ಕೆಜಿಎಫ್ ಭಾಗ 2 ಬಿಡಿ, ಯಶ್ ರವರ ಮತ್ತೊಂದು ಚಿತ್ರದ ಪಾರ್ಟ್ 2 ಚಿತ್ರೀಕರಣ ಆರಂಭ ಫಿಕ್ಸ್?? ಯಾವುದು ಆ ಟಾಪ್ ಚಿತ್ರ ಗೊತ್ತಾ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಪ್ರೀತಿಸುವಂತಹ ಚಿತ್ರಗಳು ಸಿಗೋದು ಅಪರೂಪ ವಿರಳಾತಿವಿರಳ. ಆದರೆ ನಾವು ಈಗ ಹೇಳಹೊರಟಿರುವ ಚಿತ್ರ ಖಂಡಿತವಾಗಿ ಲಿಸ್ಟಿನಲ್ಲಿ ಬರೋದು ಖಂಡಿತ. ಹೌದು ಸ್ನೇಹಿತರೆ ನಿಮಗೆಲ್ಲ ಗೊತ್ತಿರುವಂತೆ ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮ ಪರಿಶ್ರಮ ಹಾಗೂ ಕಷ್ಟದ ಮೂಲಕ ಕನ್ನಡ ಚಿತ್ರರಂಗದಲ್ಲಿ ಇಂದು ಸಾರ್ ನಟರಾಗಿ ಮಿಂಚುತ್ತಿದ್ದಾರೆ.
ಇನ್ನು ಅವರಿಗೆ ಮೊದಲ ಅತ್ಯಂತ ದೊಡ್ಡ ಯಶಸ್ಸು ತಂದುಕೊಟ್ಟಂತಹ ಚಿತ್ರವೆಂದರೆ ಅದು ಖಂಡಿತವಾಗಿಯೂ ಪವನ್ ಒಡೆಯರ್ ನಿರ್ದೇಶನದ ಗೂಗ್ಲಿ ಚಿತ್ರ. ಹೌದು ಸ್ನೇಹಿತರೆ ಗೂಗ್ಲಿ ಚಿತ್ರವನ್ನು ಕನ್ನಡ ಚಿತ್ರರಂಗದ ಎಲ್ಲಾ ಪ್ರೇಕ್ಷಕರು ಕೂಡ ಮೆಚ್ಚಿದ್ದರು. ಅಂದಿನ ಕಾಲದಲ್ಲಿ ಗೂಗ್ಲಿ ಚಿತ್ರದ ಹೇರ್ ಸ್ಟೈಲ್ ಪ್ರತಿಯೊಬ್ಬ ಹುಡುಗನ ತಲೆಯಲ್ಲಿ ಇರುತ್ತಿತ್ತು. ಇನ್ನು ಎಲ್ಲದಕ್ಕಿಂತ ಹೆಚ್ಚಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಕೃತಿ ಕರಬಂದ ಜೋಡಿಯನ್ನು ಈ ಚಿತ್ರದ ಮೂಲಕ ಎಲ್ಲರೂ ಹೆಚ್ಚಾಗಿ ಮೆಚ್ಚಿದ್ದರು. ಇನ್ನು ಇತ್ತೀಚಿಗಷ್ಟೇ ಜುಲೈ 19ರಂದು ಗೂಗ್ಲಿ ಚಿತ್ರ 9 ವರ್ಷವನ್ನು ಪೂರೈಸಿತ್ತು. ಈಗ ಗೂಗ್ಲಿ 2 ಬರುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿ ಎದ್ದು ಕಾಣುತ್ತಿವೆ.

ಹೌದು ಸ್ನೇಹಿತರೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಗೂಗ್ಲಿ ಚಿತ್ರದ ಕುರಿತಂತೆ ಕೊನೆಯ ಬಾರಿಗೆ ಪವನ್ ಒಡೆಯರ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾಗ ರಾಕಿಂಗ್ ಸ್ಟಾರ್ ಯಶ್ ರವರು ಇನ್ನೊಂದ್ಸಲ ಗೂಗ್ಲಿ ನಾ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದರು. ಇಷ್ಟು ಮಾತ್ರವಲ್ಲದೆ ನಟಿಯಾಗಿರುವ ಕೃತಿಕರಬಂದ ಕೂಡ ಖಂಡಿತವಾಗಿಯೂ ಇನ್ನೊಮ್ಮೆ ಸೇರಬೇಕು ಎಂಬುದಾಗಿ ಟ್ವೀಟ್ ಮಾಡಿದ್ದರು. ನಿರ್ಮಾಪಕರಾದ ಜಯಣ್ಣ ಭೋಗೇಂದ್ರ ಕೂಡ ಇನ್ನೊಮ್ಮೆ ಪಾರ್ಟಿ ನಮ್ಮದು ಎಂದು ಪ್ರತಿಕ್ರಿಯಿಸಿದ್ದರು. ಈ ಎಲ್ಲಾ ಟ್ವೀಟ್ ಹಾಗೂ ಪೋಸ್ಟ್ಗಳ ಮೂಲಕ ಮತ್ತೊಮ್ಮೆ ಗೂಗ್ಲಿ 2 ಏನಾದರೂ ರೆಡಿಯಾಗ್ತಿದ್ಯಾ ಎಂಬ ಅನುಮಾನ ಹುಟ್ಟಿಕೊಂಡಿರೋದಂತೂ ಸುಳ್ಳಲ್ಲ. ನಿಮಗೆ ಏನು ಅನಿಸುತ್ತದೆ ಸ್ನೇಹಿತರೆ ನೀವು ಕೂಡ ಗೂಗ್ಲಿ 2ಕ್ಕೆ ಕಾಯುತ್ತಿದ್ದೀರಾ.