ದಿವ್ಯ ಸುರೇಶ ಗೆ ಮುಖಕ್ಕೆ ಹೇಳಿ ಕೊನೆಗೂ ಸತ್ಯ ಒಪ್ಪಿಕೊಂಡ ಮಂಜು ಪಾವಗಡ ! ಮತ್ತೆ ಮಿಂಚುತ್ತಾರಾ ಮಂಜು??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ದಿನಗಳಲ್ಲಿ ಎಲ್ಲಿ ನೋಡಿದರೂ ಮಂಜು ಪಾವಗಡ ರವರು ಗೆಲ್ಲಬೇಕು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದ್ದವು. ಯಾಕೆಂದರೆ ಮನೆಯಲ್ಲಿ ಎಲ್ಲರನ್ನೂ ನಕ್ಕು ನಲಿಸುವ ಮೂಲಕ ಪ್ರೇಕ್ಷಕರಿಗೂ ಕೂಡ ಸಾಕಷ್ಟು ಮನರಂಜನೆ ನೀಡುವಲ್ಲಿ ಮಂಜು ಪಾವಗಡ ರವರು ಯಶಸ್ವಿಯಾಗಿದ್ದರು. ಈ ಮೂಲಕ ಮಂಜು ಪಾವಗಡ ಯಾವುದೇ ಸ್ಕ್ರಿಪ್ಟ್ ಇಲ್ಲದೆ ಕೂಡ ಜನರನ್ನು ನಗಿಸುತ್ತಾರೆ ಎಂಬುದನ್ನು ತೋರಿಸಿದರು.

ಇತರರು ಬಹಳ ಸೇಫ್ ಆಟಕ್ಕೆ ಮೊರೆ ಹೋದ ಕಾರಣ ಮಂಜು ಪಾವಗಡ ರವರು ಬಹಳ ಮಿಂಚಲು ಆರಂಭಿಸಿದರು, ಆರಂಭದ ದಿನಗಳಲ್ಲಿ ದಿವ್ಯ ಸುರೇಶ್ ರವರ ಜೊತೆ ಮಾಡಿದ ಕೆಲವೊಂದು ಸನ್ನಿವೇಶಗಳಂತೂ ಎಲ್ಲರನ್ನೂ ನಲಿಸುವುದರಲ್ಲಿ ಬಹಳ ಯಶಸ್ವಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಂಜು ಪಾವಗಡ ರವರು ಮನೆಯಲ್ಲಿ ನಗಿಸುವುದು ಬಿಡಲಿ ಎಷ್ಟೋ ಜನರ ಜೊತೆ ಅದೆಷ್ಟೋ ಸಮಯ ಮಾತನಾಡುವುದು ನಿಲ್ಲಿಸಿ ಬಿಟ್ಟಿದ್ದಾರೆ, ಅಂದರೆ ಮೌನಕ್ಕೆ ಜಾರಿದ್ದಾರೆ.

ಮನೆಯ ಸದಸ್ಯರ ಜೊತೆ ಯಾವುದೇ ಭಿನ್ನಾಭಿಪ್ರಾಯ ಗಳು ಇಲ್ಲದೆ ಇದ್ದರೂ ಕೂಡ ತಮ್ಮ ಮಾತನ್ನು ಕಡಿಮೆ ಮಾಡುವ ಮೂಲಕ ಪ್ರೇಕ್ಷಕರ ಕುರಿತು ಆಲೋಚನೆ ಕೂಡ ಮಾಡದಿರುವುದು ಪ್ರೇಕ್ಷಕರ ಗಮನಕ್ಕೆ ಬಂದಿದ್ದು, ಬಹುತೇಕ ಸಮಯ ಮೌನವಾಗಿದ್ದ ಮಂಜು ಪಾವಗಡ ಅವರು ಇತರ ಸ್ಪರ್ಧಿಗಳು ಮಿಂಚಲು ತಾವೇ ಅವಕಾಶ ಮಾಡಿಕೊಟ್ಟರು ಎಂದರೆ ತಪ್ಪಾಗಲಾರದು.

ಆರಂಭದ ದಿನಗಳಲ್ಲಿ ಇವರು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದ ವೇಗವನ್ನು ನೋಡಿದರೆ ಬಹಳ ಸುಲಭವಾಗಿ ಬಿಗ್ ಬಾಸ್ ಕಿರೀಟವನ್ನು ಮುಡಿಗೇರಿಸಿ ಕೊಳ್ಳುತ್ತಾರೆ ಎಂಬ ಲೆಕ್ಕಾಚಾರಗಳು ಕೇಳಿ ಬಂದಿದ್ದವು, ಆದರೆ ದಿನೇ ದಿನೇ ಆಟವನ್ನು ಮರೆಯುತ್ತಾ ಬಹುತೇಕ ಸಮಯ ಕೇವಲ ದಿವ್ಯ ಸುರೇಶ್ ರವರ ಜೊತೆ ಇರುವುದು ಅಥವಾ ವಾದ ಮಾಡಿಕೊಳ್ಳುತ್ತಾ ಕಳೆಯಲು ಆರಂಭಿಸಿದಾಗ ಮಂಜು ಪಾವಗಡ ರವರು ಆಟವನ್ನು ಮರೆತಿದ್ದಾರೆ ಎಂಬ ಅಭಿಪ್ರಾಯಗಳು ಜನರಿಂದ ಕೇಳಿ ಬಂದಿದ್ದವು.

ಅದೇ ಸಮಯದಲ್ಲಿ ಮನೆಯ ಇನ್ನಿತರ ಸ್ಪರ್ಧಿಗಳು ತಮಗೆ ಸಿಕ್ಕ ಅವಕಾಶವನ್ನು ಸರಿಯಾದ ರೂಪದಲ್ಲಿ ಬಳಸಿಕೊಳ್ಳುವ ಮೂಲಕ ಜನಪ್ರಿಯತೆ ಪಡೆದು ಕೊಂಡರು. ಇದೀಗ ಮಂಜು ರವರಿಗೆ ತಮ್ಮ ತಪ್ಪು ಅರಿವಾಗಿದೆ ಇದರ ಕುರಿತು ನೇರವಾಗಿ ದಿವ್ಯ ಸುರೇಶ್ ರವರ ಬಳಿ ಮಾತನಾಡಿ ನೀನು ನನ್ನ ಬಳಿ ಜಗಳ ಆಡುತ್ತಿರುವ ಕಾರಣ ಬಹುತೇಕ ಸಮಯ ನಾನು ಜಗಳಗಳ ಕುರಿತು ಹಾಗೂ ನಿನ್ನ ಕುರಿತು ಯೋಚಿಸುತ್ತೇನೆ.

ಇದರಿಂದ ನಾನು ಮನೆಗೆ ಸದಸ್ಯರ ಜೊತೆ ಹಾಗೂ ಕಾಮಿಡಿ ಮಾಡುವುದನ್ನು ಕೂಡ ನಿಲ್ಲಿಸಿ ಬಿಟ್ಟಿದ್ದೇನೆ ಎಂದು ಬಹಿರಂಗವಾಗಿ ತಮ್ಮ ಮಾತನ್ನು ನೇರವಾಗಿ ಹೇಳಿ ಬಿಟ್ಟಿದ್ದಾರೆ. ಇದೇ ಸಮಯದಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ದಿವ್ಯ ಸುರೇಶ ರವರು ಇನ್ನು ಮುಂದೆ ನಾನು ನಿನ್ನ ಜೊತೆ ವಾದ ಮಾಡುವುದಿಲ್ಲ ಇಬ್ಬರು ಮೊದಲಿನಂತೆ ಇರೋಣ ನಿನ್ನ ಆಟ ಕಡಿಮೆಯಾಗಿರುವುದನ್ನು ನಾನು ಕೂಡ ಗುರುತಿಸಿದ್ದೇನೆ ಎಂದು ಮಂಜು ಅವರಿಗೆ ಹುರಿದುಂಬಿಸಿ ಇನ್ನು ಮುಂದೆ ಮತ್ತೊಮ್ಮೆ ಆಟೋವನ್ನು ಪ್ರಾರಂಭಿಸೋಣ ಎಂದಿದ್ದಾರೆ. ಇದಕ್ಕೆ ಮಂಜುರವರು ಅಸ್ತು ಎಂದಿದ್ದು ಇನ್ನು ಮುಂದೆ ನಾವು ಮೊದಲಿನ ಮಂಜು ಪಾವಗಡ ರವರನ್ನು ಬಿಗ್ ಬಾಸ್ ಮನೆಯಲ್ಲಿ ಕಾಣಬಹುದಾದ ಸಾಧ್ಯತೆಗಳಿವೆ.

Get real time updates directly on you device, subscribe now.