ನಟನೆ ಹೊರತುಪಡಿಸಿ ಸ್ವಂತ ಉದ್ಯಮವನ್ನು ಹೊಂದಿರುವ 5 ಬಾಲಿವುಡ್ ನಟಿಯರು ಯಾರು ಗೊತ್ತಾ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್ ನಟಿಯರಿಗೆ ಇರುವಷ್ಟು ಬೇಡಿಕೆ ಯಾವ ಚಿತ್ರರಂಗದಲ್ಲಿ ಇರಲು ಸಾಧ್ಯವೇ ಇಲ್ಲ. ಕೇವಲ ಜನಪ್ರಿಯತೆಯಲ್ಲಿ ಮಾತ್ರವಲ್ಲದೆ ಗಳಿಕೆಯಲ್ಲಿ ಕೂಡ ಬಾಲಿವುಡ್ ನಟಿಯರು ಸದಾ ಮುಂದು. ಇನ್ನು ಇಂದು ನಾವು ಹೇಳಲು ಹೊರಟಿರುವುದು ನಟನೆಯ ಜೊತೆಗೆ ನಾವು ಹೇಳಹೊರಟಿರುವ ಈ 5 ನಟಿಯರು ಸೈಡ್ ಬಿಸಿನೆಸ್ ಗಳನ್ನು ಕೂಡ ನಡೆಸಿಕೊಂಡು ಹೋಗುತ್ತಿದ್ದಾರೆ. 5 ನಟಿಯರು ಯಾರು ಹಾಗೂ ಅವರು ನಡೆಸುತ್ತಿರುವ ವ್ಯವಹಾರ ಏನೆಂಬುದನ್ನು ನಾವು ಎಂದು ನಿಮಗೆ ಸಂಪೂರ್ಣ ಸವಿವರವಾಗಿ ಹೇಳುತ್ತೇವೆ ಬನ್ನಿ.

ಕರಿಷ್ಮಾ ಕಪೂರ್ 2000 ಇಸವಿ ಗೂ ಮುನ್ನ ಭಾರತೀಯ ಚಿತ್ರರಂಗದಲ್ಲಿ ಅಂದರೆ ಬಾಲಿವುಡ್ ನಲ್ಲಿ ತಮ್ಮ ಕಂಗಳ ಚೆಲುವಿನ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಸುಂದರಿ ಕರಿಷ್ಮಾ ಕಪೂರ್. ಕರೀನಾ ಕಪೂರ್ ರವರ ಸಹೋದರಿ ಆಗಿರುವ ಇವರು ಅವರಷ್ಟೇ ಹೆಸರನ್ನು ಪಡೆದಿರುವ ನಟಿ. ಇನ್ನು ಇವರ ನಟನೆಯ ಬಗ್ಗೆ ಹೇಳಲು ಮಾತುಗಳು ಸಾಲಲ್ಲ ನಟನೆಯ ಜೊತೆಗೆ ಇವರು ಸ್ವಾವಲಂಬಿ ವ್ಯವಹಾರವನ್ನು ಕೂಡ ನಡೆಸುತ್ತಿದ್ದಾರೆ. ನಟನೆಯ ಜೊತೆಗೆ ಮಕ್ಕಳ ಬಟ್ಟೆ ಅಂಗಡಿಯ ವೆಬ್ಸೈಟನ್ನು ಇವರು ನಡೆಸುತ್ತಿದ್ದಾರೆ. ಅಂತರ್ಜಾಲದ ಬಿಸಿನೆಸ್ ಅನ್ನು ಕೂಡ ಕರಿಷ್ಮಾ ಕಪೂರ್ ಅವರು ನಡೆಸುತ್ತಿದ್ದಾರೆ.

ಸುಶ್ಮಿತಾ ಸೇನ್ 90ರ ದಶಕದಲ್ಲಿ ಮಿಸ್ ಯೂನಿವರ್ಸ್ ಆಗುವುದರ ಮೂಲಕ ತಮ್ಮ ಮನಮೋಹಕ ಚೆಲುವಿನ ಮೂಲಕ ಪಡ್ಡೆಹೈಕಳ ಮನ ಗೆದ್ದಂತಹ ನಟಿ ಸುಶ್ಮಿತಾ ಸೇನ್. ಇಂದಿಗೂ ಕೂಡ ಚಿತ್ರದಲ್ಲಿ ನಟಿಸುವ ಇವರು ಯಾವುದೇ ಹಿರೋಯಿನಿ ಗಿಂತ ಕಮ್ಮಿ ಇಲ್ಲದಂತೆ ಸೌಂದರ್ಯವತಿ ಯಾಗಿದ್ದಾರೆ. ನಟನೆಯಲ್ಲೂ ಕೂಡ ಇವರನ್ನು ಸರಿಗಟ್ಟಲು ಯಾರಿಂದಲೂ ಸಾಧ್ಯವಿಲ್ಲದಂತೆ ನಟಿಸುತ್ತಾರೆ. ಇನ್ನು ಸುಶ್ಮಿತಾ ಸೇನ್ ರವರ ನಟನೆಯ ಸಿನಿ ಜೀವನದ ಜೊತೆಗೆ ತಂತ್ರ ಎಂಟರ್ಟೈನ್ಮೆಂಟ್ ಎಂಬ ಸಿನಿ ನಿರ್ಮಾಣ ಸಂಸ್ಥೆಯನ್ನು ಕೂಡ ಹೊಂದಿದ್ದಾರೆ ಮಾತ್ರವಲ್ಲದೆ ದುಬೈನಲ್ಲಿ ಆಭರಣ ಲೈನ್ ಅನ್ನು ಕೂಡ ಇವರು ವ್ಯವಹಾರ ಮಾಡುತ್ತಾರೆ. ನಟನೆಗೂ ಸೈ ವ್ಯವಹಾರಕ್ಕೂ ಸರಿ ಎಂಬ ದಿಟ್ಟ ಮಹಿಳೆ ಸುಶ್ಮಿತಾ ಸೇನ್.

ಶಿಲ್ಪಾ ಶೆಟ್ಟಿ ಕರಾವಳಿ ಮೂಲದಿಂದ ಮುಂಬೈಗೆ ತೆರಳಿ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ತಮ್ಮ ಹೆಗ್ಗುರುತು ಸ್ಥಾಪಿಸಿಕೊಂಡಿರುವ ನಟಿಯೆಂದರೆ ಅದು ಖಂಡಿತವಾಗಿಯೂ ಶಿಲ್ಪ ಶೆಟ್ಟಿ. ನಟನೆ ನೃತ್ಯ ಇದೆಲ್ಲದಕ್ಕಿಂತ ಹೆಚ್ಚಾಗಿ ಅವರ ಫಿಟ್ನೆಸ್ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿ ಮಾಡುತ್ತದೆ. ವಯಸ್ಸು ನಲವತ್ತರ ಮೇಲಾದರೂ ಕೂಡ ಚಿರ ಯುವತಿಯಂತೆ ಕಾಣುತ್ತಿದ್ದಾರೆ ಶಿಲ್ಪ ಶೆಟ್ಟಿ ಅವರು. ಇನ್ನು ನಟನೆಯಲ್ಲಿ ಮಾತ್ರವಲ್ಲದ ಶಿಲ್ಪ ಶೆಟ್ಟಿ ಬಿಸಿನೆಸ್ ಮಹಿಳೆಯಾಗಿ ಕೂಡ ಖ್ಯಾತಿ ಗಳಿಸಿದ್ದಾರೆ. ಹೌದು ಸ್ನೇಹಿತರೆ ಮುಂಬೈನಲ್ಲಿ ಚೈನ್ ಸ್ಪಾ ಹಾಗೂ ರಾಯಲ್ಟಿ ಕ್ಲಬ್ಬನ್ನು ಕೂಡ ಹೊಂದಿದ್ದಾರೆ. ಮಾತ್ರವಲ್ಲದೆ ಯೂಟ್ಯೂಬ್ನಲ್ಲಿ ಅಡುಗೆ ಚಾನಲನ್ನು ಕೂಡ ಹೊಂದಿದ್ದಾರೆ. ಇವೆಲ್ಲದರ ಮೂಲಕ ಸಿನಿಮಾ ಹೊರತುಪಡಿಸಿ ಗಮನಿಯ ಆದಾಯವನ್ನೂ ಗಳಿಸುತ್ತಿದ್ದಾರೆ.

ಲಾರಾ ದತ್ತ ಮಿಸ್ ಯುನಿವರ್ಸ್ ಆಗಿ ಖ್ಯಾತಿಗಳಿಸಿರುವ ಸುಂದರಿ ಬಾಲಿವುಡ್ನ ಖ್ಯಾತ ನಟಿಯಾಗಿರುವ ಲಾರಾ ದತ್ತ ಕೂಡ ಈ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಲಾರಾ ದತ್ತ ಕೂಡ ಸ್ವಂತ ಉದ್ಯಮಿಯಾಗಿ ಯಶಸ್ವಿ ಮಹಿಳೆಯಾಗಿ ರೂಪುಗೊಂಡಿದ್ದಾರೆ. ಬಿಗಿ ಬಸಂತಿ ಎಂಬ ಕಂಪನಿ ಹಾಗೂ ಛಾಬ್ರಾ 55555 ಎಂಬ ಸ್ವಂತ ಸೀರೆ ಬ್ರಾಂಡ್ ಕಂಪನಿಯನ್ನು ಕೂಡ ಲಾರಾ ದತ್ತ ರವರು ಹೊಂದಿದ್ದಾರೆ ಹಾಗೂ ಇದು ಯಶಸ್ವಿ ಉದ್ದಿಮೆ ಕೂಡ ಆಗಿದೆ.

ಸನ್ನಿ ಲಿಯೋನ್ ಇನ್ನು ಸನ್ನಿ ಲಿಯೋನ್ ರವರ ಬಗ್ಗೆ ತಿಳಿಯದವರೇ ಇಲ್ಲ ಬಿಡಿ. ಭಾರತ ಚಿತ್ರರಂಗದಲ್ಲಿ ಗ್ಲಾಮರಸ್ ನಟಿಯಾಗಿ ಕಾಣಿಸಿಕೊಂಡಿರುವ ಸನ್ನಿ ಲಿಯೋನ್ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲರಿಗೂ ಚಿರಪರಿಚಿತರು. ಪ್ರಮುಖವಾಗಿ ಬಾಲಿವುಡ್ ಚಿತ್ರಗಳಲ್ಲಿ ನಟಿಸುವ ಇವರು ತಮ್ಮ ಸ್ವಂತ ಉದ್ದಿಮೆ ಯಿಂದಾಗಿ ಕೂಡ ಖ್ಯಾತರಾಗಿದ್ದಾರೆ. ಇನ್ನು ಇವರು ವೇಷಭೂಷಣಗಳು ಹಾಗೂ ಉಡುಪುಗಳು ಇನ್ನಿತರ ಸೌಂದರ್ಯವರ್ಧಕಗಳು ಹಾಗೂ ಸುವಾಸನೆಭರಿತ ಪರ್ಫ್ಯೂಮ್ ಗಳ ಕಂಪನಿಯನ್ನು ಕೂಡ ಹೊಂದಿದ್ದಾರೆ.

ನೋಡಿದ್ರಲ್ಲ ಸ್ನೇಹಿತರೇ ಯಾವೆಲ್ಲಾ 5 ಬಾಲಿವುಡ್ ನಟಿಯರು ನಟನೆ ಹೊರತುಪಡಿಸಿ ಸ್ವಂತ ಉದ್ಯಮವನ್ನು ಹೊಂದಿದ್ದಾರೆ ಎಂಬುದನ್ನು. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.