ವಿಜಯ ಲಕ್ಷ್ಮಿ ರವರ ತಾಯಿಯು ಇಹಲೋಕ ತ್ಯಜಿಸಿದಾಗ ಈ ಟಾಪ್ ನಟಿಯ ಕೈಯಲ್ಲಿ ಇದ್ದ ಹಣ ಎಷ್ಟು ಗೊತ್ತೇ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಟಿ ವಿಜಯಲಕ್ಷ್ಮಿ ಅವರ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿರುವ ಸುದ್ದಿಗಳು ನಿಮಗೆಲ್ಲ ಗೊತ್ತೇ ಇದೆ ಸ್ನೇಹಿತರೆ. ಹೌದು ಸ್ನೇಹಿತರೆ ತಮ್ಮ ಅಮ್ಮನನ್ನು ಉಳಿಸಿಕೊಳ್ಳುವ ಸಲುವಾಗಿ ಅವರು ಮಾಡಿದಂತಹ ಕಷ್ಟ ಹಾಗೂ ಪರಿಶ್ರಮ ಎಲ್ಲವೂ ಕೂಡ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಹೌದು ಸ್ನೇಹಿತರೇ ಕಳೆದ ಬಾರಿ ಆಸ್ಪತ್ರೆಗೆ ದಾಖಲಿಸಿದಾಗ ಕನ್ನಡ ಚಿತ್ರರಂಗದ ಕೆಲ ನಟರು ಆಸ್ಪತ್ರೆಯ ಶುಲ್ಕವನ್ನು ಪಾವತಿಸಲು ಸಹಾಯ ಮಾಡಿದ್ದರು. ಅದಾದನಂತರ ಇನ್ನೂ ಕೂಡ ಆರೋಗ್ಯವನ್ನು ಸುಧಾರಿಸಲು ಕಾರವಾರಕ್ಕೆ ಮನೆ ಇಲ್ಲ ಎಂಬ ಕಾರಣದಿಂದಾಗಿ ಅಲ್ಲಿ ಮನೆಯನ್ನು ಹುಡುಕಿ ಹೊರಟಿದ್ದಾರೆ. ಆದರೆ ಅಲ್ಲಿಯೂ ಕೂಡ ವಿಜಯಲಕ್ಷ್ಮಿ ಹಾಗೂ ಅವರ ತಾಯಿ ಮತ್ತು ಅಕ್ಕನಿಗೆ ಇರಲು ಯೋಗ್ಯವಾದ ಸ್ಥಳ ಅಲ್ಲ ಎಂದು ತಿಳಿದ ಮೇಲೆ ಮತ್ತೊಮ್ಮೆ ಬೆಂಗಳೂರಿಗೆ ವಾಪಸಾಗಿದ್ದರು. ಆದರೆ ವಿಜಯಲಕ್ಷ್ಮಿ ಅವರ ತಮ್ಮ ತಾಯಿ ಹಾಗೂ ಅಕ್ಕನೊಂದಿಗೆ ಬೆಂಗಳೂರಿಗೆ ವಾಪಸ್ಸಾದ ಒಂದೇ ದಿನದಲ್ಲಿ ಅವರ ತಾಯಿ ಇಹಲೋಕ ವನ್ನು ತ್ಯಜಿಸಿದ್ದರು.

ಸದ್ಯಕ್ಕೆ ನಟಿ ವಿಜಯಲಕ್ಷ್ಮಿ ಅವರು ಆಶ್ರಮವೊಂದರಲ್ಲಿ ಇದ್ದು ತಾಯಿಯನ್ನು ಕಳೆದುಕೊಂಡ ಶಾಕ್ ನಲ್ಲಿಯೇ ಇದ್ದಾರೆ. ಇನ್ನು ಅವರ ಬಳಿ ಎಲ್ಲಾ ಸೇರಿ ಇರುವುದು ಕೇವಲ ಒಂದೂವರೆ ಸಾವಿರ ರೂಪಾಯಿ ಮಾತ್ರ. ಅವರ ಕೋರಿಕೆ ಇಷ್ಟೇ ಸ್ನೇಹಿತರೆ ಕನ್ನಡ ಚಿತ್ರರಂಗ ಮತ್ತೊಮ್ಮೆ ನನಗೆ ಅವಕಾಶ ನೀಡಲಿ ನನಗೆ ಮತ್ತೊಮ್ಮೆ ಬದುಕೋ ಅವಕಾಶ ನೀಡಲಿ ಎಂಬುದಷ್ಟೇ. ಇದಕ್ಕೆ ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಹೇಗೆ ಪ್ರತಿಸ್ಪಂದಿಸುತ್ತದೆ ಎಂದು ಕಾದುನೋಡಬೇಕಾಗಿದೆ ಸ್ನೇಹಿತರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.