ಯಪ್ಪಾ ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರ ಗೊಂಡಿರುವ ನಟಿಯರು ಯಾರ್ಯಾರು ಗೊತ್ತೇ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಚಿತ್ರರಂಗವೇ ಎನ್ನುವುದು ಯಾವುದೇ ಧರ್ಮ ಹಾಗೂ ಜಾತಿಯನ್ನು ಮೀರಿದಂತಹ ಕಲೆಗೆ ಸಂಬಂಧಪಟ್ಟಂತಹ ವಿಚಾರ ಇಲ್ಲಿ ಕೇವಲ ಪ್ರತಿಭೆಗೆ ಮಾತ್ರ ಮನ್ನಣೆ ನೀಡಲಾಗುತ್ತದೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಕೆಲವು ನಟಿಯರು ನಟನೆಗೆ ಬಂದನಂತರ ಅಥವಾ ಅದಕ್ಕಿಂತಲೂ ಮುನ್ನ ಧರ್ಮಾಂತರ ವಾಗಿದ್ದಾರೆ. ಹಾಗಿದ್ದರೇ ಈ ಪಟ್ಟಿಯಲ್ಲಿರುವ ನಟಿಯರು ಯಾರು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ಕೊನೆಯವರೆಗೂ ತಪ್ಪದೇ ಓದಿ.

ನಯನತಾರ ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಯನತಾರಾ ಅವರು ಮಲಯಾಳಂ ಮೂಲದ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ ಇವರು ಕೆಲವು ವರ್ಷಗಳ ಹಿಂದಷ್ಟೇ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇನ್ನು ಇವರ ಮೊದಲ ಹೆಸರು ಡಯಾನ ಮರ್ಯನ್ ಕುರಿಯನ್ ಎಂಬುದಾಗಿತ್ತು. ಇನ್ನು ಇವರು ಮೊದಲಿಗೆ ಪ್ರಭುದೇವ ರವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ನಂತರ ಈಗ ನಿರ್ದೇಶಕ ಒಬ್ಬರೊಂದಿಗೆ ಲಿವಿಂಗ್ ಟುಗೆದರ್ ರೆಲೇಶನ್ಶಿಪ್ ನಲ್ಲಿದ್ದಾರೆ. ದಕ್ಷಿಣ ಭಾರತದ ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿ ನಯನತಾರಾ ರವರ ಹೆಸರು ಒಮ್ಮೆಯಾದರೂ ಕೇಳಿಬರುತ್ತದೆ.

ಖುಷ್ಬು ಒಂದು ಕಾಲದ ಬಹುಭಾಷ ತಾರೆಯಾಗಿ ಇದ್ದಂತಹ ನಟಿ ಖುಷ್ಬೂ ರವರು ಹುಟ್ಟಿನಿಂದಲೂ ಮುಸ್ಲಿಂ ಸಮುದಾಯದವರ ಆಗಿದ್ದರು. ಇನ್ನೂ ಅವರು ಸುಂದರ ರವರನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರ ವಾಗಿದ್ದರು. ಇನ್ನು ಕನ್ನಡ ಚಿತ್ರರಂಗದಲ್ಲಿ ಇವರು ಹೆಚ್ಚಿನ ಬಾರಿ ಕಾಣಿಸಿಕೊಂಡಿದ್ದು ಕ್ರೇಜಿಸ್ಟಾರ್ ರವಿಚಂದ್ರನ್ ರವರೊಂದಿಗೆ. ಅಂದಿನ ಕಾಲದಲ್ಲಿ ಬಹುಬೇಡಿಕೆಯ ಬಹುಭಾಷ ತಾರೆ ಆಗಿದ್ದರು ನಟಿ ಖುಷ್ಬು ರವರು.

ಮೋನಿಕಾ ದಕ್ಷಿಣ ಭಾರತದ ಖ್ಯಾತ ನಟಿ ಮೋನಿಕಾ ರವರು ಮೂರು ವರ್ಷಗಳ ಹಿಂದಷ್ಟೇ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಾರೆ. ಇನ್ನು ಇವರು ತಮ್ಮ ಹೆಸರನ್ನು ಎಂ ಜೆ ರಹೀಮಾ ಎಂಬುದಾಗಿ ಬದಲಾಯಿಸಿಕೊಂಡಿದ್ದಾರೆ. ಇನ್ನು ಮತಾಂತರವಾಗುವುದಕ್ಕೆ ಏನು ಕಾರಣ ಎಂಬುದು ಇಂದಿಗೂ ಕೂಡ ತಿಳಿದುಬಂದಿಲ್ಲ.

ನಗ್ಮ ಒಂದು ಕಾಲದಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ಮಿಂಚು ಹರಿಸಿದ ನಟಿ ನಗ್ಮಾ ರವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇವರ ತಂದೆ ಹಿಂದೂ ಹಾಗೂ ತಾಯಿ ಮುಸ್ಲಿಂ ಆಗಿದ್ದರು. ಇನ್ನು ಇವರ ಹೆಸರು ಭಾರತೀಯ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಸೌರವ್ ಗಂಗೂಲಿ ಅವರನ್ನು ಕೂಡ ಕೇಳಿಬಂದಿತ್ತು ಆದರೆ ಇಂದಿಗೂ ಕೂಡ ಇವರು ಯಾರನ್ನು ಮದುವೆಯಾಗದೆ ಒಂಟಿಯಾಗಿ ಉಳಿದುಕೊಂಡಿದ್ದಾರೆ.

ಹೇಮಾಮಾಲಿನಿ ಬಾಲಿವುಡ್ ಚಿತ್ರರಂಗದ ವಿಂಟೇಜ್ ಕಾಲದ ಸ್ಟಾರ್ ನಟಿಯಾಗಿ ಇದ್ದಂತ ಹೇಮಮಾಲಿನಿ ಧರ್ಮೇಂದ್ರ ರವರನ್ನು ಮದುವೆಯಾಗಲು ಇಬ್ಬರು ಕೂಡ ಇಸ್ಲಾಂ ಧರ್ಮಕ್ಕೆ ಮತಾಂತರ ವಾಗಿದ್ದಾರೆ. ಯಾಕೆಂದರೆ ಧರ್ಮೇಂದ್ರ ರವರು ಈಗಾಗಲಿ ಮದುವೆಯಾಗಿದ್ದರು. ಹೀಗಾಗಿ ಹೇಮಮಾಲಿನಿ ಅವರನ್ನು ಮದುವೆಯಾಗಲು ಮೊದಲ ಮದುವೆ ತಡೆಯಾಗಿತ್ತು ಇದಕ್ಕಾಗಿ ಇಬ್ಬರು ಧರ್ಮಾಂತರ ಆಗಿದ್ದಾರೆ. ಇನ್ನು ಇಂದಿಗೂ ಕೂಡ ಇವರಿಬ್ಬರೂ ಸುಖದಿಂದ ಸಂಸಾರ ಮಾಡಿಕೊಂಡಿದ್ದಾರೆ.

ರಾಯಿಷಾ ತಾಕಿಯಾ ಇವರು ಹಿಂದೂಧರ್ಮದಿಂದ ಬಂದವರು ಆಗಿದ್ದರು ಆದರೆ ಅವರ ತಾಯಿ ಕೂಡ ಆಂಗ್ಲೋ-ಇಂಡಿಯನ್ ಆಗಿದ್ದರು. ಇವರು ತಮ್ಮ ಮುಸ್ಲಿಂ ಪತಿಗಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಇವರೇ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಂಡ ಅಂತಹ ನಟಿಯರು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.