ದುನಿಯಾ ಚಿತ್ರದಲ್ಲಿ ಈ ಕನ್ನಡದ ಸ್ಟಾರ್ ನಟ ಕೂಡ ನಟಿಸಬೇಕಿತ್ತು, ಕೊನೆ ಕ್ಷಣದಲ್ಲಿ ಅವಕಾಶ ಕೈ ತಪ್ಪಿದ್ದು ಹೇಗೆ ಗೊತ್ತೇ??

21

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ 2000 ಇಸ್ವಿಯ ಆಸುಪಾಸಿನಲ್ಲಿ ಹಲವಾರು ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸಿದ್ದವು. ಆದರೆ ಇಂದಿಗೂ ಕೂಡ ಎವರ್ಗ್ರೀನ್ ಸೂಪರ್ ಹಿಟ್ ಚಿತ್ರಗಳಾಗಿ ಉಳಿದುಕೊಂಡಿರುವುದು ಮಾತ್ರ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ. ಹೌದು ಸ್ನೇಹಿತರೇ ನಾವು ಇಂದು ಮಾತನಾಡಲು ಹೊರಟಿರುವುದು ದುನಿಯಾ ಚಿತ್ರದ ಕುರಿತಂತೆ. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ದುನಿಯಾ ಎಂದು ಮರೆಯಲಾಗದಂತಹ ಎವರ್ಗ್ರೀನ್ ಚಿತ್ರ ಎಂದರೆ ತಪ್ಪಾಗಲಾರದು ಹಾಗೂ ಅದು ಅತಿಶಯೋಕ್ತಿ ಕೂಡ ಅಂತ ಅನಿಸುವುದಿಲ್ಲ.

ದುನಿಯಾ ವಿಜಯ್ ರವರಿಗೆ ಕನ್ನಡ ಚಿತ್ರರಂಗದಲ್ಲಿ ಭದ್ರವಾದ ನೆಲೆಯನ್ನು ತಂದುಕೊಟ್ಟಂತಹ ಚಿತ್ರ ಎಂದರೆ ದುನಿಯಾ. ಕೇವಲ ದುನಿಯಾ ವಿಜಯ್ ರವರಿಗೆ ಮಾತ್ರವಲ್ಲದೆ ನಿರ್ದೇಶಕ ಸುಕ್ಕ ಸೂರಿ ಅವರಿಗೆ ಕೂಡ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕನಾಗಿ ಉಳಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿತ್ತು. ಈ ಚಿತ್ರದ ಕುರಿತಂತೆ ನಿಮಗೆ ಗೊತ್ತಿಲ್ಲದ ಒಂದು ವಿಚಾರವನ್ನು ನಾವು ಹೇಳಲು ಹೊರಟಿದ್ದೇವೆ ಸ್ನೇಹಿತರೆ. ಹೌದು ಸ್ನೇಹಿತರ ದುನಿಯಾ ಚಿತ್ರದಲ್ಲಿ ನಮ್ಮೆಲ್ಲರ ನೆಚ್ಚಿನ ನ್ಯಾಷನಲ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ರವರು ನಟಿಸಬೇಕಿತ್ತು.

ಹೌದು ಸ್ನೇಹಿತರೆ ಆ ಸಮಯದಲ್ಲಿ ರಾಕಿಂಗ್ ಸ್ಟಾರ್ ಯಶ್ ರವರು ಗೋಕುಲ ಧಾರವಾಹಿಯಲ್ಲಿ ನಟಿಸುತ್ತಿದ್ದರು. ಆ ದಾರವಾಹಿಯಲ್ಲಿ ಕ್ಯಾಮೆರಾಮ್ಯಾನ್ ಆಗಿದ್ದವರು ಸತ್ಯಹೆಗಡೆ ದುನಿಯಾ ಚಿತ್ರಕ್ಕೆ ಕೂಡ ಅವರ ಕ್ಯಾಮರಾಮನ್ ಆಗಿದ್ದರು. ಇನ್ನು ಸತ್ಯಹೆಗಡೆ ಅವರು ಯಶ್ ರವರಿಗೆ ದುನಿಯಾ ಚಿತ್ರದಲ್ಲಿ ಕಿಶೋರ್ ಅವರು ನಿರ್ವಹಿಸುತ್ತಿರುವ ಖಡಕ್ ಪೊಲೀಸ್ ಪಾತ್ರಕ್ಕೆ ಅಸಿಸ್ಟೆಂಟ್ ಆಗಿ ಒಂದು ಪಾತ್ರವನ್ನು ಮಾಡಲು ಅವಕಾಶ ನೀಡುತ್ತೇನೆ ಎಂಬುದಾಗಿ ಹೇಳಿದ್ದರು. ಈ ಕುರಿತಂತೆ ನಿರ್ದೇಶಕರ ಬಳಿ ಮಾತನಾಡಲು ಹೊರಟಾಗ ನಿರ್ದೇಶಕರು ಆ ತರಹದ ಯಾವುದೇ ಪಾತ್ರಗಳು ಬೇಡ ಎಂದು ಕೊನೆಯಲ್ಲಿ ಹೇಳಿ ಯಶ್ ರವರಿಗೆ ನಿರಾಸೆಯನ್ನು ಮೂಡಿಸಿದರು. ಆದರೆ ಈಗ ಯಶ್ ಅವರು ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆಪಡುವಂತೆ ಬೆಳೆದಿರುವುದು ನಿಮಗೆಲ್ಲ ಗೊತ್ತೇ ಇದೆ. ಅಂದಿನ ತಿರಸ್ಕಾರವೇ ಇಂದು ಸನ್ಮಾನ ಪುರಸ್ಕಾರ ಎಂಬಂತೆ ಯಶ್ ರವರು ಸಾಧನೆ ಮಾಡಿ ಬೆಳೆದಿದ್ದಾರೆ.

Get real time updates directly on you device, subscribe now.