ಗೆದ್ದರೆ ಜೀವನ ಸೆಟ್ಟಲ್ ಎಂದಿದ್ದ ಮಂಜು ಪಾವಗಡ 50 ಲಕ್ಷದಲ್ಲಿ ಏನು ಮಾಡಿದ್ದಾರೆ ಗೊತ್ತಾ?? ಕಣ್ಣೀರು ಹಾಕಿದ ಮಂಜು ತಾಯಿ.

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈಗಾಗಲೇ ಮಂಜು ಪಾವಗಡ ರವರು ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ವಿಜೇತರಾಗಿ ಹೊರಹೊಮ್ಮಿರುವುದು ಹಾಗೂ ಈ ಸುದ್ದಿಗೆ ಈಗಾಗಲೇ ಒಂದು ತಿಂಗಳಿಗೂ ಹೆಚ್ಚು ಕಾಲ ಆಗಿದೆ. ಹೌದು ಸ್ನೇಹಿತರೆ ಕಡುಬಡತನದಲ್ಲಿ ಬೆಳೆದು ಬಂದಂತಹ ಮಂಜು ಪಾವಗಡ ರವರು ಮೊದಲು ಬೆಂಗಳೂರಿನ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿ ನಂತರ ಮಜಾ ಭಾರತ ಮೂಲಕ ಬಿಗ್ ಬಾಸ್ ಗೆ ಕಾಲಿಟ್ಟು ಅಲ್ಲಿ ಕೂಡ 45 ಲಕ್ಷ ಜನರ ಬೆಂಬಲದೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನು ಈಗಾಗಲೇ ಮಂಜು ಪಾವಗಡ ರವರು ಅರ್ಧಕೋಟಿ ಬಹುಮಾನವನ್ನು ಪಡೆದುಕೊಂಡಿರುವುದು ನಿಮಗೆಲ್ಲ ಗೊತ್ತಿದೆ. ಈ ಹಣವನ್ನು ಮಂಜು ಪಾವಗಡ ರವರೆ ಏನು ಮಾಡಿದ್ದಾರೆ ಗೊತ್ತಾ ಸ್ನೇಹಿತರೆ. ಹೌದು ಸ್ನೇಹಿತರೆ ಈ ಹಣದಲ್ಲಿ ಈಗಾಗಲೇ ಮನೆಮಂದಿಗೆಲ್ಲ ಹೊಸಬಟ್ಟೆಯನ್ನು ಹಾಗೂ ತಾಯಿಗೆ ಚಿನ್ನವನ್ನು ಮಾಡಿಕೊಟ್ಟಿದ್ದಾರೆ. ಹೊಸ ಮನೆಯನ್ನು ಹಾಗೂ ತಾಯಿಯ ಇಷ್ಟದೇವರಾದ ಅಂತಹ ಧರ್ಮಸ್ಥಳದ ಮಂಜುನಾಥನ ಕ್ಷೇತ್ರಕ್ಕೆ ಕೂಡ ಭೇಟಿ ನೀಡಿದ್ದಾರೆ.

ಇನ್ನು ಲೈವ್ ನಲ್ಲಿ ಬಂದಾಗ ಮಂಜು ಪಾವಗಡ ರವರು ಪ್ರತಿಯೊಂದು ಜಿಲ್ಲೆಗೂ ಕೂಡ ಭೇಟಿ ನೀಡುತ್ತೇನೆ ಎಂದು ಹೇಳಿದರು ಇದಕ್ಕಾಗಿ ಕೂಡ ಹಣವನ್ನು ತೆಗೆದಿಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೆ ಈ ಹಣವನ್ನು ಅನಾಥಾ ಶ್ರಮಗಳಿಗೆ ಕೂಡ ಬಳಸಿ ಕೊಂಡಿದ್ದಾರೆ ಮತ್ತು ಹಲವಾರು ಸಾಮಾಜಿಕ ಕಾರ್ಯಗಳಿಗಾಗಿ ಕೂಡ ತೆಗೆದಿಟ್ಟಿದ್ದಾರೆ ಏಕೆಂದರೆ ಬಡತನದಿಂದ ಬಂದಿರುವಂತಹ ಮಂಜು ಪಾವಗಡ ರವರಿಗೆ ಬಡತನದ ಬೆಲೆ ಏನು ಎಂಬುದು ಗೊತ್ತಿದೆ. ಹೀಗಾಗಿ ಹಣವನ್ನು ತಮ್ಮ ಮುಂದಿನ ಭವಿಷ್ಯತ್ತಿಗಾಗಿ ಕೂಡ ತೆಗೆದು ಕೊಂಡಿದ್ದಾರೆ. ಇನ್ನು ಕೇವಲ ತನ್ನ ಸ್ವಂತ ಉಪಯೋಗಕ್ಕೆ ಮಾತ್ರವಲ್ಲದೆ ಪರರಿಗೂ ಕೂಡ ಸಹಾಯವನ್ನು ಮಾಡಲು ಹಣವನ್ನು ಇಟ್ಟುಕೊಂಡಿರುವುದು ಮಂಜು ಪಾವಗಡ ರವರ ದೊಡ್ಡ ಗುಣಕ್ಕೆ ಸಾಕ್ಷಿ ಎಂದು ಹೇಳಲಾಗುತ್ತದೆ.

Get real time updates directly on you device, subscribe now.