ಐದು ವರ್ಷದಿಂದ ಮದುವೆಯಾಗದೇ ಸಂಸಾರ ಮಾಡುತ್ತಿದ್ದರು, ಆದರೆ ಇಂದು ಇವರ ಪರಿಸ್ಥಿತಿ ಏನಾಗಿದೆ ಗೊತ್ತೆ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಜೀವನ ನಾವು ಅಂದುಕೊಂಡಂತೆ ಇರುವುದೇ ಇಲ್ಲ. ನಾವು ಅಂದುಕೊಂಡ ಹಾಗೆ ಯಾವುದೂ ನಡೆಯುವುದೂ ಇಲ್ಲ. ಆದರೂ ಮೂರು ದಿನದ ಈ ಬದುಕಿನಲ್ಲಿ ಗೊಂದಲಗಳು, ಜಂಜಾಟಗಳೇ ಜಾಸ್ತಿ. ಪ್ರತಿದಿನ ಸರಿ ತಪ್ಪುಗಳನ್ನು ಲೆಕ್ಕ ಹಾಕುತ್ತಾ, ಇನ್ನೊಬ್ಬರನ್ನು ದೂಷಿಸುತ್ತಾ ಬದುಕನ್ನು ಕಳೆಯುತ್ತೇವೆ. ಆದರೆ ನಮ್ಮ ನಾಳೆ ಹೇಗಿರುತ್ತೆ ಎನ್ನೊದು ನಮಗ್ಯಾರಿಗೂ ಗೊತ್ತೇ ಇರುವುದಿಲ್ಲ. ಅಂದ ಮೇಲೆ ಪ್ರಸ್ತುತ ದಿನವನ್ನು ಬದುಕುವುದು ಮಾತ್ರ ಸೂಕ್ತ ಅಲ್ವಾ!

ಜೀವನದ ಬಗ್ಗೆ ಇಂಥ ಯಾವುದೇ ಫಿಲೋಸಫಿ ನಮಗೆ ಗೊತ್ತಿದ್ದರೂ ಕೂಡ ಕೆಲವೊಮ್ಮೆ ನಾವು ದುಡುಕಿನ ನಿರ್ಧಾರ ತೆಗೆದುಕೊಂಡು ಬಿಡುತ್ತೇವೆ. ಆದರೆ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವೇನು ಎನ್ನುವಂತೆ ಮತ್ತೆ ಯೋಚನೆ ಮಾಡಿದರೆ ಯಾವ ಪ್ರಯೋಜನವೂ ಇರುವುದೇ ಇಲ್ಲ. ಅಂಥ ಒಂದು ಘಟನೆ ನಡೆದಿರುವುದು ಮಾಗಡಿಯಲ್ಲಿ. ನರಸಿಂಹ ಮೂರ್ತಿ ರಾವ್ ಹಾಗೂ ಹೇಮಾ ಎಂಬವರು ಮದುವೆಯಾಗದೇ ಒಟ್ಟಿಗೆ ಒಂದೇ ಮನೆಯಲ್ಲಿ ಕಳೆದ ಐದು ವರ್ಷಗಳಿಂದ ಜೀವನ ನಡೆಸುತ್ತಿದ್ದರು. ಇವರ ನಡುವೆ ಅನ್ಯೂನ್ಯತೆ ಎಷ್ಟಿತ್ತೆಂದರೆ ಅಕ್ಕ ಪಕ್ಕದ ಮನೆಯವರೆಲ್ಲ ಇವರಿಬ್ಬರನ್ನು ಗಂಡ ಹೆಂಡತಿ ಎಂದೇ ನಂಬಿದ್ದರು.

ಹೇಮಾ ಹಾಗೂ ನರಸಿಂಹ ಮೂರ್ತಿ ಇಬ್ಬರಿಗೂ ಬೇರೆ ಬೇರೆ ಮದುವೆಯಾಗಿತ್ತು. ನರಸಿಂಹ ಮೂರ್ತಿ ರಾವ್ ಗೆ ಮದುವೆಯಾಗಿ 9 ವರ್ಷದ ಮಗುವಿದ್ದರೆ ಹೇಮಾ ಮದುವೆಯಾಗಿ ಎರಡು ವರ್ಷಗಳ ಕಾಲ ಗಂಡನ ಜೊತೆ ಸಂಸಾರ ಮಾಡಿ ನಂತರ ಗಂಡನನ್ನು ಬಿಟ್ಟು ತುಮಕೂರಿನಿಂದ ಮಾಗಡಿಗೆ ಬಂದು ನೆಲೆಸಿದ್ದಳು. ಇಲ್ಲಿ ಒಬ್ಬಂಟಿಯಾಗಿದ್ದ ಹೇಮಾಳಿಗೆ ಸಿಕ್ಕಿದ್ದು ನರಸಿಂಹ ಮೂರ್ತಿಯ ಪ್ರೀತಿ. ಇಬ್ಬರೂ ಪರಸ್ಪರ ಚೆನ್ನಾಗಿಯೇ ಇದ್ದವರು ಕಳೆದ 4-5 ತಿಂಗಳಿನಿಂದ ದಿನವೂ ಜಗಳಾಡುತ್ತಿದ್ದರು. ಇವರ ನಡುವಿನ ಜಗಳಕ್ಕೆ ಕಾರಣ ಗೊತ್ತಿಲ್ಲದಿದ್ದರೂ ಇಬ್ಬರ ನಡುವಿನ ವೈಮನಸ್ಸು ತಾರಕಕ್ಕೆ ಹೋಗಿ ಇಬ್ಬರೂ ತಾವೇ ಹಗ್ಗದ ಸಹಾಯದಿಂದ ಇಹಲೋಕ ತ್ಯಜಿಸಿದ್ದಾರೆ. ಒಂದು ರೀತಿಯಲ್ಲಿ ನರಸಿಂಗ ಮೂರ್ತಿಯೇ ಹೇಮಾಳ ಉಸಿರು ನಿಲ್ಲಸಿದ್ದಾನೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಈ ಪ್ರಕರಣ ಮಾಗಡಿ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.

Get real time updates directly on you device, subscribe now.