ಚರ್ಚಿನಲ್ಲಿ ಜೂನಿಯರ್ ಚಿರುಸರ್ಜ ನಾಮಕರಣ ಮಾಡುವುದಕ್ಕೆ ಇದ್ದಕ್ಕಿದ್ದಂತೆ ಅರ್ಜುನ್ ಸರ್ಜಾ ಹೇಳಿದ್ದೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಹಲವಾರು ತಿಂಗಳುಗಳಿಂದ ಕಾಯುತ್ತಿದ್ದಂತಹ ಶುಭ ಸಂದರ್ಭ ಇಂದು ಬಂದೊದಗಿದೆ ಹಾಗೂ ಎಲ್ಲರ ಮನಸ್ಸು ಕೂಡ ಸಂತೃಪ್ತಿ ಆಗಿದೆ. ಹೌದು ಸ್ನೇಹಿತರೆ ನಾವು ಮಾತನಾಡುತ್ತಿರುವುದು ದಿವಂಗತ ಚಿರು ಸರ್ಜಾ ಹಾಗೂ ಮೇಘನಾ ರಾಜ್ ಅವರ ಪುತ್ರರಾಗಿರುವ ಜೂನಿಯರ್ ಚಿರುಸರ್ಜ ರವರ ನಾಮಕರಣ ಕಾರ್ಯಕ್ರಮದ ಕುರಿತು. ಹೌದು ಸ್ನೇಹಿತರೆ ಜೂನಿಯರ್ ಚಿರು ಸರ್ಜಾ ಹುಟ್ಟಿದಾಗಿನಿಂದಲೂ ಕೂಡ ಪ್ರತಿಯೊಬ್ಬರಿಂದ ಪ್ರೀತಿಯ ಮಗುವಾಗಿದ್ದರು.
ಇನ್ನು ಜೂನಿಯರ್ ಚಿರು ಸರ್ಜಾ ರವರಿಗೆ ಇಂದು ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ನಾಮಕರಣ ಶಾಸ್ತ್ರವನ್ನು ಮಾಡಲಾಗಿದೆ. ರಾಯನ್ ರಾಜ್ ಸರ್ಜಾ ಎಂದು ಮಗುವಿಗೆ ನಾಮಕರಣ ಮಾಡಲಾಗಿದ್ದು ಈಗಾಗಲೇ ಈ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯನ್ನು ಮಾಡುತ್ತಿದೆ. ವಿಭಿನ್ನ ಹಾಗೂ ವಿಶೇಷವಾಗಿರುವ ಈ ಹೆಸರು ಎಲ್ಲರ ಮನಸ್ಸಿಗೆ ಇಷ್ಟವಾಗಿದೆ. ಇನ್ನು ಮೊಮ್ಮಗನ ಕುರಿತಂತೆ ಅರ್ಜುನ್ ಸರ್ಜಾರ ಅವರು ಏನು ಹೇಳಿದ್ದಾರೆ ಗೊತ್ತಾ ಸ್ನೇಹಿತರೆ ಬನ್ನಿ ನಾವು ನಿಮಗೆ ವಿವರವಾಗಿ ಹೇಳುತ್ತೇನೆ.

ಹೌದು ಸ್ನೇಹಿತರ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ರವರು ಮಗನ ನಾಮಕರಣವನ್ನು ಚಿರುಸರ್ಜ ಸ್ವರ್ಗ ದಿಂದಲೇ ಮೋಡದ ಮರೆಯಲ್ಲಿ ನಿಂತುಕೊಂಡು ನೋಡುತ್ತಿದ್ದಾನೆ ಎಂಬುದಾಗಿ ಭಾವುಕರಾಗಿ ಹೇಳಿಕೊಂಡಿದ್ದರು. ಈಗಾಗಲೇ ಜೂನಿಯರ್ ಚಿರು ಸರ್ಜಾ ರವರ ನಾಮಕರಣ ಸ್ಯಾಂಡಲ್ವುಡ್ನಲ್ಲಿ ಸಕ್ಕತ್ ದೊಡ್ಡ ಸುದ್ದಿಯಾಗಿ ಸದ್ದು ಮಾಡುತ್ತಿದೆ. ಜೂನಿಯರ್ ಚಿರುಸರ್ಜ ರವರ ಹೆಸರಿನ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.