ಕಿಚ್ಚ ಸುದೀಪ್ ಗೆ ಕೋಟಿಗೊಬ್ಬ ಬಿಡುಗಡೆಗೂ ಮುನ್ನವೇ ವಿಘ್ನ. ಈ ಬಾರಿಯೂ ಕಾಡುತ್ತಿರುವುದು ಅವರೇನಾ?? ಏನು ಮಾಡಿದ್ದಾರೆ ಗೊತ್ತಾ??
ನಮಸ್ಕಾರ ಸ್ನೇಹಿತರೇ ಕಿಚ್ಚ ಸುದಿಪ್ ಅಂದ್ರೆ ಸಾಕು ಅವರ ಅಭಿಮಾನಿಗಳಲ್ಲಿ ಮಂದಹಾಸ, ಸಿಳ್ಳೆ, ಚಪ್ಪಾಳೆಗಳು ಕೇಳಿ ಬರುತ್ತವೆ. ಕೇವಲ ಕನ್ನಡ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ, ತಮಿಳು, ತೆಲುಗು, ಹಿಂದಿ ಎಲ್ಲಾ ಭಾಷೆಗಳಲ್ಲಿಯೂ ಮಿಂಚಿರುವ ಕಿಚ್ಚ ಭಾರತದ ಬಹು ಬೇಡಿಕೆಯ ಹಾಗೂ ಮೆಚ್ಚಿನ ನಟ ಎಂದರೆ ಅತಿಶಯೋಕ್ತಿಯಲ್ಲ.

ಇನ್ನು ಕಿಚ್ಚ ಸುದೀಪ್ ಅವರು ಈ ಮಟ್ಟಕ್ಕೆ ತಲುಪಲು ಸಾಕಷ್ಟು ಕಷ್ಟಪಟ್ಟಿದ್ದಾರೆ ಎಂದೇ ಹೇಳಬಹುದು. ಆದರೆ ಅವರಿಗೆ ಈಗಲೂ ಈ ಸಂಕಷ್ಟ ಪೈರೆಸಿ ಮೂಲಕ ಮತ್ತೆ ಕಾಡ್ತಾ ಇದೆ. ಹೌದು ಸ್ನೇಹಿತರೆ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಪೈರೆಸಿ ಕಾಟವನ್ನು ಎದುರಿಸಿತ್ತು, ಅವರ ಮುಕುಂದ ಮುರಾರಿ ಚಿತ್ರಕ್ಕೂ ಇದೇ ಸುದ್ದಿ ಹೆಚ್ಚಿನ ಸದ್ದು ಮಾಡಿತ್ತು. ಇದೀಗ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಬಹುನಿರೀಕ್ಷೆಯ ಚಿತ್ರ ಕೋಟಿಗೊಬ್ಬ 3 ಚಿತ್ರ ಬಿಡಿಗಡೆಗೂ ಮೊದಲೇ ಪೈರೆಸಿ ಯಾಗುವ ಸಾಧ್ಯತೆ ಇದೆ.
ಈ ಸಿನಿಮಾದ ನಿರ್ಪಾಪಕ ಸೂರಪ್ಪ ಬಾಬು ಅವರಿಗೆ ಟೆಲಿಗ್ರಾಮ್ ನಲ್ಲಿ ಬಿಡುಗಡೆ ಮಾಡುವುದಾಗಿ ಮೆಸೇಜ್ ಗಳು ಬಂದಿವೆ ಎಂದು ಹೇಳಲಾಗುತ್ತಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ, ನಿರ್ಮಾಪಕ ಸೂರಪ್ಪ ಬಾಬು ಗೃಹ ಸಚಿವರ ಮೊರೆ ಕೂಡ ಹೋಗಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದು ಸಿನಿಮಾ ಪೈರೆಸಿ ಆಗದಂತೆ ಭದ್ರತೆ ನೀಡಲು ಮನವಿ ಮಾಡಿದ್ದಾರೆ. ಇನ್ನು ಚಿತ್ರತಂಡ ಸೈಬರ್ ಕ್ರೈಮ್ ಗೂ ಕೂಡ ಮಾಹಿತಿ ನೀಡಿ ಪೈರಸಿಯಾಗದಂತೆ ನೋಡಿಕೊಳ್ಳಲು ಸಹಾಯ ಕೇಳಿದ್ದಾರೆ ಎನ್ನಲಾಗಿದೆ.