ಒಂದಾಗುತ್ತಿರುವ ಮತ್ತೊಂದು ತಾರಾ ಜೋಡಿ, ಸಿಹಿ ಸುದ್ದಿ ಹಂಚಿಕೊಂಡ ವಿಹರಿಕಾ. ಹುಡುಗ ಕೂಡ ಖ್ಯಾತ ಕಲಾವಿದ. ಯಾರು ಗೊತ್ತೇ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಕನ್ನಡ ಕಿರುತೆರೆಯ ಕೆಲವು ನಟ ನಟಿಯರು ಧಾರಾವಾಹಿಯ ಪಾತ್ರಗಳಲ್ಲಿ ಮಾತ್ರವಲ್ಲದೆ, ನಿಜ ಜೀವನದಲ್ಲಿಯೂ ಒಂದಾಗುತ್ತಿರುವುದು ಸಂತಸದ ವಿಚಾರ. ಸಾಮಾನ್ಯವಾಗಿ ನಟನೆಯಲ್ಲಿ ಇರುವವರಿಗೆ ನಟನೆ ಗೊತ್ತಿರುವವರು ಅಥವಾ ಕಲೆಯನ್ನು ಗೌರವಿಸುವವರೇ ಜೊತೆಯಾದರೆ ಚೆನ್ನ. ಇಲ್ಲವಾದಲ್ಲಿ ಮದುವೆಯಾದ ನಂತರ ನಟನೆಯ ವಿಷಯಕ್ಕೆ ದಾಂಪತ್ಯದಲ್ಲಿ ಕಲಹ ಉಂಟಾಗುವುದು ಹೊಸತೇನಲ್ಲ! ಹೀಗೆ ನಟಿ ವಿಹಾರಿಕಾ ಕೂಡ ತನ್ನ ಮೆಚ್ಚಿನ ಹುಡುಗನ ಜೊತೆ ನೂತನ ಜೀವನ ಆರಂಭಿಸಿದ್ದಾರೆ.

ಕಲರ್ಸ್ ವಾಹಿನಿಯಲ್ಲಿ ರಾತ್ರಿ ೯ ಕ್ಕೆ ಪ್ರಸಾರವಾಗುವ ನನ್ನರಸಿ ರಾಧೆ ಧಾರಾವಾಹಿ ಇದೀಗ ತುಂಬಾನೇ ಫೇಮಸ್ ಆಗ್ತಾ ಇದೆ. ಇದರ ನೋಡುಗರ ಬಳಗ ಕೂಡ ಜಾಸ್ತಿಯಾಗಿವೆ. ಮೊದಮೊದಲು ಬೋರಿಂಗ್ ಅಂತ ಅನ್ನಿಸ್ತಾ ಇದ್ದ ಈ ಧಾರಾವಾಹಿ ಇದ್ಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಂಡು ಮುಖ್ಯ ಹಂತಕ್ಕೆ ಬಂದು ತಲುಪಿದೆ. ಇನ್ನು ಅಗಸ್ತ್ಯ ಇಂಚರಾಳ ಮುದ್ದು, ಪೆದ್ದು ಜಗಳಗಳು ತುಂಬಾನೇ ನೈಜ ಎನ್ನಿಷ್ಟುವಷ್ಟು ಉತ್ತಮವಾಗಿ ಚಿತ್ರೀಕರಿಸಲಾಗುತ್ತಿದೆ. ಇನು ಅಮ್ಮನ ಹುಡುಕಾಟದಲ್ಲಿದ್ದ ಅಗಸ್ತ್ಯನಿಗೆ ಅಮ್ಮನವರೇ ದಾರಿ ತೋರಿದ ಮಹಾ ಸಂಚಿಕೆಯೂ ಪ್ರಸಾರವಾಗಿತ್ತು.

ಇನ್ನು ಧಾರಾವಾಹಿ ಎಂದ ಮೇಲೆ ನೆಗೆಟಿವ್ ಪಾತ್ರಗಳು ಇರಲೇ ಬೇಕು ಅಲ್ಲವೇ? ಅದರಲ್ಲೂ ಹೆಣ್ಣುಮಕ್ಕಳೇ ವಿಲನ್ ಗಳಾಗುವುದು ಸಾಮಾನ್ಯ. ಹಾಗೆ ಇಂಚರಾ ಮಾವನ ಮಗಳಾಗಿ ಇಂಚರಾಗೆ ಕಿರಿಕ್ ಮಾಡುವ ಶಿವಾನಿ ಪಾತ್ರದಲ್ಲಿ ನಟಿಸಿದ್ದು ನಟಿ ವಿಹಾರಿಕ, ಮೊದಲ ಬಾರಿಗೆ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರೂ ಕೂಡ ಉತ್ತಮ ಅಭಿನಯವನ್ನೇ ತೋರಿದ್ದಾರೆ.

ಇನ್ನು ನಿಜ ಜೀವನದಲ್ಲಿ ಹಸೆಮಣೆ ಏರಲು ಹೊರಟಿರುವ ವಿಹಾರಿಕಾಗೆ ಜೋಡಿಯಾಗುತ್ತಿರುವುದು ಕಿರಣ್. ಟೆಂಡರ್ ಆಪ್ ಮೂಲಕ ಪರಿಚಯವಾದ ಇವರು ಮನೆಯವರನ್ನು ಒಪ್ಪಿಸಿ ಅಕ್ಟೋಬರ್ ೧೦ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಿರಣ್ ಕೂಟ ನಟನೆಯಲ್ಲಿದ್ದು, ಕಿರಣ್ ಸಹ ನಟ, ಆತ್ಮಬಂಧನ ಧಾರಾವಾಹಿಯಲ್ಲಿ ಅಘೋರಿ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದರು. ನಂತರ ರಾಮಾರ್ಜುನ್, ಮಾರ್ಟಿನ್ ಹಾಗೂ ಇನ್ನಿತರ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಇನ್ಸ್ಟಾಗ್ರಾಮ್ ನಲ್ಲಿ ವಿಹಾರಿಕಾ ಎಂಗೆಜ್ ವಿಷಯ ತಿಳಿದ ಜನರು ಶುಭ ಹಾರೈಸಿದ್ದಾರೆ.

Get real time updates directly on you device, subscribe now.