ವಿವಾದ ಮಾಡಿಕೊಂಡ 24 ಗಂಟೆಗಳಲ್ಲಿಯೇ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡ ರಶ್ಮಿಕಾ, ನೆಟ್ಟಿಗರು ಫುಲ್ ಗರಂ. ಮಾಡಿದ್ದೇನು ಗೊತ್ತೇ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಮೊದಲೇ ಕೇವಲ ತೆಲುಗು ಚಿತ್ರಗಳಿಂದಲೇ ರಶ್ಮಿಕಾ ಮಂದಣ್ಣ ನವರು ದೇಶ ಪೂರ್ತಿ ಸದ್ದನ್ನು ಮಾಡಿದ್ದರು. ಈಗಂತೂ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಪುಷ್ಪ ಚಿತ್ರದ ಹಿಂದಿ ಅವತರಣಿಕೆ ಯಿಂದಾಗಿ ಬಾಲಿವುಡ್ ಚಿತ್ರರಂಗದಲ್ಲಿ ಎಲ್ಲರ ನೆಚ್ಚಿನ ನಟಿಯಾಗಿ ರಶ್ಮಿಕ ಮಂದಣ್ಣ ನವರು ಜನಪ್ರಿಯರಾಗಿದ್ದಾರೆ. ಈಗಾಗಲೇ ನ್ಯಾಷನಲ್ ಕ್ರಷ್ ಆಗಿ ಭಾರತದ ಪ್ರತಿಯೊಂದು ಭಾಷೆಗಳಲ್ಲಿ ಕೂಡ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಕೊಡಗಿನ ಕುವರಿ ಆಗಿರುವ ರಶ್ಮಿಕ ಮಂದಣ್ಣ ನವರು ಹೊಂದಿದ್ದಾರೆ.

ಪುಷ್ಪ ಚಿತ್ರದ ಶ್ರೀವಲ್ಲಿ ಆಗಿ ಈಗಾಗಲೇ ಪಂಚ ಭಾಷೆಗಳಲ್ಲಿ ಪ್ರೇಕ್ಷಕರಲ್ಲಿ ಮೋಡಿ ಮಾಡಿದ್ದಾರೆ. ಎಷ್ಟು ಜನಪ್ರಿಯತೆಯನ್ನು ಹೊಂದಿದ್ದಾರೋ ಅಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಕೂಡ ಆಗುತ್ತಾರೆ. ಇತ್ತೀಚೆಗಷ್ಟೇ ಮುಂಬೈ ಏರ್ಪೋರ್ಟ್ನಲ್ಲಿ ತುಂಡು ಬಟ್ಟೆಯನ್ನು ಹಾಕಿಕೊಂಡು ಬಂದಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಒಳಗಾಗಿದ್ದರು. ಈಗ ಮತ್ತೊಮ್ಮೆ ರಶ್ಮಿಕ ಮಂದಣ್ಣ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಏನೆಂದರೆ ಇತ್ತೀಚೆಗೆಷ್ಟೇ ಮುಂಬೈಗೆ ಬಂದಿದ್ದ ರಶ್ಮಿಕ ಮಂದಣ್ಣ ನವರು ನೇರವಾಗಿ ಕರೆಂಟ್ ಜೋಹರ್ ಅವರ ಮನೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಮನೆಯಿಂದ ಹೊರ ಬರಬೇಕಾದರೆ ಅವರು ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದರು.

ಆಗ ರಶ್ಮಿಕ ಮಂದಣ್ಣ ನವರ ಬಳಿ ಕೆಲವೊಂದು ಬಡಮಕ್ಕಳು ಆಸೆಯಿಂದ ಅವರ ಬಳಿ ಬಂದು ಊಟಕ್ಕಾಗಿ ಕೇಳುತ್ತಾರೆ. ಆದರೆ ರಶ್ಮಿಕ ಮಂದಣ್ಣ ಅವರನ್ನು ಮಾತನಾಡಿಸದೆ ನೇರವಾಗಿ ತಮ್ಮ ಕಾರಿನಲ್ಲಿ ಕುಳಿತು ಕೊಂಡು ಹೋಗುತ್ತಾರೆ. ಈ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ವೈರಲ್ ಆಗಿದ್ದು ಈ ಜಾಗದಲ್ಲಿ ಸುಶಾಂತ್ ಸಿಂಗ್ ರಜಪೂತ್ ಇದ್ದಿದ್ದರೆ ಅವರು ಮಕ್ಕಳೊಂದಿಗೆ ವ್ಯವಹರಿಸುವ ರೀತಿಯೇ ಬೇರೆಯಾಗಿರುತ್ತಿತ್ತು ಎಂಬುದಾಗಿ ರಶ್ಮಿಕ ಮಂದಣ್ಣ ಅವರ ವಿರುದ್ಧ ಕಿಡಿಕಾರಿದ್ದಾರೆ. ಈ ಘಟನೆಯ ಕುರಿತಂತೆ ರಶ್ಮಿಕ ಮಂದಣ್ಣ ನವರು ಮಾಡಿರುವ ಈ ಕಾರ್ಯದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.

Get real time updates directly on you device, subscribe now.