ಇದ್ದಕ್ಕಿದ್ದ ಹಾಗೇ ತಾನು ಮದುವೆಯಾಗುವ ಹುಡುಗಿಯ ಹೆಸರು ಘೋಷಣೆ ಮಾಡಿದ ಶೈನ್ ಶೆಟ್ಟಿ, ಟಾಪ್ ನಟಿಯನ್ನು ಮದುವೆ ಆಗುತ್ತೇನೆ ಎಂದ ಶೈನ್.
ನಮಸ್ಕಾರ ಸ್ನೇಹಿತರೇ ಕಲರ್ಸ್ ಕನ್ನಡದ ಅದ್ದೂರಿ ಕಾರ್ಯಕ್ರಮ, ಅನುಬಂಧ ಅವಾರ್ಡ್ ಎರಡು ದಿನಗಳ ಪ್ರಸಾರವನ್ನು ಮುಗಿಸಿದೆ. ಈ ಎರಡು ದಿನವೂ ಅತ್ಯಂತ ಅದ್ಭುತವಾಗಿ ಕಾರ್ಯಕ್ರಮ ಮೂಡಿಬಂದಿದೆ. ಕಲರ್ಸ್ ಕನ್ನಡದ ಕಲರ್ ಫುಲ್ ತಾರೆಯರು ಉತ್ತಮ ನೃತ್ಯ ಪ್ರದರ್ಶನವನ್ನು ಕೂಡ ಕೊಟ್ಟಿದ್ದಾರೆ. ಇನ್ನು ಧಾರಾವಾಹಿ ಹಾಗೂ ಕಿರುತೆರೆಯ ರಿಯಾಲಿಟಿ ಶೋಗಳ ಸದಸ್ಯರೂ ಕೂಡ ಅನುಬಂಧದಲ್ಲಿ ಬಂಧವನ್ನು ಬಿಗಿಯಾಗಿಸಿದ್ದಾರೆ.
ಈ ಕಾರ್ಯಕ್ರಮ ಪ್ರಸಾರಕ್ಕೂ ಮೊದಲು ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದೆ. ಅದಕ್ಕಾಗಿ ಹಲವು ದಿನಗಳ ಕಾಲ ಹಲವು ಜನರು ಶ್ರಮಿಸಿದ್ದಾರೆ. ಇನ್ನು ಅನುಬಂಧ ಅವಾರ್ಡ್ ನಲ್ಲಿ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಶೈನ್ ಶೆಟ್ಟಿ ಹುಡುಗಿ ಹೆಸರು ಹೇಳಿದ್ದೇ ಎಲ್ಲರಿಗೂ ಅಚ್ಚರಿ.
ಈ ಮೊದಲು ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್ ಮದುವೆಯಾಗುತ್ತಾರೆ ಎನ್ನುವ ರೂಮರ್ ಕೂಡ ಇತ್ತು. ಅದು ಕೇವಲ ಜನರ ಕಲ್ಪನೆಯಷ್ಟೇ! ಅನುಬಂಧ ಅವಾರ್ಡ್ ಪ್ರೊಮೋ ಸಂದರ್ಭದಲ್ಲಿ ಒಬ್ಬಳು ಹುಡುಗಿ ಶೈನ್ ಶೆಟ್ಟಿಯ ಮೇಲೆ ಬೀಳುತ್ತಾಳೆ. ಅವಳನ್ನು ತಿರಸ್ಕರಿಸಿ ತನಗೆ ಮದುವೆ ಫಿಕ್ಸ್ ಆಗಿದೆ ಎಂದು ಹೇಳಿ ಆಕೆಯ ಹೆಸರು ಸುಕೃತಾ ಎಂದು ಹೇಳಿದ್ದಾರೆ. ನಂತರ ಫೋನ್ ನಲ್ಲಿ ಮುದ್ದು ಎಂದು ಮತನಾಡಿಸುತ್ತ ಹೋದ ವಿಡಿಯೋ ತುಂಬಾನೇ ವೈರಲ್ ಆಗಿದೆ.

ಆದರೆ ಇದು ಸತ್ಯ ಎಂದು ನಂಬುವುದು ಸರಿಯಲ್ಲ. ಮೇಕಿಂಗ್ ವಿಡಿಯೋ ನೋಡಿದರೆ ನಿಮಗೇ ಅರ್ಥವಾಗುತ್ತೆ/ ಶೈನ್ ಶೆಟ್ಟಿ ಬಿಗ್ ಬಾಸ್ ಗೆ ಹೋಗುವುದಕ್ಕೂ ಮೊದಲು ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದ್ದರು. ನಂತರ ಬಿಗ್ ಬಾಸ್ ಪಟ್ಟ ಗೆದ್ದು, ಕೆಲವು ಜಾಹಿರಾತು ಗಳಲ್ಲಿಯೂ ಕಾಣಿಸಿಕೊಂಡರು. ಇತ್ತೀಚಿಗೆ ಶೈನ್ ಐಷಾರಾಮಿ ಕಾರು ಖರೀದಿಸಿದ್ದು ಸುದ್ದಿಯಾಗಿತ್ತು. ಸದ್ಯ ನಿರೂಪಕರಾಗಿಯೂ ಕೂಡ ಶೈನ್ ಮಿಂಚುತ್ತಿದ್ದಾರೆ.