ಹೊಸ ಧಾರವಾಹಿ ಲಕ್ಷಣ ದಲ್ಲಿ ಮತ್ತೊಂದು ತಿರುವು, ಮಹತ್ವದ ತಿರುವಿನಲ್ಲಿ ಬಯಲಾದ ಮತ್ತೊಂದು ಸತ್ಯ ಏನು ಗೊತ್ತೇ??

35

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಕ್ಷತ್ರ ತನ್ನ ಮಗಳಲ್ಲ ಅಂತ ತುಕಾರಾಂ ಗೆ 23 ವರ್ಷಗಳಿಂದ ಅನ್ನಿಸುತ್ತಲೇ ಇದೆ. ಆದರೆ ಇದನ್ನು ಸಾಬೀತು ಮಾಡಲು ಮಾತ್ರ ದಾರಿ ಗೊತ್ತಿರಲಿಲ್ಲ, ಇನ್ನು ತನ್ನ ಜೊತೆಗಿರುವ ಹುಡುಗಿ ಕಪ್ಪು ಎನ್ನುವ ಕಾರಣಕ್ಕೆ ತನ್ನ ಮಗಳೇ ಅಲ್ಲ ಎನ್ನುತ್ತಿದ್ದ ತುಕಾರಾಂ. ಕೊನೆಗೂ ನಕ್ಷತ್ರ ಡಿ ಎನ್ ಎ ಟೆಸ್ಟ್ ಗೆ ಒಪ್ಪು ಟೆಸ್ಟ್ ಮಾಡಿಸಿದರೆ ಬಂದಿರುವ ಉತ್ತರ ಮಾತ್ರ ಶಾಕಿಂಗ್ ಆಗಿತ್ತು. ಹೌದು ನಕ್ಷತ್ರ ತನ್ನ ಮಗಳೇ ಅಲ್ಲ ಎನ್ನುವ ತುಕಾರಾಂ ಸಂಶಯ ನಿಜವಾಗಿತ್ತು!

ಇದು ಕಲರ್ಸ ನಲ್ಲಿ ಹೊಸದಾಗಿ ಶುರುವಾದ ಲಕ್ಷಣ ಧಾರಾವಾಹಿಯ ಕಥೆ. ಹೌದು ಲಕ್ಶಣ ಧಾರಾವಾಹಿ ಸಾಕಷ್ಟು ತಿರುವುಗಳನ್ನು ಕಂಡಿದೆ. ಸ್ವತಃ ಜಗನ್ನಾಥ್ ಅವರೇ ನಿರ್ಮಿಸಿ ನಟಿಸುತ್ತಿರುವ ಧಾರಾವಾಹಿ ಲಕ್ಷಣ. ಇದರಲ್ಲಿ ಪ್ರಥಮ ಬಾರಿಗೆ ತೆರೆ ಮೇಲೆ ಕಾನಿಸಿಕೊಂಡ ವಿಜಯಲಕ್ಷ್ಮಿ ನಕ್ಷತ್ರಳಾಗಿ ಮಿಂಚುತ್ತಿದ್ದಾಳೆ. ಇನ್ನು ನಟಿ ಸುಕೃತಾ ನಾಗ್ ಶ್ವೇತಾಳ ಪಾತ್ರದಲ್ಲಿ ತುಂಬಾನೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಬಯಲಾಯಿತು ನಕ್ಷತ್ರ ಸತ್ಯ; ತುಕಾರಾಂ ಇಷ್ಟು ವರ್ಷ ಕಳೆದರೂ ನಕ್ಷತ್ರ ತನ್ನ ಮಗಳು ಎಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಕೊನೆಗೂ ಡಿ ಎನ್ ಎ ಟೆಸ್ಟ್ ಮೂಲಕ ತನ್ನ ಸಂಶಯವನ್ನು ನಿಜವಾಗಿಸಿಕೊಂಡ ತುಕಾರಾಂ ನಕ್ಷತ್ರಳನ್ನು ಆಕೆಯ ಮಾತಿನಂತೆ ಹೊರಹಾಕಿದ್ದಾನೆ. ತಾನು ಇದೇ ಅಪ್ಪ ಅಮ್ಮನ ಮಗಳು ಎನ್ನುವ ನಂಬಿಕೆಯಲ್ಲಿ ಡಿ ಎನ್ ಗೆ ಒಪ್ಪಿ, ತಾನು ಮಗಳಲ್ಲ ಎಂದು ಸಾಬೀತಾದರೆ ಮನೆ ಬಿಟ್ಟು ಹೋಗುವುದಾಗಿ ಹೇಳಿದ್ದಳು ನಕ್ಷತ್ರ. ಅದರಂತೆ ತುಕಾರಾಂ ರಾತ್ರೋ ರಾತ್ರೊ ಮನೆಯ ಬಾಗಿಲನ್ನು ಮಗಳ ಪಾಲಿಗೆ ಶಾಶ್ವತವಾಗಿ ಮುಚ್ಚಿಬಿಡುತ್ತಾನೆ.

ಇನ್ನು ಭೂಪತಿ ನಕ್ಷತ್ರಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಲು ಮುಂದಾದಾಗ ಶ್ವೇತಾ ಉಪಾಯವಾಗಿ ತಮ್ಮ ಮನೆಗೆ ನಕ್ಷತ್ರಳನ್ನು ಕರೆದುಕೊಂಡು ಹೋಗುತ್ತಾಳೆ. ಕೊನೆಗೂ ಆಕಸ್ಮಿಕವಾಗಿಯಾದರೂ ತನ್ನ ಹೆತ್ತ ಅಪ್ಪ ಅಮ್ಮನ ತೆಕ್ಕೆಗೆ ಹೋಗಿ ಸೇರಿದ್ದಾಳೆ ನಕ್ಷತ್ರ. ತಂದೆ ತಾಯಿ ಕಪ್ಪು ಎನ್ನುವ ಕಾರಣಕ್ಕೆ ಅವರನ್ನು ದ್ವೇಷಿಸುತ್ತಾಳೆ ಶ್ವೇತಾ. ಇನ್ನು ತನ್ನ ಹೆತ್ತ ಅಪ್ಪ ಅಮ್ಮ ಯಾರು ಎಂದು ಹುಡುಕುವ ಹುನ್ನಾರದಲ್ಲಿ ನಕ್ಷತ್ರ ಇದ್ದಾಳೆ. ಆದರೆ ಶ್ವೇತಾ ಹಾಗೂ ನಕ್ಷತ್ರ ಅದಲಿಬದಲಿಯಾಗಿದ್ದು ಡಾಕ್ಟರ್ ಬಿಟ್ಟರೆ ಬೇರೆ ಯಾರಿಗೂ ಗೊತ್ತೇ ಇಲ್ಲ. ಇದನ್ನು ಹೇಗೆ ಕಂಡು ಹಿಡಿಯುತ್ತಾಳೆ ನಕ್ಷತ್ರ ಎನ್ನುವುದೇ ಮುಂದಿನ ಸಸ್ಪೆನ್ಸ್!

Get real time updates directly on you device, subscribe now.