ದುನಿಯಾ ವಿಜಯ್ ಜಿಮ್ ಗೆ ಹೋಗಲು ಸ್ಪೂರ್ತಿಯಾದ, ಕನ್ನಡದ ಸೂಪರ್ ಸ್ಟಾರ್ ಯಾರು ಗೊತ್ತೇ?? ಇವರ ಹಾಡು ಕೇಳಿನೆ ವರ್ಕೌಟ್ ಮಾಡೋದು.

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ದುನಿಯಾ ವಿಜಯ್, ತಮ್ಮ ಜಿಮ್ ಬಾಡಿ ಹಾಗೂ ಅಭಿನಯದಿಂದಲೇ ಕರುನಾಡಿನಲ್ಲಿ ಹೆಸರಾದವರು. ಬಾಲ್ಯವನ್ನು ಹಾಗೂ ತಮ್ಮ ಸಿನಿಮಾ ಜರ್ನಿಯ ಆರಂಭದ ದಿನಗಳನ್ನು ಅತ್ಯಂತ ಕಷ್ಟದಿಂದ ಕಳೆದವರು. ಜಿಮ್ ನಲ್ಲಿ ದೇಹ ದಂಡಿಸುತ್ತಿರುವಾಗ, ಮಿಸ್ಟರ್ ಕರ್ನಾಟಕ, ಮಿಸ್ಟರ್ ಇಂಡಿಯಾ ಮುಂತಾದ ಕಾಂಪಿಟೇಶನ್ ಗಳಲ್ಲಿ ಭಾಗವಹಿಸುವಾಗಲೂ ದುನಿಯಾ ವಿಜಯ್ ಗೆ ಕಷ್ಟಗಳು ತಪ್ಪಿರಲಿಲ್ಲ. ಆದರೇ ಒಮ್ಮೆ ದುನಿಯಾ ಸಿನಿಮಾ ಕರುನಾಡಿನ ಜನತೆ ಒಪ್ಪಿಕೊಂಡ ಮೇಲೆ ದುನಿಯಾ ವಿಜಯ್ ಹಿಂದಿರುಗಿ ನೋಡಲಿಲ್ಲ.

ಒಂದಾದ ಮೇಲೊಂದರಂತೆ ಸಿನಿಮಾಗಳನ್ನ ಮಾಡತೊಡಗಿದರು. ದುನಿಯಾದಂತಹ ಯಶಸ್ಸು ಸಿಗದಿದ್ದರೂ, ದುನಿಯಾ ನಂತರ ವಿಜಯ್ ಮಿನಿಮಮ್ ಗ್ಯಾರಂಟಿ ನಟ ಎಂದು ಗಾಂಧಿ ನಗರದಲ್ಲಿ ಬ್ರಾಂಡ್ ಆಯಿತು. ದುನಿಯಾ ವಿಜಿಯವರನ್ನ ನಂಬಿ ದುಡ್ಡು ಹಾಕಿದ ನಿರ್ಮಾಪಕರಿಗೆ ಯಾರಿಗೂ ಹಣದಲ್ಲಿ ನಷ್ಟವಾಗುತ್ತಿರಲಿಲ್ಲ. ಇದೀಗ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣದ ಜೊತೆ ನಿರ್ದೇಶಕರು ಕೂಡಾ ಆಗುತ್ತಿದ್ದಾರೆ ವಿಜಯ್. ವಿಜಯ್ ಅಭಿನಯಿಸಿ, ನಿರ್ದೇಶಿಸಿದ ಸಲಗ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಬೇಕಿದೆ.

ಈ ನಡುವೆ ತಮ್ಮ ಸಿನಿಮಾ ಸ್ಪೂರ್ತಿ ಹಾಗೂ ಸಾಹಸ ಕಲಾವಿದನಾಗಲು ಈ ಶ್ರೇಷ್ಠ ನಟನೆ ಪ್ರೇರಣೆ ಎಂದು ಒಂದು ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾವು ಚಿಕ್ಕವರಿದ್ದಾಗ ನಮಗಿದ್ದಿದ್ದೇ ಎರಡು ಥಿಯೇಟರ್. ಅಲ್ಲಿ ಬಿಡುಗಡೆಯಾದ ಯಾವ ಸಿನಿಮಾವನ್ನು ನಾವು ಮಿಸ್ ಮಾಡದೇ ನೋಡುತ್ತಿದ್ದೆವು. ಒಮ್ಮೆ ಆ ನಟನ ಸಿನಿಮಾಕ್ಕೆ ಹೋಗಿದ್ದಾಗ , ಆ ಸಿನಿಮಾದ ಒಂದು ದೃಶ್ಯ ನನ್ನಲ್ಲಿ ಸಾಹಸ ಕಲಾವಿದನಾಗಲು ಪ್ರೇರಣೆ ನೀಡಿತು. ಒಂದು ಫೈಟಿಂಗ್ ದೃಷ್ಯದಲ್ಲಿ ಆ ನಟ ತನ್ನೇರೆಡು ಕಾಲುಗಳನ್ನ 180 ಡಿಗ್ರಿ ಯಲ್ಲಿ ಸ್ಟ್ರೆಚ್ ಮಾಡಿ ಕುಳಿತು ಕೊಳ್ಳುತ್ತಾರೆ. ಆ ದೃಷ್ಯ ನೋಡಿದ ಬಳಿಕ ದುನಿಯಾ ವಿಜಯ್ ಗೆ ತಾವು ಸಹ ಸಾಹಸ ಕಲಾವಿದರಾಗಬೇಕು ಎಂಬ ಬಯಕೆ ಹೆಚ್ಚಾಯಿತಂತೆ. ಮಾರನೇ ದಿನವೇ ಹೋಗಿ ಜಿಮ್ ಸೇರಿಕೊಂಡೆ ಎಂದು ಹೇಳಿದರು.

ಅಷ್ಟಕ್ಕೂ ದುನಿಯಾ ವಿಜಯ್ ರವರಿಗೆ ಪ್ರೇರಣೆಯಾದ ಆ ನಟ ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಬೇರಾರೂ ಅಲ್ಲ, ಅಭಿನಯ ಭಾರ್ಗವ, ಸಾಹಸ ಸಿಂಹ ವಿಷ್ಣುವರ್ಧನ್. ಹೌದು ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಗಂಡುಗಲಿ ಸಿನಿಮಾದ ಆ ಸಾಹಸಮಯ ದೃಷ್ಯ ನೋಡಿ ತಾವು ಜಿಮ್ ಸೇರಿ, ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡರ್ ಚಾಂಪಿಯನ್ ಶಿಪ್ ನಲ್ಲಿ ಸ್ಪರ್ಧಿಸಿದರಂತೆ ದುನಿಯಾ ವಿಜಯ್.

ಇನ್ನು ಬಹಳಷ್ಟು ಯುವಕರು ಜಿಮ್ ನಲ್ಲಿ ಕಸರತ್ತು ನಡೆಸುವಾಗ ಇಂಗ್ಲಿಷ್ ಸಾಂಗ್ ನ್ನು ಕೇಳುತ್ತಾ ಜಿಮ್ ಮಾಡುತ್ತಾರೆ. ಆದರೇ ನಾನು ಜಿಮ್ ಮಾಡುವಾಗ ಯಾವಾಗಲೂ ವಿಷ್ಣು ದಾದಾ ಅಭಿನಯದ ಈ ಅಂಜದ ಗಂಡಲಿ ನಂಜೇ ಇಲ್ಲ ಎಂಬ ರಾಮಾಚಾರಿಯ ಆ ಸಿನಿಮಾದ ಹಾಡನ್ನೇ ಕೇಳುತ್ತಿರುತ್ತಿನಿ. ಈ ಹಾಡು ನನ್ನಲ್ಲಿ ಇನ್ನಷ್ಟು ಕಸರತ್ತು ಮಾಡಲು ಆತ್ಮಸ್ಥೈರ್ಯ ತುಂಬುತ್ತದೆ ಎಂದು ದುನಿಯಾ ವಿಜಯ್ ಹೇಳಿದ್ದಾರೆ. ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯ ಅಭ್ಯುದಯಕ್ಕಾಗಿಯೇ ವಿಷ್ಣುವರ್ಧನ್ ಕನ್ನಡ ನಾಡಿನಲ್ಲಿ ಜನಿಸಿದ್ದಾರೆ ಎಂಬ ದುನಿಯಾ ವಿಜಯ್ ಮಾತಿಗೆ ಶಿಳ್ಳೆ, ಚಪ್ಪಾಳೆಗಳು ಜೋರಾಗಿ ಕೇಳಿ ಬಂದವು. ಒಟ್ಟಿನಲ್ಲಿ ವಿಷ್ಣುದಾದಾ ಇಲ್ಲದಿದ್ದರೂ, ಅವರು ಸೃಷ್ಠಿಸಿ ಹೋಗಿರುವ ನೆನಪುಗಳು ಇಂದಿಗೂ ಹಚ್ಚಹಸಿರಿನಂತಿವೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.