ಆಡಿಸಿ ನೋಡು ಬೀಳಿಸಿ ನೋಡು ಹಾಡಿನಲ್ಲಿ ಅಣ್ಣಾವ್ರ ಜೊತೆ ಕಾಣಿಸಿಕೊಂಡ ಬೇಬಿ ರಾಣಿ ಈಗ ಹೇಗಿದ್ದಾರೆ ಗೊತ್ತಾ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ನಟ ಹಾಗೂ ನಟಿಯರಷ್ಟೆ ಜನಪ್ರಿಯತೆಯನ್ನು ಪೋಷಕ ನಟರು ಕೂಡ ಪಡೆದಿರುತ್ತಾರೆ. ಈ ಸಾಲಿಗೆ ಬಾಲ ನಟ-ನಟಿಯರು ಕೂಡ ಬಂದು ಹೋಗಿದ್ದಾರೆ. ಉದಾಹರಣೆಗೆ ಕನ್ನಡ ಚಿತ್ರರಂಗದಲ್ಲಿ ಅಂದಿನ ಕಾಲದಲ್ಲಿ ಬೇಬಿಶಾಮಿಲಿ ಎಂಬ ಬಾಲನಟಿ ಸ್ಟಾರ್ ನಟರ ಗಿಂತಲೂ ಹೆಚ್ಚಿನ ಸಂಭಾವನೆ ಹಾಗೂ ಜನಪ್ರಿಯತೆಯನ್ನು ಪಡೆದುಕೊಂಡಿದ್ದನ್ನು ನೀವು ನೋಡಿರುತ್ತೀರಿ.

ನಾವು ಇಂದು ಮಾತನಾಡಲು ಹೊರಟಿರುವ ಬಾಲನಟಿ ಕೂಡ ಒಂದು ಕಾಲದಲ್ಲಿ ಅಷ್ಟು ಜನಪ್ರಿಯರಾಗಿದ್ದರು. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಬೇಬಿ ರಾಣಿ ಎಂಬ ಖ್ಯಾತ ಬಾಲನಟಿ ಕುರಿತಂತೆ. ತಮಿಳು ಚಿತ್ರರಂಗದ ಮೂಲಕ ಬಾಲನಟಿಯಾಗಿ ಚಿತ್ರಗಳು ಅದಕ್ಕೆ ಕಾಲಿಟ್ಟ ಇವರು 50ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ಇನ್ನು ಕನ್ನಡ ಚಿತ್ರರಂಗದಲ್ಲಿ ಕೂಡ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ರವರ ಎಂದೆಂದೂ ಮರೆಯಲಾಗದಂತ ಎವರ್ಗ್ರೀನ್ ಚಿತ್ರ ಕಸ್ತೂರಿ ನಿವಾಸ ಚಿತ್ರದಲ್ಲಿ ಕೂಡ ನೀವು ಆಡಿಸಿ ನೋಡು ಬೀಳಿಸಿ ನೋಡು ಗೊಂಬೆ ಹೇಳುತೈತೆ ಸಾಂಗ್ ನಲ್ಲಿ ಈ ಮಗುವನ್ನು ಕಾಣಬಹುದು.

1966 ರಲ್ಲಿ ಚಿತ್ರರಂಗಕ್ಕೆ ಬಾಲನಟಿಯಾಗಿ ಕಾಲಿಟ್ಟ ಇವರು ಹಲವಾರು ಚಿತ್ರಗಳಲ್ಲಿ ಹಲವಾರು ಸೂಪರ್ಸ್ಟಾರ್ ನಟರೊಂದಿಗೆ ಬಾಲನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇವರು ಕುಂಜತ್ತಾಯಗ ಎಂಬ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ಹಾಗೂ ಕಣ್ಣೇ ಪಾಪ ಎಂಬ ಚಿತ್ರಕ್ಕೆ ತಮಿಳು ರಾಜ್ಯ ಸರ್ಕಾರದ ಪ್ರಶಸ್ತಿಯನ್ನು ಪಡೆದಿದ್ದಾರೆ. ಇನ್ನು ಅಂದು ಬಾಲನಟಿಯಾಗಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಬೇಬಿ ರಾಣಿ ಈಗ ಹೇಗಿದ್ದಾರೆ ಎಂಬ ಕುತೂಹಲ ನಿಮಗಿರುತ್ತದೆ., ಅವರ ಕೆಲವೊಂದು ಫೋಟೋ ಗಳನ್ನೂ ಮೇಲೆ ಹಾಕಾಲಾಗಿದ್ದು, ನೀವೇ ನೋಡಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Get real time updates directly on you device, subscribe now.