ವಯಸ್ಸು ಮೀರಿ 40 ದಾಟಿದ್ದರೂ ಕೂಡ ಮದುವೆಯಾಗದೆ ಉಳಿದಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಎಂದಾಗ ನಮಗೆ ನೆನಪಿಗೆ ಬರುವುದು ಅಲ್ಲಿನ ಹಂಗಾಮ ಹಾಗೂ ಗ್ಲಾಮರಸ್ ದುನಿಯಾ. ಬಾಲಿವುಡ್ ಹೆಸರಾಗಿರುವುದು ಈ ವಿಷಯಗಳಾಗಿ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಇನ್ನು ಬಾಲಿವುಡ್ ಚಿತ್ರರಂಗದ ನಟಿಯರ ಮದುವೆ ಹಾಗೂ ಪ್ರೇಮ ಸಂಬಂಧಗಳ ವಿಚಾರದ ಕುರಿತಂತೆ ಸುದ್ದಿಮಾಧ್ಯಮಗಳು ತಾವೇ ಸುದ್ದಿ ಕ್ರಿಯೇಟ್ ಮಾಡಿಕೊಂಡು ಸುದ್ದಿ ಮಾಡುತ್ತವೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ.

ಆದರೆ ಇಂದು ನಾವು ಹೇಳಲು ಹೊರಟಿರುವುದು ಮದುವೆ ವಯಸ್ಸು ಮೀರಿದರೂ ಕೂಡ ಮದುವೆಯಾಗದೆ ಸಿಂಗಲಾಗಿ ಉಳಿದುಕೊಂಡಿರುವ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಹಾಗಿದ್ದರೆ ಮದುವೆ ವಯಸ್ಸು ಮೀರಿದ್ದರು ಕೂಡ ಇನ್ನೂ ಕೂಡ ಒಂಟಿಯಾಗಿರುವ ಬಾಲಿವುಡ್ ಚಿತ್ರರಂಗದ ಖ್ಯಾತ ಸುಂದರ ನಟಿಯರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೆ ಕೊನೆಯವರೆಗೂ ಓದಿ.

ತಬು ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಆಗಿರುವ ತರುವವರಿಗೆ ಈಗಾಗಲೇ 50 ವರ್ಷ ಆಗುತ್ತಾ ಬಂದಿದೆ. ಹಿಂದೆ ಅವರು ಯುವತಿ ಆಗಿದ್ದ ಸಂದರ್ಭದಲ್ಲಿ ನಿರ್ಮಾಪಕ ಸಜಿದ್ ನಡಿಯಾಡ್ವಾಲ ಹಾಗೂ ಸೌತ್ ಇಂಡಿಯಾದ ಸೂಪರ್ಸ್ಟಾರ್ ನಟನಾಗಿದ್ದ ನಾಗಾರ್ಜುನ ರವರ ಜೊತೆಗೆ ಸಾಕಷ್ಟು ಸುದ್ದಿಗಳು ಕೇಳಿ ಬಂದಿದ್ದವು. ಎಲ್ಲದಕ್ಕಿಂತ ಹೆಚ್ಚಾಗಿ ಸಾಜಿದ್ ನಾಡಿಯಾಡ್ವಾಲಾ ಜೊತೆಗೆ ಮದುವೆಯಾಗಿದ್ದಾರೆ ಎಂಬ ಸುದ್ದಿಗಳು ಕೂಡ ಸುದ್ದಿ ಮಾಧ್ಯಮಗಳಲ್ಲಿ ಕೇಳಿಬಂದಿದ್ದವು. ಆದರೆ ತಬುರವರು ಇದುವರೆಗೂ ಕೂಡ ಮದುವೆಯಾಗದೆ ಒಬ್ಬಂಟಿಯಾಗಿ ಉಳಿದುಕೊಂಡಿದ್ದಾರೆ ಎಂಬುದು ಸತ್ಯ ಅಂಶವಾಗಿದೆ.

ದಿವ್ಯ ದತ್ತ ನಟಿ ದಿವ್ಯ ದತ್ತ ಅವರು ಬಾಲಿವುಡ್ ಹಾಗೂ ಪಂಜಾಬ್ ಸಿನಿಮಾರಂಗದ ಅತ್ಯಂತ ಜನಪ್ರಿಯ ನಟಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪೋಷಕ ನಟಿಯಾಗಿ ಕೂಡ ಬಾಲಿವುಡ್ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ದಿವ್ಯ ದತ್ತ ರವರಿಗೆ ವಯಸ್ಸು 43 ಆದರೂ ಕೂಡ ಇನ್ನೂ ಕೂಡ ಮದುವೆಯಾಗಿಲ್ಲ. ಬಾಲಿವುಡ್ ಎಂದಮೇಲೆ ನಟಿಯ ಹೆಸರು ಬೇರೆಯಲ್ಲ ಸ್ಟಾರ್ ನಟರ ಜೊತೆಗೆ ತಳುಕು ಹಾಕಿಕೊಳ್ಳುವುದು ಮಾಮೂಲಿ ತಾನೇ. ಅದೇ ತರಹ ದಿವ್ಯ ದತ್ತ ರವರ ಹೆಸರು ಕೂಡ ಸಾಕಷ್ಟು ದೊಡ್ಡ ನಟರ ಜೊತೆಗೆ ತಳುಕು ಹಾಕಿಕೊಂಡಿದ್ದರು ಇದುವರೆಗೂ ಯಾರನ್ನೂ ಮದುವೆಯಾಗಿಲ್ಲ.

ನಗ್ಮ ದಕ್ಷಿಣ ಭಾರತ ಚಿತ್ರರಂಗದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದು ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟು ಅಲ್ಲಿ ಕೂಡ ಯಶಸ್ವಿಯಾದ ನಟಿ ನಗ್ಮಾ. ಇನ್ನು ಸಿನಿಮಾ ಜಗತ್ತಿನಲ್ಲಿ ಯಾರೂ ಕಾಣದಂತಹ ಯಶಸ್ಸನ್ನು ಕಂಡರು ಕೂಡ ನಗ್ಮಾ ರವರು ವೈಯಕ್ತಿಕ ಜೀವನದಲ್ಲಿ ವಿಫಲರಾಗಿದ್ದರು. ಹೌದು ಸ್ನೇಹಿತರೆ ನಗ್ಮಾ ರವರು ಟೀಮ್ ಇಂಡಿಯಾದ ಕಪ್ತಾನನಾಗಿ ಇದ್ದಂತಹ ಸೌರವ್ ಗಂಗೂಲಿ ಅವರೊಂದಿಗೆ ಪ್ರೇಮಸಂಬಂಧ ದಲ್ಲಿದ್ದರು ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಇಂದಿಗೂ ಕೂಡ ಅವರು ಮದುವೆಯಾಗದೆ ಆ ಸುದ್ದಿ ಸುಳ್ಳು ಎಂಬುದನ್ನು ಸಾಬೀತುಪಡಿಸಿದ್ದಾರೆ. ಇನ್ನು ಕೇವಲ ಸೌರವ್ ಗಂಗುಲಿ ಮಾತ್ರವಲ್ಲದೆ ಹಲವಾರು ಬಾಲಿವುಡ್ ನಟರೊಂದಿಗೆ ಕೂಡ ನಗ್ಮಾ ರವರ ಹೆಸರು ಕೇಳಿಬಂದಿತ್ತು.

ಪರ್ವೀನ್ ಬಾಬಿ ನಟಿ ಪರ್ವೀನ್ ಬಾಬಿ ರವರು ಬಾಲಿವುಡ್ ಚಿತ್ರರಂಗದಲ್ಲಿ 70ರ ದಶಕದಲ್ಲಿ ಪ್ರೇಕ್ಷಕರ ಮನಗೆದ್ದ ಅಂತಹ ನಟಿಯಾಗಿದ್ದರು. ಇನ್ನು ಅವರ ಹೆಸರಿನೊಂದಿಗೆ ಬಾಲಿವುಡ್ ಚಿತ್ರರಂಗದ ಅನಭಿಷಕ್ತ ರಾಜ ಎಂದೇ ಖ್ಯಾತರಾಗಿರುವ ಅಮಿತಾಬಚ್ಚನ್ ರವರು ಸೇರಿದಂತೆ ಹಲವಾರು ನಟರ ಹೆಸರುಗಳು ತಳುಕು ಹಾಕಿಕೊಂಡಿತ್ತು. ಇನ್ನೊಮ್ಮೆ ಸಂದರ್ಶನವೊಂದರಲ್ಲಿ ಪರ್ವೀನ್ ರವರು ಒಬ್ಬ ಖ್ಯಾತ ನಟ ನನ್ನನ್ನು ಮುಗಿಸುವ ಪ್ಲಾನ್ ಮಾಡಿದ್ದರು ಎಂಬುದಾಗಿ ಕೂಡ ಹೇಳಿದ್ದರು. ಇನ್ನು ಪರ್ವೀನ್ ಬಾಬಿ ರವರು ಕೊನೆ ಉಸಿರು ಎಳೆಯುವಾಗಲು ಕೂಡ ಅವರು ಒಂಟಿಯಾಗಿ ಇದ್ದರು.

ಸುರಯ್ಯ ಬಾಲಿವುಡ್ ಚಿತ್ರರಂಗದ 40 ಹಾಗೂ 50ರ ದಶಕದಲ್ಲಿ ಸೂಪರ್ ಹಿಟ್ ನಟಿಯಾಗಿ ಇದ್ದಂತಹ ಸುರಯ್ಯ ಅವರ ಹೆಸರು ಅಂದಿನ ಕಾಲದ ಸ್ಟಾರ್ ನಟನಾಗಿದ್ದಂತಹ ದೇವ್ ಆನಂದ್ ಅವರ ಜೊತೆಗೆ ಕೇಳಿಬಂದಿತ್ತು. ಇನ್ನು ಇವರಿಬ್ಬರು ಮದುವೆಯಾಗುವ ಆಸಕ್ತಿಯನ್ನು ಕೂಡ ಹೊಂದಿದ್ದರು ಆದರೆ ಇವರಿಬ್ಬರ ನಡುವೆ ಸಮಸ್ಯೆಯಾಗಿ ಬಂದಿದ್ದು ಅವರಿಬ್ಬರ ಧರ್ಮದ ಅಂತರ. ಈ ಕಾರಣದಿಂದಾಗಿ ಸುರಯ್ಯ ರವರ ಮನೆಯಲ್ಲಿ ಅವರ ವಿರುದ್ಧವಾಗಿ ಸಾಕಷ್ಟು ಮಾತುಗಳು ಕೂಡ ಕೇಳಿಬಂದಿದ್ದವು ಹೀಗಾಗಿ ಕೊನೆಯವರೆಗೂ ಕೂಡ ಸುರಯ್ಯ ರವರು ಒಂಟಿಯಾಗಿ ಉಳಿದುಕೊಂಡರು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.