ಅವರ ಕುಟುಂಬಸ್ಥರಿಗೆ ಕೂಡ ಅಪ್ಪು ಅವರು ಸಾಕಷ್ಟು ಆತ್ಮೀಯರಾಗಿದ್ದು ಡ್ಯಾನ್ಸ್ ಚಾಂಪಿಯನ್ ವೇದಿಕೆಯಲ್ಲಿ ಅವರನ್ನು ನೆನಪಿಸಿಕೊಳ್ಳುತ್ತಾರೆ. ಇಷ್ಟು ಮಾತ್ರವಲ್ಲದೆ ಅವರಿಗಾಗಿ ಒಂದು ನಿಮಿಷ ಮೌನಾಚರಣೆ ಮಾಡೋಣ ಎಂದು ಡ್ಯಾನ್ಸ್ ಚಾಂಪಿಯನ್ ವೇದಿಕೆಯಲ್ಲಿ ಎಲ್ಲರೂ ಅಪ್ಪು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವಂತೆ ಮಾಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.