ಇಲ್ಲಿಯವರೆಗೂ ಯಾವ ಟಾಪ್ ನಟರು ಮಾಡಲಾಗದ ದಾಖಲೆಯನ್ನು ಬರೆದ ಕನ್ನಡತಿಯ ಕಿರಣ್ ರಾಜ್, ಏನು ಗೊತ್ತಾ??

20

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕಿರುತೆರೆಯ ನಟ ನಟಿಯರು ಎಂದರೆ ಈಗ ಯಾವ ಸಿನಿಮಾ ನಟ ನಟಿಯರಿಗೂ ಕಡಿಮೆಇಲ್ಲ. ಅಥವಾ ಅವರುಗಳಿಗಿಂತ ಒಂದು ಕೈ ಮೇಲೇ ಎಂಬಂತೆ ಮಿಂಚುತ್ತಿದ್ದಾರೆ. ಇನ್ನು ಜನರು ಕೂಡ ಕಿರುತೆರೆ ನಟ ನಟಿಯರನ್ನು ಫಾಲೋ ಮಾಡುವುದು ಕೂಡ ಜಾಸ್ತಿಯೇ ಆಗಿದೆ!

ಹೌದು ಸ್ನೇಹಿತರೆ ಇಂಥ ಒಬ್ಬ ಸ್ಟೈಲಿಶ್ ಸ್ಟಾರ್, ಕನ್ನಡದ ಮನೆ ಮಾತಾಗಿರುವ ಕಿರಣ್ ರಾಜ್. ದೂರದ ಉತ್ತರ ಭಾರತದಲ್ಲಿ ಬೆಳೆದು ಇಂದು ಕನ್ನಡದ ಮುಂಚೂಣಿಯಲ್ಲಿರುವ ಒಂದು ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿರುವ ಕಿರಣ್ ರಾಜ್ ತನಗೆ ಕನ್ನಡ ಸರಿಯಾಗಿ ಮಾತನಾಡಲು ಬರುವುದಿಲ್ಲ ಎಂದು ಟೀಸ್ ಮಾಡಿದವರ ಎದುರು ಕನ್ನಡ ಕಲಿಸುವಷ್ಟು ಬೆಳೆದು ನಿಂತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

ಕನ್ನಡತಿಯ ಹರ್ಷ, ಜನರ ಮೆಚ್ಚಿನ ನಟ ಇಂದು ಗೂಗಲ್ ಟ್ರೆಂಡ್ ಆಗಿದ್ದಾರೆ. ಈ ಮೂಲಕ ಗೂಗಲ್ ಟ್ರೆಂಡ್ ಆಗಿರುವ ಮೊಟ್ಟ ಮೊದಲ ಕಿರುತೆರೆ ನಟ ಎನಿಸಿಕೊಂಡಿದ್ದಾರೆ ಕಿರಣ್ ರಾಜ್! ಈ ಸಂತೋಷದ ವಿಷಯವನ್ನು ಅವರೇ ಸೋಶಿಯಲ್ ಮಿಡೀಯಾದಲ್ಲಿ ಹಂಚಿಕೊಂಡಿದ್ದಾರೆ. ಕಿರಣ್ ರಾಜ್ ನಟನೆ ಮಾತ್ರವಲ್ಲದೇ ತಮ್ಮದೇ ಆದ ಉದ್ಯಮವನ್ನೂ ಹೊಂದಿದ್ದು, ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತಮ್ಮ ಕಿರಣ್ ರಾಜ್ ಫೌಂಡೇಶನ್ ಮೂಲಕ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಕಳೆದ ಲಾಕ್ ಡೌನ್ ಸಮಯದಿಂದಲೂ ಬಡವರಿಗೆ, ಹಸಿದ ಹೊಟ್ಟೆಯನ್ನು ತುಂಬಿಸುವ ಕಾರ್ಯದಲ್ಲಿ ನಿರತರಾದ ಕಿರಣ್ ರಾಜ್, ಈ ಬಾರಿ ಗಣೇಶ ಚೌತಿ ಸಮಯದಲ್ಲಿ ಮಂಗಳ ಮುಖಿಯರಿಗೆ ಊಟ ಹಾಕಿದ್ದನ್ನು ನೆನೆದು ಮಂಗಳ್ ಮುಖಿಯರೂ ಭಾವುಕರಾಗಿದ್ದರು!

ಇನ್ನು ಕಿರಣ್ ರಾಜ್ ಹಿಂದಿ ಕಿರುತೆರೆಯಲ್ಲಿಯೂ ಅಭಿನಯಿಸಿದ್ದು ಕನ್ನಡದ ಕಿನ್ನರಿ, ದೇವತೆ, ಚಂದ್ರಮುಖಿ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದರೂ ಕೂಡ ಈಗ ಕನ್ನಡತಿ ಮೂಲಕ ಜಗಜ್ಜಾಹೀರಾತಾಗಿದ್ದಾರೆ. ಇನ್ನು ಬಹದ್ದೂರ್ ಗಂಡು, ಮಿಕ್ರಮ್ ಗೌಡ ಮೊದಲಾದ ಸಿನಿಮಾಗಳಲ್ಲಿಯೂ ಅಭಿನಯಿಸಿರುವ ಕಿರಣ್ ರಾಜ್, ತಮ್ಮ ಅವಮಾನದಿಂದಲೇ ಮೇಲೆ ಬಂದು ಇಂದು ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಗುರುತಿಸಿಕೊಳ್ಳುತ್ತಿರುವುದು ಶ್ಲಾಘನೀಯ!

Get real time updates directly on you device, subscribe now.