ಬಡತನ ಯಾಕಿದೆ? ನೀವ್ಯಾಕೆ ಎಲ್ಲರ ಮನೆಯಲ್ಲೂ ನೆಲೆಸುವುದಿಲ್ಲ ಎಂದ ಇಂದ್ರನಿಗೆ ತಾಯಿ ಲಕ್ಷ್ಮಿ ಉತ್ತರ ನೀಡಿದ್ದು ಹೇಗೆ ಗೊತ್ತಾ?

78

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಭೂಮಿಯಲ್ಲಿ ಬಡತನ ಹಾಗೂ ಶ್ರೀಮಂತ ಎನ್ನುವ ಬೇಧ ಯಾಕಿದೆ!? ಎಲ್ಲರೂ ಏಕೆ ಹಣವನ್ನು ಹೊಂದಿರುವುದಿಲ್ಲ? ಲಕ್ಷ್ಮೀ ಯನ್ನು ಎಲ್ಲರೂ ಪೂಜಿಸುತ್ತಾರೆ. ಲಕ್ಷ್ಮೀ ತಮ್ಮ ಮನೆಯಲ್ಲಿ ನೆಲೆಸಲಿ ಎಂದು ಪ್ರಾರ್ಥಿಸುತ್ತಾರೆ. ಆದರೆ ಲಕ್ಷ್ಮಿ ಅಷ್ಟು ಸುಲಭವಾಗಿ ಓಲಿಯುವುದಿಲ್ಲ. ಲಕ್ಷ್ಮೀ ಇಲ್ಲದ ಕಡೆ ಬಡತನ ಇರತ್ತೆ. ಹಾಗಾದರೆ ಈ ಬಡತನಕ್ಕೆ ಕಾರಣ ಏನು? ಲಕ್ಷ್ಮೀ ಯಾಕೆ ಎಲ್ಲೆಡೆಯೂ ಇರುವುದಿಲ್ಲ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ನಮಗೆ ಮಾತ್ರವಲ್ಲ. ಒಮ್ಮೆ ಇಂದ್ರದೇವನೂ ಕೂಡ ಇದೆ ಪ್ರಶ್ನೆ ಲಕ್ಷ್ಮಿ ಗೆ ಕೇಳುತ್ತಾನೆ.

‘ತಾಯಿ, ಈ ಜಗತ್ತಿನಲ್ಲಿ ಬಡತನ ಯಾಕಿದೆ. ಯಾಕೆ ಹಲವಾರು ಬಡವರಾಗಿಯೇ ಉಳಿದಿದ್ದಾರೆ, ಹಾಗೂ ಯಾಕೆ ಸಾಕಷ್ಟು ಜನ ಶ್ರೀಮಂತರಾಗಿದ್ದರೆ’ ಎಂದು ಕೇಳುತ್ತಾನೆ’. ಆಗ ಲಕ್ಷ್ಮೀ ದೇವಿ ಇಂದ್ರದೇವನಿಗೆ ಸರಿಯಾಗಿ ಉತ್ತರಿಸುತ್ತಾಳೆ. ಮಗ ಇಂದ್ರ ‘ನನ್ನನ್ನು ಪೂಜೆ ಮಾಡುತ್ತಾರೆ ಎಂಬ ಕಾರಣಕ್ಕೆ ನಾನು ನೆಲೆಸುವುದಿಲ್ಲ. ಯಾಕೆಂದರೆ ಪೂಜೆ ಭಕ್ತಿಯಿಂದ ಮಾಡಬೇಕು ಕೇವಲ ಆಡಂಬರಕ್ಕಲ್ಲ.

ಇನ್ನು ಮನೆಯಲ್ಲಿ ಸ್ವಚ್ಛತೆ ಇರಬೇಕು. ಮನೆಯಲ್ಲಿ ಮನಸ್ಸಲ್ಲಿ ಎರಡರಲ್ಲೂ ಕೊಳಕು ಇದ್ದರೆ ಅಂಥ ಸ್ಥಳಕ್ಕೆ ನಾನು ಹೋಗುವುದೇ ಇಲ್ಲ. ಶಾಂತಿ ಇರುವ ಮನೆಯಲ್ಲಿಯೇ ನನ್ನ ವಾಸ. ಮನೆಯಲ್ಲಿ ಸದಾ ಕಿರಿಕಿರಿ, ಜಗಳಗಳಿದ್ದಲ್ಲಿ ನಾನು ಕಾಲಿಡುವುದಿಲ್ಲ. ಹಾಗಾಗಿ ನಾನು ಕ್ರಮಬದ್ಧವಾಗಿ ಬದುಕುವವರ ಜೊತೆಗೆ ಇರುತ್ತೇನೆ. ಅವರ ಪಾಪ ಪುಣ್ಯಗಳ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಅವರವರ ಕಾರ್ಯಗಳು ನಾನು ಅಲ್ಲಿ ಇರಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತದೆ’ ಎಂದು ಉತ್ತರಿಸುತ್ತಾಳೆ ಲಕ್ಷ್ಮೀ ದೇವಿ. ಹಾಗಾಗಿ ಸ್ನೇಹಿತರೇ, ನಿಮ್ಮ ಮನೆಯ ಸಮೃದ್ಧಿಗಾಗಿ ನಿಮ್ಮ ನಡವಳಿಕೆಗಳೂ ಸರಿಯಾಗಿ ಇರಬೇಕು.

Get real time updates directly on you device, subscribe now.