ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಬಗ್ಗೆ ಆಕೆಯ ಸ್ನೇಹಿತೆ ಹೇಳಿದ್ದೇನು ಗೊತ್ತಾ? ಹೀಗೆಲ್ಲಾ ಮಾಡ್ತಾರಾ ಶ್ರದ್ಧಾ??
ನಮಸ್ಕಾರ ಸ್ನೇಹಿತರೇ, ಅದು ಸ್ಯಾಂಡಲ್ ವುಡ್ ಇರಲಿ, ಬಾಲಿವುಡ್ ಇರಲಿ ಅಥವಾ ಇನ್ಯಾವುದೇ ಸಿನಿಮಾ ಇಂಡಸ್ಟ್ರಿಯಾಗಿರಲಿ, ಅಲ್ಲಿ ನಟಿಸುವ ಬಹುತೇಕ ನಟ ನಟಿಯರೂ ಒಂದಿಲ್ಲೊಂದು ರೀತಿಯಲ್ಲಿ ಇತರರಿಗೆ ಮಾದರಿಯಾಗಿರುತ್ತಾರೆ. ಅವರು ನಡೆದುಕೊಳ್ಳುವ ರೀತಿ ವೀಕ್ಷಕರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹಾಗಾಗಿ ಸಿನಿಮಾ ತಾರೆಯರೂ ಕೂಡ ಅವರ ವರ್ತನೆಯಲ್ಲಿ ಸಾಕಷ್ಟು ಸೌಜನ್ಯವನ್ನು ಉಳಿಸಿಕೊಳ್ಳುತ್ತಾರೆ. ಅಂತವರಲ್ಲಿ ನಾವು ಇಂದು ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಅವರ ಬಗ್ಗೆ ಮಾತನಾಡುತ್ತೀದ್ದೇವೆ. ತನ್ನೊಂದಿಗೆ ಕೆಲಸ ಮಾಡುವ ಜನರೊಂದಿಗೂ ಹೇಗೆ ಪ್ರೀತಿಯಿಮ್ದ ಇರಬಹುದು ಎನ್ನುವುದಕ್ಕೆ ಶ್ರದ್ಧಾ ಒಂದು ಉತ್ತಮ ಉದಾಹರಣೆ.
ಹೌದು, ನಟಿ ಶ್ರದ್ದಾ ಕಪೂರ್ ಇತ್ತೀಚಿಗೆ ತನ್ನ ಮೇಕಪ್ ಆರ್ಟಿಸ್ಟ್ ಮದುವೆಯ ನಿರ್ವಹಣೆಯಲ್ಲಿ ಪಾಲ್ಗೊಂಡಿದ್ದು ಸದ್ಯ ಇನ್ಸ್ಟಾದಲ್ಲಿ ಹೆಚ್ಚು ಸುದ್ದಿ ಮಾಡುತ್ತಿದೆ. ನಟಿ ಶ್ರದ್ಧಾ ಕಪೂರ್ ಅವರ ಸ್ನೇಹಿತೆ ಶ್ರದ್ಧಾ ನಾಯಕ್ ಈ ಬಗ್ಗೆ ತನ್ನ ಇನ್ಸ್ಟಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇತ್ತೀಚಿಗಷ್ಟೇ ಹಸೆಮಣೆ ಏರಿದ ಶ್ರದ್ಧಾ ನಾಯಕ್, ಕಳೆದ 12 ವರ್ಷಗಳಿಂದ ಶ್ರದ್ಧಾ ಕಪೂರ್ ಅವರೊಂದಿಗೆ ವೃತ್ತಿ ಸಹಚರಳಾಗಿ, ಸ್ನೇಹಿತೆಯಾಗಿ ಜೊತೆಗಿದ್ದಾರೆ. ಶ್ರದ್ಧಾ ಅವರ ಮೇಕಪ್ ಆರ್ಟಿಸ್ಟ್ ಆಗಿರುವ ಇವರ ಮದುವೆಯ ನಿರ್ವಹಣೆಯಲ್ಲಿ ಶ್ರದ್ಧಾ ಕಪೂರ್ ಭಾಗವಹಿಸಿದುದರ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ ಶ್ರದ್ಧಾ ನಾಯಕ್.

ತನ್ನ ಮದುವೆ ವಿಡಿಯೋ ಹಂಚಿಕೊಂಡ ಇವರು “ಪ್ರೀತಿಯ ಶ್ರದ್ಧೀ ನಮ್ಮ ವೃತ್ತಿ ಜೀವನದ ಪರಿಚಯವಾಗಿ 12 ವರ್ಷಗಳಾಯ್ತು. ಅಂದಿನಿಂದ ಇಂದಿನವರೆಗೆ ಸ್ನೇಹಿತರಿಂದ ಉತ್ತಮ ಸ್ನೇಹಿತರಾಗಿದ್ದೇವೆ. ಇಂದು ನನ್ನ ಮದುವೆಯನ್ನು ನೀವು ನಿರ್ವಹಿಸಿದ್ದೀರಿ. ನಾವು ಬಹಳ ಮುಂದೆ ಬಂದಿದ್ದೇವೆ. ನಮ್ಮ ಮದುವೆಯ ಕಾರ್ಯ ನಡೆಸಿಕೊಟ್ಟಿದ್ದಕ್ಕೆ ಧನ್ಯವಾದಗಳು” ಎಂದು ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.
ಇದಕ್ಕೆ ಹೊಸ ಜೋಡಿಗೆ ವಿಶ್ ಮಾಡುವುದರ ಜೊತೆಗೆ ಧನ್ಯವಾದವನ್ನೂ ಹೇಳಿರುವ ಶ್ರದ್ಧಾ, “ಡಿಯರ್ ಶ್ರದ್ಧಿ, ನಿಮ್ಮ ಮದುವೆ ನಿರ್ವಹಿಸಲು ಹಾಗೂ ಮಧುವಿನ ಸಹಾಯಕಿಯಾಗಿ ಗೌರವ ಸಲ್ಲಿಸಲು ನನ್ನನ್ನು ಆಮಂತ್ರಿಸಿದ್ದಕ್ಕೆ ಧನ್ಯವಾದಗಳು. ನಮ್ಮಿಬ್ಬರ 12 ವರ್ಷಗಳ ಸ್ನೇಹವನ್ನು ನೆನಪಿಸಿದ್ದೀಯಾ. ನಾನೂ ನಿನ್ನನ್ನು ಪ್ರಿತಿಸುತ್ತೇನೆ’. ಎಂದು ಕಮೆಂಟ್ ಮಾಡಿದ್ದಾಳೆ ಶ್ರದ್ಧಾ ಕಪೂರ್. ಲ್ಯಾವೆಂಡರ್ ಬಣ್ಣದ ಡ್ರೆಸ್ ನಲ್ಲಿ ಇತರ ಸಖಿಯೊಂದಿಗೆ ಕಂಗೊಳಿಸಿದ್ದರು ಶ್ರದ್ಧಾ ಕಪೂರ್. ಸ್ನೇಹಿತೆಯ ಮದುವೆಯಲ್ಲಿ ಶ್ರದ್ಧಾ ಕಪೂರ್ ಲವಲವಿಕೆಯಿಂದ ಪಾಲ್ಗೊಂಡಿದ್ದು, ಎಲ್ಲರ ಗಮನಸೆಳೆಸಿದ್ದಾರೆ.