ಚಿರು ಜನ್ಮದಿನದಂದು ದರ್ಶನ್ ಅವರು ಮಾಡಿದ ಕೆಲಸವನ್ನು ಹೇಳಿ ವಿಶೇಷ ಧನ್ಯವಾದ ತಿಳಿಸಿದ ಮೇಘನ್ ರಾಜ್, ಏನಂತೆ ಗೊತ್ತೇ??

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿನ್ನೆ ಅಷ್ಟೇ ನಮ್ಮನ್ನೆಲ್ಲಾ ಅಕಾಲಿಕವಾಗಿ ಅಗಲಿರುವ ಚಿರುಸರ್ಜ ರವರ ಜನ್ಮದಿನವನ್ನು ಅವರ ಪತ್ನಿ ಮೇಘನಾ ರಾಜ್ ಹಾಗೂ ಕುಟುಂಬಸ್ಥರು ಆಚರಿಸಿದರು. ಚಿರು ಸರ್ಜಾ ರವರು ಕನ್ನಡ ಚಿತ್ರರಂಗದಲ್ಲಿ ಯುವ ಉದಯೋನ್ಮುಖ ನಟನಾಗಿ ಸಾಕಷ್ಟು ಯಶಸ್ವಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟಿ ಮೇಘನರಾಜ್ ಅವರನ್ನು ಪ್ರೀತಿಸಿ ಎರಡು ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದಾರೆ.

ಇನ್ನು ನಿನ್ನೆಯಷ್ಟೇ ಚಿರು ಸರ್ಜಾ ರವರ ಜನ್ಮ ದಿನದ ವಿಶೇಷವಾಗಿ ಮೇಘನಾ ರಾಜ್ ರವರು ತಮ್ಮ ಸೋಶಿಯಲ್ ಮೀಡಿಯಾ ಕಾರ್ಯಗಳಲ್ಲಿ ಅವರ ಕುರಿತಂತೆ ವಿಭಿನ್ನ ಕಾನ್ಸೆಪ್ಟ್ ನಲ್ಲಿ ಮೂಡಿ ಬಂದಿರುವ ಫೋಟೋಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಇನ್ನಿತರ ಕುರಿತಂತ ಅಭಿಮಾನಿಗಳು ಸಾಕಷ್ಟು ಭಾವುಕರಾಗಿ ಸಂತೋಷದಿಂದ ಕಾಮೆಂಟ್ ಮಾಡಿದ್ದಾರೆ. ಇನ್ನು ನಿನ್ನೆ ಚಿರು ಸರ್ಜಾ ಅವರ ಜನ್ಮದಿನದ ವಿಶೇಷವಾಗಿ ರಾಜಮಾರ್ತಾಂಡ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ. ಇನ್ನು ಈ ಸಂದರ್ಭದಲ್ಲಿ ಮೇಘನರಾಜ್ ರವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕುರಿತಂತೆ ಕೂಡ ಮಾತನಾಡಿದ್ದಾರೆ.

ಚಿರು ಸರ್ಜಾ ರವರು ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪರಸ್ಪರ ಪಾರ್ಟ್ನರ್ ಎಂದು ಕರೆಯುತ್ತಿದ್ದರು. ಅವರಿಬ್ಬರ ಸಂಬಂಧ ಸಹೋದರರ ಸಂಬಂಧವಾಗಿತ್ತು. ಇಷ್ಟು ಮಾತ್ರವಲ್ಲದೆ ಮೇಘನರಾಜ್ ಹಾಗೂ ಚಿರು ಸರ್ಜಾ ಅವರ ಸಿನಿಮಾ ಕರಿಯರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಹಳಷ್ಟು ಸಹಾಯ ಮಾಡಿದ್ದಾರಂತೆ. ಇದು ಇಷ್ಟಕ್ಕೆ ನಿಲ್ಲದೆ ಇನ್ನುಮುಂದೆ ಬಿಡುಗಡೆಯಾಗಲಿರುವ ರಾಜಮಾರ್ತಾಂಡ ಚಿತ್ರಕ್ಕೆ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬೆಂಬಲವಿದೆ ಎಂದು ಮೇಘನರಾಜ ಅವರು ಹಂಚಿಕೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.