ರಾಜ್ಯಾದ್ಯಂತ ಬಿಡುಗಡೆಯಾಗಿರುವ ದುನಿಯಾ ವಿಜಯ್ ನಿದೇಶಿಸಿ ನಟನೆ ಮಾಡಿರುವ ಚಿತ್ರದ ಮೊದಲ ರಿವ್ಯೂ. ಹೇಗಿದೆ ಗೊತ್ತಾ ಮೂವಿ??

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕಳೆದ ಒಂದು ವರ್ಷಗಳಿಂದ ಕೂಡ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು ಎಂಬುದು ನಿಮಗೆಲ್ಲಾ ಗೊತ್ತಿರುವ ವಿಷಯವಾಗಿದೆ. ಹೌದು ಸ್ನೇಹಿತರೆ ಈ ಮಹಾಮಾರಿ ಯಿಂದಾಗಿ ಕನ್ನಡ ಚಿತ್ರರಂಗ ನಿಂತ ನೀರಿನಂತೆ ನಿಶ್ಚಲವಾಗಿತ್ತು. ಆದರೆ ಇಂದು ದುನಿಯಾ ವಿಜಯ್ ನಟನೆಯ ಸಲಗ ಚಿತ್ರ ಬಿಡುಗಡೆಯಾಗಿ ಮತ್ತೊಮ್ಮೆ ಕನ್ನಡ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದು ಚಿತ್ರವನ್ನು ಕುಟುಂಬ ಸಮೇತರಾಗಿ ವೀಕ್ಷಣೆ ಮಾಡುವಂತಾಗಿದೆ.

ಹೌದು ಸ್ನೇಹಿತರೆ ಇಂದು ದುನಿಯಾ ವಿಜಯ ನಟಿಸಿ ನಿರ್ದೇಶಿಸಿರುವ ಕೆಪಿ ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರ ರಾಜ್ಯಾದ್ಯಂತ ಅದ್ದೂರಿಯಾಗಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದು ಎಲ್ಲೆಡೆ ಕನ್ನಡ ಸಿನಿ ರಸಿಕರು ಹಾಗೂ ಅಭಿಮಾನಿಗಳು ಚಿತ್ರವನ್ನು ಸಂಭ್ರಮದಿಂದ ಬಂದು ವೀಕ್ಷಿಸಿದ್ದಾರೆ. ಇನ್ನು ಸಲಗ ಚಿತ್ರದ ಒನ್ ಲೈನ್ ಸ್ಟೋರಿ ಹೇಳುವುದಾದರೆ, ಸಲಗ ಎಂಬ ರೌಡಿ ತನ್ನ ಎದುರಾಳಿಗಳನ್ನು ಒಬ್ಬೊಬ್ಬರನ್ನಾಗಿ ಮುಗಿಸಲು ಹೋಗುತ್ತಾನೆ ಆಗ ಆತನಿಗೆ ಎದುರಾಗುವುದೇ ಡಾಲಿ ಧನಂಜಯ್ ನಿರ್ವಹಿಸಿರುವ ಪಾತ್ರವಾಗಿರುವ ಸಾಮ್ರಾಟ್ ಎಂಬ ಖಡಕ್ ಪೊಲೀಸ್.

ಇವರಿಬ್ಬರ ಆಟದಲ್ಲಿ ಗೆಲ್ಲುವುದು ಯಾರು ಸಲಗ ತನ್ನ ಎದುರಾಳಿಗಳನ್ನು ಮುಗಿಸಲು ಇರುವ ಕಾರಣಗಳೇನು ಎಂಬುದು ಈ ಚಿತ್ರದ ಸ್ವಾರಸ್ಯಕರ ಅಂಶಗಳು ಎಂದು ಹೇಳಬಹುದಾಗಿದೆ. ಇನ್ನು ಈ ಚಿತ್ರ ಸಂಪೂರ್ಣವಾಗಿ ಭೂಗತ ಲೋಕದ ಕಥೆಯನ್ನು ಆಧರಿಸಿದ್ದು ಇಲ್ಲಿ ಹಲವಾರು ದೃಶ್ಯಗಳನ್ನು ಬ್ಲರ್ ಮಾಡಲಾಗಿದೆ. ಇನ್ನು ಎಲ್ಲದಕ್ಕಿಂತ ಹೆಚ್ಚಾಗಿ ಮೊದಲಾಗಿ ಹೋಗಬೇಕಾಗಿದ್ದು ತಮ್ಮ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ದುನಿಯಾ ವಿಜಯ್ ರವರು ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದಾಗಿದೆ.

ದುನಿಯಾ ವಿಜಯ್ ನಿರ್ದೇಶಕನಾಗಿ ಎಲ್ಲಾ ಪಾತ್ರಗಳಿಗೂ ಕೂಡ ಮಹತ್ವವನ್ನು ನೀಡಿ ಆಯಾಯ ಪಾತ್ರಗಳನ್ನು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವಂತೆ ಮಾಡಿದ್ದಾರೆ. ಇನ್ನು ನಿರ್ದೇಶಕರಾಗಿರುವ ದುನಿಯಾ ವಿಜಯ್ ಅವರು ತಮ್ಮ ಪಾತ್ರಕ್ಕೆ ಹೆಚ್ಚಿನ ಬಿಲ್ಡಪ್ ಅನ್ನು ನೀಡಿಲ್ಲ. ಆದರೂ ಕೂಡ ನಾಯಕ ನಟನಾಗಿರುವ ಕಾರಣದಿಂದಾಗಿ ಸಲಗ ಪಾತ್ರಕ್ಕೆ ಎಷ್ಟರ ಮಟ್ಟಿಗೆ ಮಹತ್ವ ನೀಡಬೇಕು ಅಷ್ಟನ್ನು ಅಚ್ಚುಕಟ್ಟಾಗಿ ನೀಡಿದ್ದಾರೆ. ಇನ್ನು ಇದರಲ್ಲಿ ಒಂದು ಒಳ್ಳೆಯ ಸಾಮಾಜಿಕ ಸಂದೇಶವನ್ನು ಕೂಡ ದುನಿಯಾವಿಜಯ ರವರು ನೀಡಿದ್ದಾರೆ

ಇನ್ನು ಪೋಲಿಸ್ ರವರು ಹಲವಾರು ಬಾರಿ ರೌಡಿಸಂ ನಿಂದ ಒಬ್ಬ ವ್ಯಕ್ತಿ ಬರ ಬಂದಿದ್ದರು ಕೂಡ ಅವನನ್ನು ಮತ್ತೆ ಪರೇಡ್ಗೆ ಕರೆಯುವ ಮೂಲಕ ಆತನನ್ನು ಮತ್ತೆ ಭೂಗತ ಲೋಕಕ್ಕೆ ದಾಖಲು ಮಾಡಲು ಯತ್ನಿಸುತ್ತಾರೆ. ಇದೇ ತರಹದ ಪೊಲೀಸ್ ಇಲಾಖೆಯ ಹಲವಾರು ಹುಳುಕುಗಳನ್ನು ದುನಿಯಾ ವಿಜಯ್ ರವರು ನಿರ್ದೇಶಕನಾಗಿ ಸಲಗ ಚಿತ್ರದ ಮೂಲಕ ಚಿತ್ರದಲ್ಲಿ ಬಿಂಬಿಸಿದ್ದಾರೆ. ಒಟ್ಟಾರೆಯಾಗಿ ಈ ಚಿತ್ರದ ಕುರಿತಂತೆ ಹೇಳುವುದಾದರೆ ಮಾಸ್ ಪ್ರೇಕ್ಷಕರಿಗೆ ಖಂಡಿತವಾಗಿಯೂ ಈ ಚಿತ್ರ ರಸದೌತಣವನ್ನು ನೀಡುವಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಇಲ್ಲಿ ಡಾಲಿ ಧನಂಜಯ್ ಹಾಗೂ ಸಂಜನಾ ಆನಂದ್ ಅವರ ಪಾತ್ರವು ಕೂಡ ಪ್ರಮುಖ ಪಾತ್ರವಾಗಿ ಕಾಣಿಸಿಕೊಳ್ಳುತ್ತದೆ. ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ ಚಿತ್ರದ ಮತ್ತೊಂದು ಬಲಿಷ್ಠ ಅಂಶ ಎಂದು ಹೇಳಬಹುದಾಗಿದೆ. ಸಲಗ ಚಿತ್ರ ಮತ್ತೊಮ್ಮೆ ಕನ್ನಡ ಚಿತ್ರರಂಗ ಕಳೆದುಕೊಂಡಿದ್ದ ವೈಭವವನ್ನು ಮರುಕಳಿಸುವ ರಲ್ಲಿ ಖಂಡಿತವಾಗಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಚಿತ್ರವನ್ನು ನೀವು ಕೂಡ ವೀಕ್ಷಿಸಿದ್ದಾರೆ ಖಂಡಿತವಾಗಿಯೂ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.