ನಟಿ ಅನು ಪ್ರಭಾಕರ್ ಮುಖರ್ಜಿ ರವರ ಮನೆಯಲ್ಲಿ ಹಬ್ಬದಂದು ಎಷ್ಟೆಲ್ಲ ಸಂಭ್ರಮ ಮನೆ ಮಾಡಿತ್ತು ಗೊತ್ತೇ?? ಸುಂದರ ವಿಡಿಯೋ ನೋಡಿದ್ದೀರಾ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಗ್ಲಾಮರಸ್ ಹಾಗೂ ಸಾಂಸ್ಕೃತಿಕ ಎರಡು ಪಾತ್ರಗಳನ್ನು ನಿರ್ವಹಿಸಬಲ್ಲ ಅತ್ಯದ್ಭುತ ನಟಿಯಾಗಿ ಅನುಪ್ರಭಾಕರ್ ಅವರು ಕಾಣಿಸಿಕೊಂಡಿದ್ದರು. ಮೂಲತಹ ಅವರು ಚಿತ್ರರಂಗದ ಹಿನ್ನೆಲೆ ಉಳ್ಳಂತಹ ಕುಟುಂಬದಿಂದ ಬಂದಿದ್ದವರಾಗಿದ್ದರಿಂದ ಅವರಿಗೆ ನಟನೆ ಉತ್ತಮವಾಗಿಯೇ ಬಾಲ್ಯದಿಂದಲೂ ಬರುತ್ತಿತ್ತು.

ಅನುಪ್ರಭಾಕರ್ ಅವರು ಕನ್ನಡ ಚಿತ್ರರಂಗಕ್ಕೆ ಬಾಲನಟಿಯಾಗಿ ಪಾದರ್ಪಣೆ ಮಾಡಿದ್ದರು. ಚಪಲಚೆನ್ನಿಗರಾಯ ಎಂಬ ಚಿತ್ರದ ಮೂಲಕ ಅವರು ಬಾಲನಟಿಯಾಗಿ ಪಾದಾರ್ಪಣೆ ಮಾಡಿದ್ದರು. ಅನುಪ್ರಭಾಕರ್ ರವರು ನಟಿಯಾಗಿ 1999 ರಲ್ಲಿ ಶಿವರಾಜ್ ಕುಮಾರ್ ನಟನೆಯ ಹೃದಯ ಹೃದಯ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಇದುವರೆಗೂ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಗಳಾದಂತಹ ಶಿವರಾಜ್ಕುಮಾರ್ ರಮೇಶ್ ಅರವಿಂದ್ ವಿಷ್ಣುವರ್ಧನ್ ಹೀಗೆ ಹಲವಾರು ಖ್ಯಾತ ಕನ್ನಡ ನಟರೊಂದಿಗೆ ನಟಿಸಿದ್ದಾರೆ. ಇವರು ಮೊದಲಿಗೆ ಖ್ಯಾತ ನಟಿ ಜಯಂತಿ ಅವರ ಮಗನಾದ ಅಂತಹ ಕೃಷ್ಣಕುಮಾರ್ ಅವರನ್ನು ಮದುವೆಯಾಗಿದ್ದರು.

ನಂತರ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ವಿಚ್ಛೇದನವನ್ನು ಪಡೆದು ನಂತರ ನಟ ರಘು ಮುಖರ್ಜಿ ಅವರನ್ನು ಮದುವೆಯಾದರು. ಇಬ್ಬರು ಕೂಡ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ದರಿಂದ ಇವರಿಬ್ಬರ ಜೋಡಿ ಎಲ್ಲರ ಮನಗೆದ್ದಿತ್ತು. ಈಗ ಇವರಿಬ್ಬರು ಮದುವೆಯಾಗಿ ಈಗಾಗಲೇ ನಾಲ್ಕು ವರ್ಷಗಳು ಕಳೆದಿವೆ. ಈಗ ಇವರಿಬ್ಬರೂ ಸುಖ ಸಂಸಾರವನ್ನು ನಡೆಸುತ್ತಿದ್ದು ಎಲ್ಲರೂ ಇವರನ್ನು ಸೂಪರ್ ಜೋಡಿ ಎಂದು ಹೊಗಳುತ್ತಿದ್ದಾರೆ. ಇನ್ನು ಅನುಪ್ರಭಾಕರ್ ಹಾಗೂ ರಘು ಮುಖರ್ಜಿ ಅವರ ಫ್ಯಾಮಿಲಿಯ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲಾಗಿದ್ದು ನೀವು ಕೂಡ ಈ ಕೆಳಗಡೆ ವಿಡಿಯೋವನ್ನು ನೋಡಬಹುದಾಗಿದೆ. ಈ ಮುದ್ದಾದ ಫ್ಯಾಮಿಲಿ ವಿಡಿಯೋ ನೋಡಿ ನಿಮಗೇನನ್ನಿಸಿತು ಎಂದು ಕಾಮೆಂಟ್ ಬಾಕ್ಸ್ ನ ಮೂಲಕ ಕಾಮೆಂಟ್ ಮಾಡಿ ತಿಳಿಸಿ.

Get real time updates directly on you device, subscribe now.