ಕೊನೆಗೂ ನಡೆಯಿತು ನಾಮಕರಣ, ಜೂನಿಯರ್ ಚಿರು ಹೆಸರು ಫೈನಲ್, ಏನಂತೆ ಗೊತ್ತಾ?? ಇದರ ವಿಶೇಷ ಅರ್ಥವೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಸರ್ಜಾ ಮನೆತನ ಎಂದಾಗ ನಮಗೆ ಈಗ ಮೊದಲಿಗೆ ನೆನಪಾಗುವುದು ಮೇಘನಾರಾಜ್ ಸರ್ಜಾ ರವರು. ಹೌದು ಸ್ನೇಹಿತರೆ ಚಿರು ಸರ್ಜಾ ಅವರನ್ನು ಕಳೆದುಕೊಂಡ ಮೇಲೆ ಒಬ್ಬಂಟಿಯಾಗಿದ್ದಾಗ ಬಾಳಿನಲ್ಲಿ ಬೆಳಕಾಗಿ ಬಂದಿದ್ದು ಅವರ ಮಗನಾದ ಜೂನಿಯರ್ ಚಿರುಸರ್ಜ ರವರು. ಚಿರು ಸರ್ಜಾ ರವರ ಅಗಲಿಕೆಯಿಂದ ಬಳಲಿದ್ದ ಎರಡು ಕುಟುಂಬಗಳು ಜೂನಿಯರ್ ಚಿರು ಸರ್ಜ ಬಂದಮೇಲೆ ಸಂತೋಷದ ಸಮುದ್ರದಲ್ಲಿ ತೇಲಾಡಿದಂತೆ ಅನುಭವಿಸಿದ್ದರು. ಇದ್ದ ಒಬ್ಬನೇ ಮೊಮ್ಮಗನನ್ನು ಎರಡು ಕುಟುಂಬದವರು ಕೂಡ ರಾಜನಂತೆ ಪಾಲಿಸಲು ಆರಂಭಿಸಿದರು.
ಅದರಲ್ಲೂ ಜೂನಿಯರ್ ಚಿರು ಸರ್ಜಾ ತೊಟ್ಟಿಲು ಕಾರ್ಯಕ್ರಮದಲ್ಲಿ ಚಿಕ್ಕಪ್ಪನಾದ ದ್ರುವಸರ್ಜಾ ರವರು ಲಕ್ಷಾಂತರ ಬೆಲೆಯ ಬೆಳ್ಳಿಯ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದರು. ಇನ್ನು ಮೇಘನರಾಜ್ ರವರು ತಮ್ಮ ಮಗ ಜೂನಿಯರ್ ಚಿರು ಸರ್ಜಾ ಅವರ ಫೋಟೋ ಹಾಗೂ ವಿಡಿಯೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಅವರ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಕಾಯುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಜೂನಿಯರ್ ಚಿರು ಸರ್ಜಾ ರವರು ಸ್ಯಾಂಡಲ್ವುಡ್ ಚಿತ್ರರಂಗದ ಸೆಲೆಬ್ರಿಟಿ ಮಗುವಾಗಿ ಪ್ರಸಿದ್ಧರಾಗಿದ್ದಾರೆ. ಇನ್ನು ಇಡೀ ಕನ್ನಡ ಚಿತ್ರರಂಗವೇ ಜೂನಿಯರ್ ಚಿರು ಸರ್ಜಾ ರವರ ನಾಮಕರಣ ಕಾರ್ಯಕ್ರಮಕ್ಕೆ ಕಾತುರದಿಂದ ಕಾಯುತ್ತಿತ್ತು.

ಹೌದು ಸ್ನೇಹಿತರೆ ಮೇಘನರಾಜ ಅವರ ಏಕೈಕ ಪುತ್ರನಾಗಿರುವ ಜೂನಿಯರ್ ಚಿರುಸರ್ಜ ರವರ ನಾಮಕರಣ ಕಾರ್ಯಕ್ರಮ ಇಂದು ನಡೆದಿದ್ದು ಅವರ ಹೆಸರು ಕೂಡ ರಿವಿಲ್ ಆಗಿದೆ. ಹೌದು ಸ್ನೇಹಿತರೆ ಗುರು ಹಿರಿಯರ ಸಮ್ಮುಖದಲ್ಲಿ ಶಾಸ್ತ್ರ ಪ್ರಕಾರವಾಗಿ ನಡೆದಂತಹ ಈ ನಾಮಕರಣ ಕಾರ್ಯಕ್ರಮದಲ್ಲಿ ಜೂನಿಯರ್ ಚಿರು ಸರ್ಜಾ ಅವರ ಹೆಸರನ್ನು ರಾಯನ್ ರಾಜ್ ಸರ್ಜಾ ಎಂದು ಹೆಸರು ಇಡಲಾಗಿದೆ, ರಾಯಣ್ ಎಂದರೆ ಉತ್ತಮ ಆಲೋಚನೆಕಾರ, ಬುದ್ದಿವಂತ ಎಂಬ ಅರ್ಥ ಬರುತ್ತದೆ. ಈ ಹೆಸರು ಹೇಗಿದೆ ಹಾಗೂ ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.