ಬಿಗ್ ಬಾಸ್ ಸೋತರು ಕೂಡ ಅರವಿಂದ್ ರವರಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತೇ?? ಸಂಭಾವನೆ ನೋಡಿ ಮಂಜು ಕೂಡ ಶಾಕ್,

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಸಾಕಷ್ಟು ಕುತೂಹಲ ಮೂಡಿಸಿ ಕಿರುತೆರೆ ಪ್ರೇಕ್ಷಕರ ನೆಚ್ಚಿನ ರಿಯಾಲಿಟಿ ಶೋ ಆಗಿ ಮಿಂಚಿದ್ದ ಬಿಗ್ ಬಾಸ್ ಈಗಾಗಲೇ ಮುಕ್ತಾಯಗೊಂಡಿದೆ. ಮಂಜು ಪಾವಗಡ ರವರು ಮೊದಲನೇ ಸ್ಥಾನ ಹಾಗೂ ಉಡುಪಿ ಮೂಲದ ಬೈಕ್ ರೇಸ್ ಅರವಿಂದ ಕೆಪಿ ಅವರು ಎರಡನೇ ಸ್ಥಾನವನ್ನು ಪಡೆದಿದ್ದಾರೆ.

ಫೈನಲ್ಗೆ ಟಾಪ್ 5 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. 5ನೇ ಸ್ಥಾನದಲ್ಲಿ ಉದ್ಯಮಿ ಪ್ರಶಾಂತ್ ಸಂಬರ್ಗಿ ನಂತರ ನಾಲ್ಕನೇ ಸ್ಥಾನದಲ್ಲಿ ಕಿರುತೆರೆಯ ನಟಿ ಸನ್ನಿಧಿ ಖ್ಯಾತಿಯ ವೈಷ್ಣವಿ ಗೌಡ ರವರು ಮೂರನೇ ಸ್ಥಾನದಲ್ಲಿ ದಿವ್ಯ ಉರುಡುಗ ಕಾಣಿಸಿಕೊಳ್ಳುತ್ತಾರೆ. ಇನ್ನು ಟಾಪ್ ಎರಡು ಅಭ್ಯರ್ಥಿಗಳಾದಂತಹ ಮಂಜು ಪಾವಗಡ ಹಾಗೂ ಅರವಿಂದ ಕೆ ಪಿ ರವರನ್ನು ಸ್ವತಹ ಕಿಚ್ಚ ಸುದೀಪ್ ರವರು ವೇದಿಕೆಯ ಮೇಲೆ ಕರೆತರುತ್ತಾರೆ. ನಂತರ ವೇದಿಕೆ ಮೇಲೆ ಕಿಚ್ಚ ಸುದೀಪ್ ರವರು ಮಂಜು ಪಾವಗಡ ರವರ ಕೈಯನ್ನು ಎತ್ತುವ ಮೂಲಕ ಅವರನ್ನು ಈ ಬಾರಿಯ ಬಿಗ್ ಬಾಸ್ ವಿನ್ನರ್ ಎಂಬುದನ್ನು ಘೋಷಣೆ ಮಾಡುತ್ತಾರೆ.

ಇನ್ನು ಮಂಜು ಪಾವಗಡ ರವರು ಬಿಗ್ ಬಾಸ್ ಗೆದ್ದ 53 ಲಕ್ಷ ರೂಪಾಯಿಯನ್ನು ಬಹುಮಾನವಾಗಿ ಪಡೆದುಕೊಂಡರು. ಅರವಿಂದ್ ಕೆಪಿ ರವರು ಪಡೆದುಕೊಂಡಂತಹ ಸಂಭಾವನೆ ಎಷ್ಟು ಗೊತ್ತಾ ಸ್ನೇಹಿತರೆ. ಎರಡನೇ ಸ್ಥಾನಪಡೆದ ಕ್ಕಾಗಿ ಅರವಿಂದ್ ಕೆಪಿ ರವರು ಬರೋಬ್ಬರಿ 11 ಲಕ್ಷ ರೂಪಾಯಿ ಹಾಗೂ ಫೈನಲ್ ತಲುಪಿದ್ದ ಕ್ಕಾಗಿ 2 ಲಕ್ಷ ರೂಪಾಯಿ. ಇನ್ನು 17 ವಾರಕ್ಕೆ ಸಂಭಾವನೆಯಂತೆ ಪ್ರತಿ ವಾರಕ್ಕೆ rs.50000 ಲೆಕ್ಕದಲ್ಲಿ ಮೊಟ್ಟ 8.50 ಲಕ್ಷ ರೂಪಾಯಿ ಸಿಕ್ಕಿದೆ. ಒಟ್ಟು ಮೊತ್ತ ಸರಿಸುಮಾರು 25 ಲಕ್ಷ ರೂಪಾಯಿ ನಗದು ಬಹುಮಾನ ಅರವಿಂದ್ ಅವರಿಗೆ ಸಿಕ್ಕಿದೆ ಎಂದು ಹೇಳಬಹುದು.

Get real time updates directly on you device, subscribe now.