ಸಲಗ ನೋಡಿದ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ದುನಿಯಾ ವಿಜಯ್, ಮತ್ತೊಮ್ಮ ದೂಳೆಬ್ಬಿಸಲು ಮಾಡುತ್ತಿರುವುದಾದ್ರು ಏನು ಗೊತ್ತೇ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ರಾಜ್ಯಾದ್ಯಂತ ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿ ಹಾಗೂ ನಟಿಸಿರುವ ಸಲಗ ಚಿತ್ರ ಬಿಡುಗಡೆಯಾಗಿ ಬಾಕ್ಸಾಫೀಸ್ ನಲ್ಲಿ ಭರ್ಜರಿಯಾಗಿ ಪ್ರದರ್ಶನವನ್ನು ಕಾಣುತ್ತಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಸಂತಸದ ವಿಷಯ ಎಂದು ಹೇಳಬಹುದಾಗಿದೆ. ಯಾಕೆಂದರೆ ಲಾಕ್ಡೌನ್ ನಂತರ ಮೊದಲ ಸ್ಟಾರ್ ಹೀರೋ ಚಿತ್ರವಾಗಿ ಸಲಗ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೊದಲ ಪ್ರಯತ್ನದಲ್ಲೇ ಚಿತ್ರ ಭೂತಪೂರ್ವ ಗೆಲುವನ್ನು ಸಾಧಿಸಿದೆ ಎಂದರೆ ತಪ್ಪಾಗಲಾರದು.

ಈ ಚಿತ್ರವನ್ನು ನಿರ್ಮಾಣ ಮಾಡಿರುವ ಕೆಪಿ ಶ್ರೀಕಾಂತ್ ಅವರು ಈಗಾಗಲೇ ಗೆಲುವಿನ ಖುಷಿಯಲ್ಲಿದ್ದಾರೆ. ಚಿತ್ರವು ಕೂಡ ಈಗಾಗಲೇ ಬಾಕ್ಸಾಫೀಸಿನಲ್ಲಿ ಒಳ್ಳೆಯ ಕಲೆಕ್ಷನ್ ಅನ್ನು ಮಾಡುವಲ್ಲಿ ಯಶಸ್ವಿಯಾಗಿದೆ. ಇನ್ನು ಚಿತ್ರದಲ್ಲಿ ಸಾಕಷ್ಟು ಹಾಸ್ಯಮಯ ದೃಶ್ಯಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದರೆ ತಪ್ಪಾಗಲಾರದು. ಇನ್ನು ಚಿತ್ರ ನೀಡಿರುವ ಸಂದೇಶ ಕೂಡ ಪ್ರೇಕ್ಷಕರಲ್ಲಿ ಮನಸ್ಸಿಗೆ ಆಳವಾಗಿ ಹೋಗಿದೆ. ನಿರ್ದೇಶಕನಾಗಿ ತಾನು ಇಂತಹ ಒಳ್ಳೆಯ ಚಿತ್ರವನ್ನು ಮಾಡಬಹುದು ಎಂಬ ಆತ್ಮವಿಶ್ವಾಸ ದುನಿಯಾವಿಜಯ ರವರಲ್ಲಿ ಇದ್ದಿದ್ದಕ್ಕಾಗಿಯೇ ಇಂತಹ ಒಳ್ಳೆಯ ಚಿತ್ರ ಬಂದಿದೆ.

ಇನ್ನು ಸಲಗ ಚಿತ್ರದ ಯಶಸ್ಸಿನ ನಂತರ ಸಲಗ 2 ಚಿತ್ರ ಬರಬಹುದೇ ಎಂಬುದಾಗಿ ಅಭಿಮಾನಿಗಳ ಹಾಗೂ ಸುದ್ದಿ ಮಾಧ್ಯಮಗಳ ನಿರೀಕ್ಷೆ ಜೋರಾಗಿದೆ ಇದಕ್ಕೆ ಸ್ವತಹ ದುನಿಯಾ ವಿಜಯ ರವರೇ ಉತ್ತರ ನೀಡಿದ್ದಾರೆ. ಹೌದು ಸ್ನೇಹಿತರೆ ಸಂದರ್ಶಕರು ಒಬ್ಬರು ಅಭಿಮಾನಿಗಳು ಸಲಗ 2 ಚಿತ್ರ ಬರಬಹುದೇ ಎಂಬುದಾಗಿ ಕೇಳುತ್ತಿದ್ದಾರೆ ಇದರ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದಾಗಿ ದುನಿಯಾ ವಿಜಯ್ ಅವರ ಬಳಿ ಕೇಳಿ ಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ದುನಿಯಾ ವಿಜಯ್ ನೀವು ಇಷ್ಟೆಲ್ಲ ಹೇಳಿಕೊಂಡ ಮೇಲೆ ಖಂಡಿತವಾಗಿ ಸಲಗ 2 ಮಾಡಿಯೇ ಮಾಡುತ್ತೇನೆ ಎಂಬುದಾಗಿ ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾರೆ. ಸಲಗ 2 ಚಿತ್ರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಹಾಗೂ ನಿರೀಕ್ಷೆಗಳು ಏನೆಂಬುದನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ.

Get real time updates directly on you device, subscribe now.