ಗಂಗೂಲಿ ಸೇರಿದಂತೆ ನಾಲ್ಕು ಜನರು ನಗ್ಮಾ ಬಾಳಲ್ಲಿ ಬಂದು ಈ ನಟಿಯನ್ನು ಯಾವ ಪರಿಸ್ಥಿತಿ ಗೆ ತಳ್ಳಿದ್ದಾರೆ ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಅಂದಿನ ಕಾಲದಲ್ಲಿ ಕೇವಲ ಬಾಲಿವುಡ್ ಮಾತ್ರವಲ್ಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೂಡ ಬಹುಬೇಡಿಕೆ ಹಾಗೂ ಟಾಪ್ ನಟಿಯಾಗಿದ್ದವರು ನಗ್ಮಾ. ನಗ್ಮಾ ರವರಿಗೆ ಬಾಲಿವುಡ್ ಗಿಂತಲೂ ಹೆಚ್ಚಾಗಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬೇರೆಯದೇ ಲೆವೆಲ್ ನಲ್ಲಿ ಕ್ರೇಜ್ ಇತ್ತು. ನಗ್ಮ ಅವರ ತಂದೆ ಹಿಂದೂವಾಗಿದ್ದರೆ ತಾಯಿ ಮುಸಲ್ಮಾನ್ ಆಗಿದ್ದರು. ನಗ್ಮಾ ರವರು ಜನಿಸಿದ ನಂತರ ಇಬ್ಬರು ಕೂಡ ದೂರ ಆಗಿ ಬೇರೆ ಬೇರೆಯವರನ್ನು ಮದುವೆಯಾದರು. ಇನ್ನು ದಕ್ಷಿಣ ಭಾರತದ ಇನ್ನೋರ್ವ ಖ್ಯಾತ ನಟಿ ಜ್ಯೋತಿಕಾ ರವರು ಕೂಡ ಸಂಬಂಧದಲ್ಲಿ ನಗ್ಮಾ ರವರಿಗೆ ಸಹೋದರಿ ಆಗಬೇಕು.

ನಗ್ಮಾ ರವರ ಬಾಳಿನಲ್ಲಿ ನಾಲ್ಕು ಜನ ಪುರುಷರ ಪ್ರವೇಶವಾಗಿತ್ತು ಈ ಕುರಿತಂತೆ ಸಾಕಷ್ಟು ಸುದ್ದಿ ಕೂಡ ನಡೆದಿತ್ತು. 46 ವರ್ಷವಾದರೂ ಕೂಡ ನಗ್ಮಾ ರವರು ಒಬ್ಬಂಟಿಯಾಗಿ ಜೀವಿಸುತ್ತಿದ್ದಾರೆ ಎಂಬ ಸುದ್ದಿ ಹೀಗೆ ಹಲವಾರು ವಿಚಾರಗಳ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಮೊದಲಿಗೆ ನಗ್ಮಾ ರವರು ಸಲ್ಮಾನ್ ಖಾನ್ ನಟನೆಯ ಭಾಗಿ ಚಿತ್ರದಲ್ಲಿ ನಟಿಸುತ್ತಾರೆ. ಅದಾದ ನಂತರ ನಗ್ಮಾ ರವರು ಸೀದಾ ಬರೋದು ದಕ್ಷಿಣ ಭಾರತ ಚಿತ್ರರಂಗಕ್ಕೆ. ಮೊದಲಿಗೆ ಶರತ್ ಕುಮಾರ್ ಹೌದು ಸ್ನೇಹಿತರೆ ಶರತ್ಕುಮಾರ್ ರವರೊಂದಿಗೆ ಮೊದಲ ಬಾರಿಗೆ ಬಂದು ದಕ್ಷಿಣಭಾರತದಲ್ಲಿ ನಟಿಸುತ್ತಾರೆ.

ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬರುವ ಅಂತಹ ಎಲ್ಲಾ ಚಿತ್ರಗಳು ಕೂಡ ಸಾಕಷ್ಟು ಯಶಸ್ಸು ಗಳಿಸುತ್ತದೆ. ಇದಾದ ನಂತರ ಇವರು ಹೆಚ್ಚು ಹೆಚ್ಚು ಚಿತ್ರಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇವರಿಬ್ಬರ ನಡುವೆ ಗೊತ್ತಿಲ್ಲದೆ ಪ್ರೀತಿಯ ಅಂಕುರವಾಗುತ್ತದೆ. ಶರತ್ ಕುಮಾರ್ ರವರು ನಗ್ಮಾ ರವರನ್ನು ದಕ್ಷಿಣ ಚಿತ್ರರಂಗದ ಟಾಪ್ ನಟಿಯಾಗಿ ಮಾಡಬೇಕೆಂಬ ಆಸೆಯಿಂದ ಹಲವಾರು ಚಿತ್ರಗಳನ್ನು ನಗ್ಮಾ ರವರಿಗೆ ತಂದು ಕೊಡುವ ಪ್ರಯತ್ನವನ್ನು ಮಾಡುತ್ತಾರೆ.

ಇನ್ನು ಇವರಿಬ್ಬರ ಸಂಬಂಧವನ್ನು ತಿಳಿದ ಶರತ್ ಕುಮಾರ್ ರವರ ಪತ್ನಿ ಛಾಯಾ ರವರು ಇವರಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ. ಇನ್ನು ಇವರಿಬ್ಬರೂ ಬೇರೆ ಆಗಿದ್ದಕ್ಕೆ ಸುದ್ದಿಮಾಧ್ಯಮಗಳು ನಗ್ಮಾ ರವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಾರೆ. ಇದಕ್ಕಾಗಿ ಬೇಸರಗೊಂಡ ನಗ್ಮಾ ರವರು ಬಾಲಿವುಡ್ಗೆ ಮತ್ತೆ ಹಿಂದಿರುಗುತ್ತಾರೆ. ಇನ್ನು ಎರಡನೇ ಬಾರಿಗೆ ನಗ್ಮಾ ರವರ ಹೆಸರು ಕೇಳಿಬಂದಿದ್ದು ಭಾರತೀಯ ಕ್ರಿಕೆಟ್ ತಂಡದ ಕಪ್ತಾನನಾಗಿ ಇದ್ದಂತಹ ಸೌರವ್ ಗಂಗೂಲಿ ಅವರ ಜೊತೆಗೆ.

ಹೌದು ಸ್ನೇಹಿತರ ಅಂದಿನ ಕಾಲದಲ್ಲಿ ಹೆಸರು ಗಂಗೂಲಿ ಅವರು ಭಾರತ ಕ್ರಿಕೆಟ್ ತಂಡದ ಯಶಸ್ವಿ ಕಾರಣವಾಗಿದ್ದರು ಇನ್ನು ಅವರು ನಗ್ಮಾ ರವರನ್ನು ಹೆಚ್ಚು ಹಚ್ಚಿಕೊಂಡಿದ್ದರು. ಇನ್ನು ಸೌರವ್ ಗಂಗೂಲಿ ಅವರು ನಗ್ಮಾ ರವರ ವಿಚಾರದಲ್ಲಿ ಎಷ್ಟು ಸೀರಿಯಸ್ಸಾಗಿ ಇದ್ದರೆಂದರೆ ಇದಕ್ಕಾಗಿ ಅವರು ತಮ್ಮ ಫಾರ್ಮನ್ನು ಕೂಡ ಕಳೆದುಕೊಂಡಿದ್ದರು. ಇನ್ನು ಕೆಲ ಮಾಧ್ಯಮಗಳಲ್ಲಿ ಇವರಿಬ್ಬರು ಗುಟ್ಟಾಗಿ ಆಂಧ್ರಪ್ರದೇಶದಲ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ ಎಂಬ ಸುದ್ದಿಗಳು ಕೂಡ ಕೇಳಿಬಂದಿತ್ತು. ನಂತರ ಇವರಿಬ್ಬರ ಕುರಿತಂತೆ ಗುಸುಗುಸು ಗಳು ಹೆಚ್ಚಾದಂತೆ ನಗ್ಮಾ ರವರು ಸೌರವ್ ಗಂಗೂಲಿ ಅವರಿಂದ ದೂರ ಆದರು.

ನಂತರ 2004 ರಲ್ಲಿ ನಗ್ಮಾ ರವರು ರಾಜ’ಕೀಯಕ್ಕೂ ಕೂಡ ಕಾಲಿಟ್ಟು ಅಲ್ಲಿ ಕೂಡ ಮಿಂಚಿದ್ದರು. ಇನ್ನು ನಗ್ಮಾ ರವರು ಬಾಲಿವುಡ್ನಲ್ಲಿ ಕೂಡ ಮಿಂಚಲು ಆಗದೆ ಸೀದಾ ಭೋಜಪುರಿ ಚಿತ್ರರಂಗಕ್ಕೆ ಕಾಲಿಟ್ಟರು. ಅಂದಿನ ಕಾಲದಲ್ಲಿ ಭೋಜಪುರಿ ಚಿತ್ರರಂಗದಲ್ಲಿ ರವಿಕಿಶನ್ ರವರು ಟಾಪ್ ನಟರಾಗಿ ಕಾಣಿಸಿಕೊಳ್ಳುತ್ತಿದ್ದರು. ಹೌದು ಸರಿ ನಗ್ಮಾ ರವರು ರವಿ ಕಿಶನ್ ರವರ ಜೊತೆಗೆ ಸಾಕಷ್ಟು ಭೋಜಪುರಿ ಚಿತ್ರರಂಗದಲ್ಲಿ ಕಾಣಿಸಿ ಕೊಳ್ಳುವುದರ ಮೂಲಕ ಸುದ್ದಿಗೆ ಬರುತ್ತಾರೆ. ಇನ್ನು ಇವರಿಬ್ಬರ ಹಲವಾರು ಚಿತ್ರಗಳು ಕೂಡ ಸೂಪರ್ ಹಿಟ್ ಆಗುತ್ತದೆ. ಇನ್ನು ಇವರಿಬ್ಬರ ನಡುವೆ ಕೂಡ ಪ್ರೀತಿ-ಪ್ರೇಮ ಹೋಗಿ ಆಡಲು ಪ್ರಾರಂಭಿಸುತ್ತದೆ.

ಆದರೆ ಇದರಿಂದ ಖುದ್ದು ರವಿ ಕಿಶನ್ ರವರೆ ದೂರಾಗಲು ಬಯಸಿ ಬಿಗ್ಬಾಸ್ ಗೆ ತೆರಳುತ್ತಾರೆ. ತನ್ನ ಮೂರನೇ ಸಂಬಂಧವು ಕೂಡ ರವಿ ಕಿಶನ್ ಅವರ ಜೊತೆಗೆ ಮುಗಿದು ಹೋಗಿದ್ದರಿಂದ ಬೇಸರಗೊಂಡಂತಹ ಹಾಗೂ ಅವರ ಮೇಲೆ ಸಿಟ್ಟಿಗೆ ಭೋಜಪುರಿ ಚಿತ್ರರಂಗದ ಇನ್ನೊಬ್ಬ ಸೂಪರ್ ಸ್ಟಾರ್ ಆಗಿದ್ದಂತಹ ಮನೋಜ್ ತಿವಾರಿ ಅವರೊಂದಿಗೆ ನಗ್ಮಾ ರವರು ನಟಿಸಲು ಪ್ರಾರಂಭಿಸುತ್ತಾರೆ. ಮನೋಜ್ ತಿವಾರಿ ಹಾಗೂ ನಗ್ಮಾ ರವರ ಜೋಡಿ ಕೂಡ ಸಾಕಷ್ಟು ಯಶಸ್ಸನ್ನು ಕಾಣುತ್ತದೆ ಇಲ್ಲಿ ಕೂಡ ಅದೇ ಹಳೇ ರಾಗ ಅದೇ ಹಾಡು ಎಂಬಂತೆ ಪ್ರೀತಿಯ ಉದ್ಭವವಾಗುವುದರಲ್ಲಿತ್ತು ಆದರೆ ಮನೋಜ್ ತಿವಾರಿ ಅವರಿಗೆ ಈಗಾಗಲೇ ಮದುವೆಯಾಗಿತ್ತು. ಹೀಗಾಗಿ ನಗ್ಮಾ ರವರ ನಾಲ್ಕನೆಯ ಪ್ರೇಮಸಂಬಂಧ ಕೂಡ ಅಲ್ಲಿಗೆ ಮುಗಿಯಿತು. ಹೀಗಾಗಿ ನಗ್ಮ ರವರ ಜೀವನದಲ್ಲಿ ಬಂದಂತಹ ನಾಲ್ಕು ಪುರುಷರು ಕೂಡ ಹೆಚ್ಚು ಕಾಲ ಇರಲು ಸಾಧ್ಯವಾಗಲಿಲ್ಲ. ಈಗ ನಗ್ಮಾ ರವರು ತಮ್ಮ ಹೆಸರನ್ನು ಬದಲಾಯಿಸಿಕೊಂಡು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿ ಚಿತ್ರರಂಗದಿಂದ ದೂರವಾಗಿ ನಿಮ್ಮದೇ ಬದುಕನ್ನು ಸಾಗಿಸುತ್ತಿದ್ದಾರೆ.

Get real time updates directly on you device, subscribe now.