ಹೀರೋ ಗಳಿಗಿಂತ ಹೆಚ್ಚಿನ ಡಿಮ್ಯಾಂಡ್ ಹೊಂದಿರುವ ಖ್ಯಾತ ಅಚ್ಯುತ್ ಕುಮಾರ್ ರವರ ಒಂದು ದಿನದ ಸಂಭಾವನೆ ಎಷ್ಟು ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಸಿನಿಮಾ ಎಂದರೇ ಕೇವಲ ನಾಯಕ, ನಾಯಕಿಯರಲ್ಲದೇ ಪೋಷಕ ನಟರು ಕೆಲವೊಮ್ಮೆ ಪ್ರೇಕ್ಷಕರಲ್ಲಿ ಮರೆಯಲಾಗದಂತಹ ಸ್ಥಾನ ಪಡೆಯುತ್ತಾರೆ. ಅದು ಅಂದಿನ ಕೆ.ಎಸ್.ಅಶ್ವಥ್ ರಿಂದ ಹಿಡಿದು ಇಂದಿನ ಪ್ರಕಾಶ್ ರೈ, ಅಚ್ಯುತ್ ಕುಮಾರ್ ರವರ ತನಕ ಬಂದಿದೆ. ಸದ್ಯ ಕನ್ನಡದ ಹೆಸರಾಂತ ಪೋಷಕ ನಟರೆಂದರೇ ಅದು ಅಚ್ಯುತ್ ಕುಮಾರ್. ಎಲ್ಲಾ ಥರಹದ ಪಾತ್ರಗಳನ್ನು ಲೀಲಾಜಾಲವಾಗಿ ನಟಿಸುವ ಅಚ್ಯುತ್ ಸದ್ಯ ಕನ್ನಡದ ಬಹು ಬೇಡಿಕೆಯ ಪೋಷಕ ನಟ.

1966 ರಲ್ಲಿ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಜನಿಸಿದ ಇವರು ನಟನೆಯ ಮೇಲಿನ ತೀವ್ರ ಒಲವಿನಿಂದ ನೀನಾಸಂಗೆ ಸೇರಿದರು. ನಂತರ ಗೀರಿಶ್ ಕಾಸರವಳ್ಳಿಯವರ ಗೃಹ ಭಂಗ ಧಾರವಾಹಿಯಲ್ಲಿ ನಟಿಸಿದರು. ನಂತರ ಮೂಡಲಮನೆ, ಪ್ರೀತಿ ಇಲ್ಲದ ಮೇಲೆ ಹೀಗೆ ಧಾರವಾಹಿಗಳಲ್ಲಿ ನಟಿಸುತ್ತಿದ್ದ ಅಚ್ಯುತ್, ಆ ದಿನಗಳು ಚಿತ್ರದ ಆಯಿಲ್ ಕುಮಾರ್ ಪಾತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸಿದರು.

ನಂತರ ಮೊಗ್ಗಿನ ಮನಸು, ಕೃಷ್ಣನ್ ಲವ್ ಸ್ಟೋರಿ, ಲೂಸಿಯಾ, ಜೋಶ್, ಮನಸಾರೆ, ಕಿರಿಕ್ ಪಾರ್ಟಿ, ದೃಶ್ಯ, ನಾನು ನನ್ನ ಕನಸು, ರಾಮ್ ಹೀಗೆ ಕನ್ನಡದ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದರು. ಅದಲ್ಲದೇ ತಮ್ಮ ಮನೋಜ್ಞ ಅಭಿನಯಕ್ಕೆ ಫಿಲಂಫೇರ್ ಪ್ರಶಸ್ತಿ ಸಹ ಪಡೆದರು. ನಂತರ ತಮಿಳಿನ ಸೂಪರ್ ಹಿಟ್ ಮೂವಿ ವಿಕ್ರಂ ವೇದಾ ದಲ್ಲಿ ನಟಿಸುವ ಮೂಲಕ ಅಚ್ಯುತ್ ಕುಮಾರ್ ರವರ ಮಾರ್ಕೇಟ್ ಮತ್ತಷ್ಟು ಏರಿತು. ನಂತರ ತಮಿಳು , ತೆಲುಗು , ಮಲಯಾಳಿ ಹಾಗೂ ಹಿಂದಿ ಮೂವಿಗಳಲ್ಲಿ ಸಹ ನಟಿಸಿದ್ದಾರೆ. ಸದ್ಯ ಈಗ ಕೆ.ಜಿ.ಎಫ್ – 2 ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಇಷ್ಟೊಂದು ಬ್ಯುಸಿಯಾಗಿರುವ ಅಚ್ಯುತ್ ಕುಮಾರ್ ರವರ ಸಂಭಾವನೆ ಕೇಳಿದರೇ ನೀವು ಒಂದು ಕ್ಷಣ ಬೆಚ್ಚಿ ಬೀಳುತ್ತಿರಿ. ತಿಂಗಳ ಬಹುತೇಕ ದಿನಗಳಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಅಚ್ಯುತ್ ರವರ ಒಂದು ದಿನದ ಕಾಲ್ ಶೀಟ್ ಬೆಲೆ 80 ಸಾವಿರದಿಂದ ಒಂದು ಲಕ್ಷದ ವರೆಗೆ ಇದೆಯಂತೆ. ಕೆಲವೊಮ್ಮೆ ತಿಂಗಳಿಗೆ 30 ಲಕ್ಷಕ್ಕೂ ಹೆಚ್ಚು ಸಂಭಾವನೆಯನ್ನ ಅಚ್ಯುತ್ ಕುಮಾರ್ ಪಡೆದಿದ್ದಾರಂತೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.