ಮೇಘನಾ ರಾಜ್ ಹಾಗೂ ಜೂನಿಯರ್ ಚಿರುಸರ್ಜ ರವರ ಗಣೇಶ ಹಬ್ಬದ ಆಚರಣೆಯ ವಿಡಿಯೋ ಹೇಗಿದೆ ಗೊತ್ತೇ??

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮೇಘನರಾಜ್ ರವರಿಗೆ ಈಗಾಗಲೇ ತಮ್ಮ ಮಗ ಜೂನಿಯರ್ ಚಿರು ಸರ್ಜಾ ರವರಿಗೆ ನಾಮಕರಣವನ್ನು ಅದ್ದೂರಿಯಾಗಿ ಮಾಡಿದಂತಹ ಸಂಭ್ರಮ ಈಗಾಗಲೇ ಇದೆ. ಈಗ ಗಣೇಶನ ಹಬ್ಬ ಕೂಡ ಬಂದು ಆ ಸಂತೋಷ ಇನ್ನಷ್ಟು ಇಮ್ಮಡಿಯಾಗಿದೆ. ಹೌದು ಸ್ನೇಹಿತರೆ ಮದುವೆಯಾಗುವ ಮುನ್ನ ಮೇಘನರಾಜ ರವರು ತಮ್ಮ ತಂದೆ ತಾಯಿಯಾದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಅವರೊಂದಿಗೆ ಗಣೇಶನ ಹಬ್ಬವನ್ನು ಆಚರಿಸುತ್ತಿದ್ದರು.

ಮದುವೆಯಾದ ನಂತರ ಚಿರುಸರ್ಜ ಹಾಗೂ ಅವರ ಕುಟುಂಬದ ಜೊತೆಗೆ ಗಣೇಶೋತ್ಸವನ್ನು ಆಚರಿಸುತ್ತಿದ್ದರು. ಆದರೆ ಈಗ ಚಿರುಸರ್ಜ ರವರ ಅನುಪಸ್ಥಿತಿಯಲ್ಲಿ ಮಗನಾಗಿರುವ ಜೂನಿಯರ್ ಚಿರುಸರ್ಜ ಅಂದರೆ ” ರಾಯನ್ ರಾಜ್ ಸರ್ಜಾ ” ರವರೊಂದಿಗೆ ಗಣೇಶನ ಹಬ್ಬವನ್ನು ಸಂತೋಷದಿಂದ ಆಚರಿಸಿದ್ದಾರೆ. ಹೌದು ಸ್ನೇಹಿತರೆ ಮೇಘನರಾಜ ರವರು ಮಗನೊಂದಿಗೆ ಈ ಬಾರಿಯ ಗಣೇಶನ ಹಬ್ಬವನ್ನು ಸಂತೋಷದಿಂದ ತಮ್ಮ ಮನೆಯಲ್ಲಿ ಆಚರಿಸಿಕೊಂಡಿದ್ದಾರೆ.

ಹೌದು ಸ್ನೇಹಿತರೆ ಜೂನಿಯರ್ ಚಿರು ಸರ್ಜಾ ಅವರ ಕೈಯಲ್ಲಿ ಚಿಕ್ಕ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದಕ್ಕೆ ಅವರಿಂದಲೇ ಪೂಜೆಯನ್ನು ಮಾಡಿಸಿದ್ದಾರೆ ಮೇಘನಾರಾಜ್. ನಂತರ ಮನೆಯಲ್ಲಿಯೇ ಜಲಸ್ತಂಭನ ವನ್ನು ಕೂಡ ಮಾಡಿದ್ದಾರೆ. ಜೂನಿಯರ್ ಚಿರು ಸರ್ಜಾ ರವರು ಕೂಡ ಈ ಪ್ರಕ್ರಿಯೆಯನ್ನು ಆನಂದಿಸಿದ್ದು ಗಣೇಶನ ಪುಟ್ಟ ಮೂರ್ತಿಯನ್ನು ನೋಡಿ ಕುಣಿದು ಕುಪ್ಪಳಿಸಿದ್ದಾರೆ. ಜೂನಿಯರ್ ಚಿರು ಸರ್ಜಾ ಅವರಿಗೆ ಇದು ಮೊದಲನೆಯ ಗಣೇಶ ಹಬ್ಬ ಆಗಿದ್ದು ಖಂಡಿತವಾಗಿ ಅವರು ಇದನ್ನು ಆನಂದಿಸಿದ್ದಾರೆ ಎಂಬುದಾಗಿ ಮೇಘನರಾಜ ಅವರು ಹೇಳಿಕೊಂಡಿದ್ದಾರೆ. ಮೇಘನಾ ರಾಜ್ ಹಾಗೂ ಜೂನಿಯರ್ ಚಿರು ಸರ್ಜಾ ರವರ ಗಣೇಶೋತ್ಸವ ಆಚರಣೆ ನಿಮಗೆ ಏನನ್ನಿಸಿತು ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಿ.

Get real time updates directly on you device, subscribe now.