ದೀಪಕ್ ಚಾಹರ್ ಗೆ ಅವಮಾನ ಮಾಡಿದ್ದ ವಿದೇಶಿ ಕೋಚ್ ಗೆ ಟಾಂಗ್ ಕೊಟ್ಟ ಭಾರತೀಯ ಕ್ರಿಕೇಟರ್ ಯಾರು ಗೊತ್ತಾ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಪಂದ್ಯದಲ್ಲಿ ಭಾರತ ಗೆದ್ದಿದ್ದೇ ಗೆದ್ದಿದ್ದು. ಆ ಪಂದ್ಯದ ಹೀರೋ ದೀಪಕ್ ಚಾಹರ್ ಸದ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಸೂಪರ್ ಸ್ಟಾರ್ ಆಗಿದ್ದಾರೆ. ದೀಪಕ್ ಚಾಹರ್ ರವರನ್ನ ಹೊಗಳಿ ಈಗ ಹಲವು ಕ್ರಿಕೇಟಿಗರು ತಮ್ಮ ಫೇಸ್ ಬುಕ್ ಖಾತೆ, ಇನ್ಸ್ಟಾ ಖಾತೆ, ಯೂಟ್ಯೂಬ್ ಚಾನೆಲ್ ಗಳಲ್ಲಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಈ ಮಧ್ಯೆ ಭಾರತ ತಂಡದ ಮಾಜಿ ವೇಗದ ಬೌಲರ್, ಕನ್ನಡಿಗ ವೆಂಕಟೇಶ್ ಪ್ರಸಾದ್ , ಒಂದು ಶಾಕಿಂಗ್ ಸುದ್ದಿಯನ್ನ ಹಂಚಿಕೊಂಡಿದ್ದು ದೀಪಕ್ ಚಾಹರ್ ಗಾದ ಅವಮಾನವನ್ನ ವಿವರಿಸಿದ್ದಾರೆ.

ಕೆಲವು ವರ್ಷಗಳ ಹಿಂದೆತಂಡದ ಆಯ್ಕೆಗಾಗಿ ಆರ್.ಸಿ.ಎ ಗೆ ದೀಪಕ್ ಚಾಹರ್ ಸಹ ಬಂದಿದ್ದರು. ಆದರೇ ಆಗ ಭಾರತ ತಂಡದ ವಿವಾದಾತ್ಮಕ ಕೋಚ್ ಆಗಿದ್ದ ಗ್ರೇಗ್ ಚಾಪೆಲ್ ಎಲ್ಲರ ಮುಂದೆ ದೀಪಕ್ ಚಾಹರ್ ಗೆ ಅವಮಾನಿಸಿದ್ದರಂತೆ. ನಿನ್ನ ಎತ್ತರ ಬಹಳ ಕಡಿಮೆ, ನೀನು ವೇಗದ ಬೌಲರ್ ಆಗಲು ಲಾಯಕ್ಕಿಲ್ಲ, ಹೋಗಿ ಬೇರೆ ಯಾವುದಾದರೂ ಉದ್ಯೋಗವನ್ನು ಹುಡುಕಿಕೊ ಎಂದು ಎಲ್ಲರ ಎದುರಿಗೂ ಮೂದಲಿಸಿದ್ದರಂತೆ. ಹೀಗಾಗಿ ಐಪಿಎಲ್ ಹಾಗೂ ಇತರ ಪಂದ್ಯಾವಳಿಗಳಿಗೆ ವಿದೇಶಿ ಕೋಚ್ ಗಳ ಬದಲು ಸ್ವದೇಶಿ ಕೋಚ್ ಗಳನ್ನ ಬಳಸಬೇಕು ಎಂದು ಸಲಹೆ ನೀಡಿದ್ದಾರೆ.

ಆದರೇ ಆ ಮೂದಲಿಕೆಯನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ದೀಪಕ್ ಚಾಹರ್, ಸ್ವಿಂಗ್ ಬೌಲರ್ ಆಗಿ ಪರಿವರ್ತನೆ ಹೊಂದಿದರು. ಎರಡು ಎಂಡ್ ಗಳಲ್ಲಿ ಚೆಂಡನ್ನು ಸ್ವಿಂಗ್ ಮಾಡುವ ಮೂಲಕ ಬಹು ಬೇಗ ಹೆಸರು ಮಾಡಿದರು. ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದ ದೀಪಕ್ ಚೆನ್ನೈ ಪಾಲಿಗೆ ಹಲವಾರು ಪಂದ್ಯಗಳನ್ನು ತಮ್ಮ ಸ್ವಿಂಗ್ ಬೌಲಿಂಗ್ ನಿಂದ ಗೆಲ್ಲಿಸಿದ್ದರು. ಅದರಲ್ಲೂ ಪವರ್ ಪ್ಲೇಯಲ್ಲಿ ಹೆಚ್ಚು ವಿಕೇಟ್ ಪಡೆದ ಬೌಲರ್ ಎಂಬ ಖ್ಯಾತಿಗೂ ಸಹ ಇವರು ಪಾತ್ರರಾಗಿದ್ದರು.

ವೆಸ್ಟ್ ಇಂಡಿಸ್ ವಿರುದ್ದ ಅಂತರಾಷ್ಟ್ರೀಯ ಕ್ರಿಕೇಟ್ ಗೆ ಪದಾರ್ಪಣೆ ಮಾಡಿದ್ದ ದೀಪಕ್ ಚಾಹರ್, ಕೇವಲ ಟಿ 20 ಪಂದ್ಯಗಳಲ್ಲಿ ಪ್ರತಿನಿಧಿಸುವ ಅವಕಾಶ ಸಿಕ್ಕಿತ್ತು. ಈಗ ಶ್ರೀಲಂಕಾ ವಿರುದ್ದ ಸಿಕ್ಕ ಅವಕಾಶವನ್ನ ಎರಡು ಕೈಗಳಲ್ಲಿ ಬಾಚಿಕೊಂಡಿರುವ ದೀಪಕ್ ಚಾಹರ್ ಬೌಲಿಂಗ್ ನಲ್ಲಿ ಮೂರು ವಿಕೇಟ್ ಪಡೆದಿದ್ದರಲ್ಲದೇ, ಬ್ಯಾಟಿಂಗ್ ನಲ್ಲಿ ತಂಡ ಸಂಕಷ್ಟದಲ್ಲಿರುವಾಗ ಬಂದು ಅರ್ಧ ಶತಕ ಗಳಿಸಿ, ಸೋಲುತ್ತಿದ್ದ ಭಾರತ ತಂಡವನ್ನು ಗೆಲ್ಲಿಸಿದರು. ಅದಕ್ಕೆ ಹೇಳುವುದು, ಅವಮಾನವೇ ಮೊದಲು ಜೀವನದಲ್ಲಿ , ಸನ್ಮಾನ ಕೊನೆಗ್ ಮಗಾ, ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.