ಭಾರತಕ್ಕೆ ಮತ್ತೊಬ್ಬರು ರಾಹುಲ್ ದ್ರಾವಿಡ್ ಸಿಕ್ಕಿದ್ದಾರೆ ಎಂದ ಮೊಹಮದ್ ಕೈಫ್, ಆ ಯುವ ಆಟಗಾರ ಯಾರು ಗೊತ್ತೇ??

11

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ರಾಹುಲ್ ದ್ರಾವಿಡ್ ಒಬ್ಬರು ಕೇವಲ ಭಾರತವಷ್ಟೇ ಅಲ್ಲ ವಿದೇಶಗಳು ಕೂಡ ಅತ್ಯುತ್ತಮ ಆಟಗಾರ ಎಂದು ಹೊಗಳುವ ಆಟಗಾರರ ಸಾಲಿನಲ್ಲಿ ಕಂಡು ಬರುತ್ತಾರೆ. ಭಾರತ ದೇಶ ಕಂಡ ಅಪ್ರತಿಮ ಆಟಗಾರರಲ್ಲಿ ರಾಹುಲ್ ದ್ರಾವಿಡ್ ಕೂಡಾ ಒಬ್ಬರು ಎಂಬ ಮಾತನ್ನು ಎಲ್ಲರೂ ಕೂಡ ಒಪ್ಪಿಕೊಳ್ಳುತ್ತಾರೆ.

ಹಲವಾರು ಪಂದ್ಯಗಳನ್ನು ಏಕಪಕ್ಷೀಯವಾಗಿ ಭಾರತಕ್ಕೆ ಗೆಲ್ಲಿಸಿ ಕೊಟ್ಟು ಅಥವಾ ಸೋಲಿನಿಂದ ಪಾರು ಮಾಡಿ ಡ್ರಾ ಮಾಡಿಕೊಳ್ಳುವಂತಹ ಆಟವಾಡಿದ ರಾಹುಲ್ ದ್ರಾವಿಡ್ ಅವರು, ಇಂದಿಗೂ ಕೂಡ ಯುವ ಆಟಗಾರರಿಗೆ ಒಂದು ಪ್ರೇರಣೆಯಂತೆ. ಹಲವಾರು ಆಟಗಾರರು ನಾವು ರಾಹುಲ್ ದ್ರಾವಿಡ್ ಆಗಬೇಕು ಎಂಬ ಕನಸನ್ನು ಕಟ್ಟಿ ಕೊಂಡಿರುತ್ತಾರೆ ಆದರೆ ಮತ್ತೊಬ್ಬ ರಾಹುಲ್ ದ್ರಾವಿಡ್ ಸಿಗುವುದು ಕಷ್ಟವೇ ಸರಿ.

ಆದರೆ ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರರು ಆಗಿರುವ ಮೊಹಮ್ಮದ್ ಕೈಫ್ ರವರು ಇದೀಗ ಮಾತನಾಡಿ ನನಗೆ ಕೆಎಲ್ ರಾಹುಲ್ ರವರು ಬ್ಯಾಟಿಂಗ್ ಮಾಡುತ್ತಿರುವ ಸಮಯದಲ್ಲಿ ಕೇವಲ ರಾಹುಲ್ ದ್ರಾವಿಡ್ ನೆನಪಾಗುತ್ತಾರೆ, ಯಾಕೆಂದರೆ ಏನು ಮಾಡಲು ಬೇಕಾದರೂ ರಾಹುಲ್ ಸಿದ್ಧವಾಗಿರುತ್ತಾರೆ ಹಾಗೂ ಯಾವುದೇ ತಂಡಕ್ಕೆ ಬೇಕಾದರೂ ಅವರು ಹೊಂದಿಕೊಳ್ಳುತ್ತಾರೆ, ಆರಂಭಿಕರಾಗಿ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಹಾಗೂ ಫಿನಿಶರ್ ಆಗಿ ಕೂಡ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ರಾಹುಲ್ ಅವರು ಹೊಂದಿದ್ದಾರೆ ಆದ ಕಾರಣ ಇವರು ಮತ್ತೊಬ್ಬರು ರಾಹುಲ್ ದ್ರಾವಿಡ್ ಎಂದು ನನಗೆ ಅನಿಸುತ್ತದೆ ಎಂದಿದ್ದಾರೆ.

Get real time updates directly on you device, subscribe now.