ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡ ಕೋಟಿಗೊಬ್ಬ, ಏನಂತೆ ಗೊತ್ತಾ??
ನಮಸ್ಕಾರ ಸ್ನೇಹಿತರೇ ಅಕ್ಟೋಬರ್ ತಿಂಗಳಲ್ಲಿ 100% ಆಸನದ ವ್ಯವಸ್ಥೆಯನ್ನು ಚಿತ್ರಮಂದಿರಗಳಲ್ಲಿ ಸರಕಾರ ಜಾರಿ ಮಾಡಿತ್ತು. ಈ ಸಮಾಚಾರದ ಹಿನ್ನೆಲೆಯಲ್ಲಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಸಲಗ ಹಾಗೂ ಕೋಟಿಗೊಬ್ಬ-3 ಎಂಬ ಎರಡು ಸ್ಟಾರ್ ನಟರ ಸಿನಿಮಾಗಳು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಎರಡು ಚಿತ್ರಗಳು ಕೂಡ ಬಾಕ್ಸಾಫೀಸ್ ನಲ್ಲಿ ಸಾಕಷ್ಟು ಅದ್ದೂರಿಯಾಗಿ ಹಾಗೂ ಭರ್ಜರಿಯಾಗಿ ಕಮಾಲ್ ಮಾಡುತ್ತಿವೆ ಎಂದರೆ ತಪ್ಪಾಗಲಾರದು.
ಆದರೆ ಅದರಲ್ಲೂ ಕೂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ3 ಚಿತ್ರ ಸಾಕಷ್ಟು ದೊಡ್ಡಮೊತ್ತದ ಕಲೆಕ್ಷನ್ ಬಾಕ್ಸ್ ಆಫೀಸ್ ನಲ್ಲಿ ಮಾಡುತ್ತಿದೆ. ಹೀಗಾಗಿ ಈಗಾಗಲೇ ಕೋಟಿಗೊಬ್ಬ3 ಚಿತ್ರ ಯಶಸ್ಸಿನ ಹಾದಿಯಲ್ಲಿ ಸಂತೋಷದಿಂದ ನಡೆಯುತ್ತಿದೆ ಎಂದರೆ ತಪ್ಪಾಗಲಾರದು. ಎಲ್ಲದಕ್ಕಿಂತ ಹೆಚ್ಚಾಗಿ ಕೋಟಿಗೊಬ್ಬ3 ಚಿತ್ರ ಈಗಾಗಲೇ ಬಾಕ್ಸ್ ಆಫೀಸಿನಲ್ಲಿ 50 ಕೋಟಿ ಗಳಿಕೆಯತ್ತ ದಾಪುಗಾಲಿಡುತ್ತಿದೆ ಎಂಬುದೇ ಅತ್ಯಂತ ದೊಡ್ಡ ಸಂತೋಷದ ಸುದ್ದಿ ಎಂದು ಹೇಳಬಹುದಾಗಿದೆ. ಇನ್ನು ಇದೇ ಸಂದರ್ಭದಲ್ಲಿ ಕೋಟಿಗೊಬ್ಬ3 ತಂಡ ಇನ್ನೊಂದು ಹೊಸ ಹಾಗೂ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದೆ.

ಹೌದು ಗೆಳೆಯರೇ ಕೋಟಿಗೊಬ್ಬ3 ಚಿತ್ರ ಈಗ ಮತ್ತೊಂದು ದೊಡ್ಡ ಸುದ್ದಿಯನ್ನು ಹಂಚಿಕೊಂಡಿದೆ. ಅದೇನೆಂದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಸೂರಪ್ಪ ಬಾಬು ನಿರ್ಮಾಣದ ಹಾಗೂ ಶಿವ ಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3 ತೆಲುಗಿನಲ್ಲಿ ಕೋಟಿಕೊಕ್ಕುಡು ಹೆಸರಿನಲ್ಲಿ ಇದೇ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಅಧಿಕೃತ ಘೋಷಣೆ ಯನ್ನು ಚಿತ್ರತಂಡ ಹೊರಡಿಸಿದೆ. ಇಷ್ಟು ಮಾತ್ರವಲ್ಲದೆ ಚಿತ್ರದ ತೆಲುಗು ಟ್ರೈಲರ್ ಕೂಡ ಬಿಡುಗಡೆ ಮಾಡಿದ್ದು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕೋಟಿಗೊಬ್ಬ 3 ಚಿತ್ರ ಕನ್ನಡದಲ್ಲಿ ಸಾಧಿಸಿದಂತೆ ತೆಲುಗಿನಲ್ಲಿ ಕೂಡ ಯಶಸ್ಸನ್ನು ಸಾಧಿಸಲಿ ಎಂಬುದಾಗಿ ಹಾರೈಸೋಣ.