ಅಸಲಿಗೆ ಕೋಟಿಗೊಬ್ಬ 3 ಹೇಗಿದೆ ಗೊತ್ತೇ?? ಸಂಪೂರ್ಣ ಸಿನಿಮಾ ನೋಡಿ ಮಾಡಿರುವ ವಿಮರ್ಶೆ ಇಲ್ಲಿದೆ ನೋಡಿ.

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಅಂತು-ಇಂತು ಕೂಡ ಕಿಚ್ಚನ ಅಭಿಮಾನಿಗಳಿಗೆ ವಿಜಯದಶಮಿಯ ದಿನದಂದು ಕೋಟಿಗೊಬ್ಬ 3 ಚಿತ್ರದ ಬಿಡುಗಡೆಯ ಹಬ್ಬದೂಟ ಸಿಕ್ಕಿದೆ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ಇಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಕೋಟಿಗೊಬ್ಬ3 ಚಿತ್ರ ಮೂರು ವರ್ಷಗಳ ನಂತರ ಬಿಡುಗಡೆಯಾಗಿದೆ. ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಈಗಾಗಲೇ ಹಲವಾರು ಹೌಸ್ ಫುಲ್ ಬೋರ್ಡ್ ಗಳು ಕೂಡ ಕಾಣಸಿಗುತ್ತದೆ. ಇನ್ನು ಚಿತ್ರದ ಕುರಿತಂತೆ ಹೇಳುವುದಾದರೆ ಮೊದಲಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಪರ್ಫಾರ್ಮೆನ್ಸ್ ಖಂಡಿತವಾಗಿಯೂ ಎಲ್ಲರೂ ಕೂಡ ಇಷ್ಟಪಡುತ್ತಾರೆ.

ಇನ್ನು ಆಶಿಕಾ ರಂಗನಾಥ್ ರವರ ಚಮೇಲಿ ಪಾತ್ರ ಐಟಂ ಡ್ಯಾನ್ಸ್ ಮೂಲಕ ಎಲ್ಲರ ಮನ ಗೆಲ್ಲುವುದು ಗ್ಯಾರೆಂಟಿ. ಚಿತ್ರದ ಮತ್ತೊಂದು ಹೈಲೈಟ್ ಎಂದರೆ ಆರ್ಮುಗ ರವಿಶಂಕರ್ ರವರ ಹಾಸ್ಯ ಪ್ರಧಾನ ವಾದಂತಹ ನಟನೆ. ಇನ್ನು ಚಿತ್ರದ ಮೊದಲ ಐದರಿಂದ ಹತ್ತು ನಿಮಿಷಗಳು ನಿಮಗೆ ನಿಧಾನಗತಿ ಅಂತ ಅನಿಸಿದರೂ ಕೂಡ ಅದಾದನಂತರ ಇಂಟರ್ವಲ್ ನಿಂದ ಮುಂಚೆ ಪ್ರಾರಂಭವಾಗುವ ಕಥೆ ಚಿತ್ರದ ಕೊನೆಯವರೆಗೂ ಕೂಡ ನಿಮ್ಮನ್ನು ಸೀಟಿನ ಕೊನೆಯವರೆಗೆ ನಿಲ್ಲುವಂತೆ ಮಾಡುತ್ತದೆ. ಸತ್ಯ ಶಿವ ಒಂದೇನಾ ಬೇರೆನಾ ಎಂಬ ಎಲ್ಲರ ದೊಡ್ಡದಾದ ಅಂತಹ ಪ್ರಶ್ನೆಗೆ ಈ ಚಿತ್ರದಲ್ಲಿ ಉತ್ತರ ಸಿಗುತ್ತದೆ. ಚಿತ್ರವನ್ನು ಸೂರಪ್ಪ ಬಾಬು ರವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದು ಚಿತ್ರದ ಬಹುತೇಕ ಚಿತ್ರೀಕರಣ ನಡೆದಿರುವುದು ಹೊರದೇಶದಲ್ಲಿ ಆಗಿದೆ.

ಒಟ್ಟಾರೆಯಾಗಿ ಚಿತ್ರದ ಪ್ರತಿಯೊಂದು ದೃಶ್ಯವೂ ಕೂಡ ಶೇಖರ್ ಚಂದ್ರು ರವರ ಛಾಯಾಗ್ರಹಣದಲ್ಲಿ ಶ್ರೀಮಂತವಾಗಿ ಮೂಡಿಬಂದಿದೆ. ನಿರ್ದೇಶಕ ಶಿವ ಕಾರ್ತಿಕ್ ಹೊಸಬರಾದರೂ ಕೂಡ ಸೂಪರ್ ಹಿಟ್ ಚಿತ್ರವನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಅರ್ಜುನ್ ಜನ್ಯ ರವರ ಮ್ಯೂಸಿಕ್ ಕೂಡ ಕೋಟಿಗೊಬ್ಬ3 ಚಿತ್ರಕ್ಕೆ ಪ್ಲಸ್ ಪಾಯಿಂಟ್ ಎಂದು ಹೇಳಬಹುದಾಗಿದೆ. ಒಟ್ಟಾರೆಯಾಗಿ ಸುದೀಪ್ ಅಭಿಮಾನಿಗಳಿಗೆ ಹಾಗೂ ಫ್ಯಾಮಿಲಿ ಪ್ರೇಕ್ಷಕರಿಗೆ ಮನೋರಂಜನೆಯ ಮಹಾ ಪೂರವನ್ನೇ ಹರಿಸುವುದು ಗ್ಯಾರೆಂಟಿ. ಈಗಾಗಲೇ ರಾಜ್ಯಾದ್ಯಂತ ಕೋಟಿಗೊಬ್ಬ3 ಬಾಕ್ಸಾಫೀಸ್ ನಲ್ಲಿ ದಾಖಲೆಯನ್ನು ನಿರ್ಮಿಸುತ್ತಿದೆ. ಕೋಟಿಗೊಬ್ಬ 3 ಚಿತ್ರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.