ಒಂದು ಪಂದ್ಯ ಆಡದೇ ಇದ್ದರೂ ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಯುವ ಬೌಲರ್, ಯಾರು ಗೊತ್ತೇ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ಕೊನೆಯ ಹಂತ ಸಮೀಪವಾದ ನಂತರ ಈಗ ಭಾರತ ತಂಡ ಮಹತ್ವದ ವಿಶ್ವಕಪ್ ಗೆ ಅಂತಿಮ ತಯಾರಿ ನಡೆಸುತ್ತಿದೆ. ಈ ಹಿಂದೆಯೇ ಹದಿನೈದು ಆಟಗಾರರು ಹಾಗೂ.ಮೂವರು ಮೀಸಲು ಆಟಗಾರರನ್ನ ಘೋಷಿಸಿತ್ತು. ಆದರೇ ಆ ಘೋಷಿಸಿದ ತಂಡದಲ್ಲಿ ಕೆಲವು ಆಟಗಾರರು ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದರು. ಅವರ ಬದಲಿ ಸದ್ಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಆಟಗಾರರನ್ನ ಸೇರಿಸಿಕೊಳ್ಳಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾದ ಆಗ್ರಹ ವ್ಯಕ್ತವಾಗಿತ್ತು. ಆದರೇ ಆ ಆಗ್ರಹವನ್ನ ಸಂಪೂರ್ಣ ಅಲ್ಲಗಳೆದ ಬಿಸಿಸಿಐ ಆಯ್ಕೆ ಸಮಿತಿ, ಈಗಾಗಲೇ ಘೋಷಿಸಿರುವ ತಂಡದಲ್ಲಿ ನಾವು ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಘಂಟಾಘೋಷವಾಗಿ ಘೋಷಿಸಿತ್ತು.

ಆದರೇ ಐಪಿಎಲ್ ನ ದ್ವಿತಿಯಾರ್ಧದಲ್ಲಿ ಕೆಲವು ಗಮನ ಸೆಳೆಯುವ ಪ್ರದರ್ಶನ ಆಟಗಾರರಿಂದ ಉಂಟಾಗಿತ್ತು. ಆರ್ಸಿಬಿಯ ಪರ್ಪಲ್ ಪಟೇಲ್ ಎಂದು ಖ್ಯಾತಿಗಳಿಸಿದ ವೇಗಿ ಹರ್ಷಲ್ ಪಟೇಲ್ ಐಪಿಎಲ್ ನಲ್ಲಿ ಯಾರೂ ಮಾಡದ ಸಾಧನೆ ಮಾಡಿದರು. ಅನ್ ಕ್ಯಾಪ್ ಆಟಗಾರನೊಬ್ಬ ಇದೇ ಮೊದಲ ಭಾರಿಗೆ 32 ವಿಕೇಟ್ ಗಳನ್ನ 15 ಪಂದ್ಯಗಳಲ್ಲಿ ಗಳಿಸಿದ್ದು ಸಾಧನೆಯಾಗಿದೆ. ಅದೇ ರೀತಿ ದೆಹಲಿ ತಂಡದ ಮತ್ತೊಬ್ಬ ಅನ್ ಕ್ಯಾಪ್ಡ್ ಆಟಗಾರ ಆವೇಶ್ ಖಾನ್ ಸಹ 23 ವಿಕೇಟ್ ಪಡೆದು ಪರ್ಪಲ್ ಕ್ಯಾಪ್ ರೇಸ್ ನಲ್ಲಿ ಏರಡನೇ ಸ್ಥಾನ ಪಡೆದರು. ಇದು ಸಹ ದಾಖಲೆಯಾಗಿದೆ.

ಹಾಗಾಗಿ ಈಗ ಬಿಸಿಸಿಐ ಯುವ ವೇಗಿ ಆವೇಶ್ ಖಾನ್ ರನ್ನ ಐಸಿಸಿ ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡದ ನೆಟ್ ಬೌಲರ್ ಆಗಿ ಆಯ್ಕೆ ಮಾಡಿದೆ. ಅದರ ಜೊತೆಗೆ ಕೆಕೆಆರ್ ನ ವೆಂಕಟೇಶ ಅಯ್ಯರ್ ‌ಸಹ ಪಾಲ್ಗೊಳ್ಳುವ ನೀರಿಕ್ಷೆಯಲ್ಲಿದೆ. ಆದರೇ ಯು.ಎ.ಇ ಲೀಗ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಯುಜವೇಂದ್ರ ಚಾಹಲ್ ರವರಿಗೆ ತಂಡದಲ್ಲಿ ಸ್ಥಾನ ದೊರೆಯದಿರುವುದು ಅಚ್ಚರಿಯಾಗಿದೆ. ಇದೇ ಅಕ್ಟೋಬರ್ 24 ರಂದು ಭಾರತ ತನ್ನ ಸಾಂಪ್ರದಾಯ ಎದುರಾಳಿ ಪಾಕಿಸ್ತಾನದ ವಿರುದ್ದ ಮೊದಲ ಪಂದ್ಯವನ್ನು ಆಡಲಿದೆ. ನಾಯಕರಾಗಿ ವಿರಾಟ್ ಕೊಹ್ಲಿ ಇದೇ ಕೊನೆಯ ಟಿ 20 ಸರಣಿಯಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.