ಮುದ್ದಾದ ಹೆಣ್ಣು ಕೊಟ್ಟು ಮದುವೆ ಮಾಡಿಕೊಡುತ್ತೇವೆ ಅಂದ್ರೆ ಬೈಕ್ ಬೇಕು ಎಂದ ವರ, ಆಗ ಗ್ರಾಮಸ್ಥರು ಮಾಡಿದ್ದೇನು ಗೊತ್ತೇ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಪ್ರಪಂಚದಲ್ಲಿ ಹಲವಾರು ವರ್ಗದ ಜನರಿಗೆ ಬೇರೆಬೇರೆ ರೀತಿಯ ಕಷ್ಟಗಳು ಇರುತ್ತದೆ. ಈಗ ನಾವು ಮಾತನಾಡಲು ಹೊರಟಿರುವುದು ಹೆಣ್ಣುಹೆತ್ತವರ ಕುರಿತಂತೆ. ಹೆಣ್ಣು ಹುಟ್ಟಿದರೆ ಮನೆಗೆ ಲಕ್ಷ್ಮಿ ಆಗಮನವಾದಂತೆ ಎಂಬ ಮಾತುಗಳು ಇವೆ. ಆದರೆ ಹೆಣ್ಣು ಹೆತ್ತರೆ ಪೋಷಕರಿಗೆ ಎಷ್ಟು ಖುಷಿಯಾಗುತ್ತದೆಯೋ ಅಷ್ಟೇ ಜವಾಬ್ದಾರಿ ಕೂಡ ಬಂದಿರುತ್ತದೆ. ಹೆಣ್ಣು ಹುಟ್ಟಿದ ತಕ್ಷಣದಿಂದ ಮನೆಯವರು ಆಕೆಯ ಮದುವೆಗಾಗಿ ಒಂದೊಂದು ರೂಪಾಯಿಗಳನ್ನು ಕೂಡಿಡುತ್ತಾರೆ. ಯಾಕೆಂದರೆ ಇಂದಿನ ಜಮಾನದಲ್ಲಿ ಗಂಡಿನ ಕಡೆಯವರು ಕೇಳುವ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಸ್ವಲ್ಪ ಪ್ರಮಾಣದ ಹಣವು ಸಾಕಾಗುವುದಿಲ್ಲ.

ಹೀಗಾಗಿ ಈ ಕಷ್ಟ ಕೇವಲ ಹೆಣ್ಣು ಹೆತ್ತವರಿಗೆ ಮಾತ್ರ ಗೊತ್ತಿರುತ್ತದೆ. ನಗರದ ಕಡೆಯಲ್ಲಾ ಆದರೆ ಹೆಣ್ಣುಮಕ್ಕಳು ತಮ್ಮ ಆಯ್ಕೆಯ ಗಂಡನ್ನು ತಾವೇ ಆಯ್ಕೆ ಮಾಡುತ್ತಾರೆ. ಕೆಲವೊಮ್ಮೆ ಗಂಡಿನ ಕಡೆಯವರು ಮದುವೆ ಖರ್ಚನ್ನು ಹಾಕಿಕೊಳ್ಳುತ್ತಾರೆ. ಇನ್ನು ಕೆಲವು ಹುಡುಗಿಯರು ತಾವೇ ಸ್ವಾವಲಂಬಿಯಾಗಿ ದುಡಿದು ತಮ್ಮ ಮದುವೆ ಖರ್ಚನ್ನು ತಮ್ಮ ಆದಾಯದಿಂದಲೇ ಪೂರೈಸಿಕೊಳ್ಳುತ್ತಾರೆ.

ಆದರೆ ಹಳ್ಳಿಯ ಕಡೆಯಲ್ಲಿ ಮಾತ್ರ ಹೆಣ್ಣುಮಕ್ಕಳಿಗಾಗಿ ಅವರ ತಂದೆ-ತಾಯಿಯರೇ ಹಣವನ್ನು ಕೂಡಿಟ್ಟು ಮದುವೆ ಮಾಡಿಸುತ್ತಾರೆ. ಇಂದು ನಾವು ಹೇಳಹೊರಟಿರುವ ಕಥೆಯಲ್ಲಿ ಕೂಡ ಇದೇ ಮಾದರಿಯ ಘಟನೆಗಳು ನಡೆದಿವೆ ಆದರೆ ಇದರ ಸಾರಾಂಶವನ್ನು ಕೇಳಿದ ನಂತರ ನೀವು ಕೂಡ ಕೋಪಗೊಳ್ಳುವುದು ಗ್ಯಾರಂಟಿ. ಒಂದು ಚಿಕ್ಕ ಹಳ್ಳಿಯಲ್ಲಿ ಮಧ್ಯಮ ವರ್ಗದ ಕುಟುಂಬದ ದಂಪತಿಗಳು ತಮ್ಮ ಮಗಳಿಗೆ ಮದುವೆ ಮಾಡಿಸಲು ಸಿದ್ಧರಾಗುತ್ತಾರೆ. ಗಂಡು ತನಗೆ ಬೈಕ್ ಬೇಕು ಎಂಬುದಾಗಿ ಬೇಡಿಕೆ ಇಡುತ್ತಾರೆ ಅದನ್ನು ಕೂಡ ಮದುವೆ ಚಪ್ಪರಕ್ಕೆ ತರಿಸುತ್ತಾರೆ. ಹೆಣ್ಣಿಗೆ ತಾಳಿ ಕಟ್ಟಿದ ನಂತರ ಮದುವೆ ಸಾಂಗವಾಗಿ ನೆರವೇರಿತು ಎಂಬ ಖುಷಿಯಲ್ಲಿ ಇರಬೇಕಾದರೆ ಮದುವೆ ಗಂಡಿನ ಹೊಸ ವರಸೆ ಪ್ರಾರಂಭವಾಗಿತ್ತು. ಅದೇನೆಂದರೆ ನನಗೆ ಬೈಕ್ ಬೇಡ ಬದಲಾಗಿ ದುಬಾರಿ ಬೆಲೆಯ ಬುಲೆಟ್ ಬೇಕು ಎಂಬುದಾಗಿ ಹೇಳುತ್ತಾನೆ.

ಆಗ ಆ ಹುಡುಗಿಯ ತಂದೆ ತಾಯಿ ಅದಕ್ಕೂ ಕೂಡ ಒಪ್ಪಿ 2 ಲಕ್ಷ ರೂಪಾಯಿ ಚೆಕ್ಕನ್ನು ಆತನಿಗೆ ನೀಡುತ್ತಾರೆ. ಆಗ ಅಹಂಕಾರದಿಂದ ಆತ ಅದನ್ನು ಹರಿದು ಹಾಕುತ್ತಾನೆ. ಇದರಿಂದ ಕೋಪಗೊಂಡ ಗ್ರಾಮಸ್ಥರು ಹಾಗೂ ಹೆಣ್ಣಿನ ಕಡೆಯವರು ಆತನಿಗೆ ಮನಬಂದಂತೆ ಥಳಿಸಿ ಪೊಲೀಸರಿಗೆ ನೀಡುತ್ತಾರೆ. ಈ ಕಡೆ ಆ ಹೆಣ್ಣುಮಗಳು ಕೂಡ ತಾನು ಗಂಡನ ಮನೆಗೆ ಹೋಗದೆ ತನ್ನ ತವರು ಮನೆಯಲ್ಲೇ ಇರುತ್ತೇನೆ ಎಂಬುದಾಗಿ ಹೇಳಿ ಅಲ್ಲೇ ಇದ್ದಾಳೆ. ಹಣ ಬಾಕ ಗಂಡನಿಂದಾಗಿ ಆ ಹೆಣ್ಣುಮಗಳು ಈಗ ಮದುವೆಯಾದರೂ ಕೂಡ ತವರುಮನೆಯಲ್ಲಿ ಇರುವಂತಾಗಿದೆ. ಇಂತಹ ವರದಕ್ಷಿಣೆ ವಿಚಾರಗಳು ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೂಡ ನಡೆಯುತ್ತಿರಬಹುದು ಇಂತಹ ಪದ್ಧತಿಗಳು ಕಂಡುಬಂದರೆ ತಪ್ಪದೆ ಅವರಿಗೆ ಶಿಕ್ಷೆಯಾಗುವಂತೆ ಮಾಡಿ.

Get real time updates directly on you device, subscribe now.