ದುರಹಂಕಾರದ ಪರಮಾವಧಿ ತೋರಿದ ದಿವ್ಯ ಸುರೇಶ್ ಎಂದು ರೊಚ್ಚಿಗೆದ್ದ ಜನ ! ಯಾಕೆ ಗೊತ್ತಾ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ದಿನದಿಂದಲೂ ಕೂಡ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರು ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರೂ ಸದಾ ಒಟ್ಟಿಗೆ ವಿವಿಧ ರೀತಿಯಲ್ಲಿ ಪ್ರತಿಯೊಂದು ಸನ್ನಿವೇಶವನ್ನು ನಗಿಸುವಂತಹ ಸನ್ನಿವೇಶ ವಾಗಿ ಬದಲಾಗಿಸಿ ಪ್ರೇಕ್ಷಕರನ್ನು ನಗಿಸಿ ಇದ್ದಾರೆ.

ಇನ್ನು ಮೊದಲ ದಿನದಿಂದಲೂ ಮಂಜು ಪಾವಗಡ ರವರ ಜೊತೆ ಬಹಳ ಆತ್ಮೀಯವಾಗಿ ಕಾಣಿಸಿ ಕೊಳ್ಳುವ ದಿವ್ಯ ಸುರೇಶ್ ರವರನ್ನು, ಮನೆಯಲ್ಲಿ ಮಂಜುರವರ ಬಾಲ ಎಂದು ಕರೆಯಲಾಗುತ್ತದೆ. ಆದರೆ ದಿವ್ಯ ಸುರೇಶ್ ರವರು ನಾವಿಬ್ಬರೂ ಸ್ನೇಹಿತರು ಒಟ್ಟಾಗಿ ಇರುವುದರಲ್ಲಿ ತಪ್ಪೇನಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಪ್ರೇಕ್ಷಕರು ಕೂಡ ಮಂಜು ಪಾವಗಡ ರವರು ಹಾಗೂ ದಿವ್ಯ ಸುರೇಶ್ ರವರು ನಡೆದು ಕೊಳ್ಳುವ ರೀತಿಯ ಕುರಿತು ಒಪ್ಪಿಕೊಂಡಿದ್ದಾರೆ, ಕೆಲವರು ಇದನ್ನು ವಿರೋಧ ಮಾಡಿದರೂ ಕೂಡ ಹಲವಾರು ಜನ ಕೇವಲ ಮನರಂಜನೆಯ ರೀತಿಯಲ್ಲಿ ನೋಡಿ ಎಂದು ವಿರೋಧಿಸುವವರಿಗೆ ಉತ್ತರ ನೀಡುತ್ತಿದ್ದಾರೆ. ಹೀಗೆಯೇ ಇವರಿಬ್ಬರ ಕುರಿತು ಸದಾ ಪರ ಹಾಗೂ ವಿರೋಧದ ಚರ್ಚೆಗಳು ನಡೆಯುತ್ತಿರುತ್ತವೆ.

ಆದರೆ ಮಂಜು ಪಾವಗಡ ರವರು ದಿವ್ಯ ಸುರೇಶ್ ರವರು ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಭಾಗವಹಿಸುವಾಗ ಅರವಿಂದ್ ರವರು ಹಾಗೂ ದಿವ್ಯ ಸುರೇಶ್ ರವರು ಕೊನೆಯಲ್ಲಿ ಉಳಿದು ಕೊಂಡಿರುವ ಸಂದರ್ಭದಲ್ಲಿ, ದಿವ್ಯ ಸುರೇಶ್ ರವರು ಭಾರವನ್ನು ಕೈಯಲ್ಲಿ ಹಿಡಿದು ಕೊಂಡಿದ್ದ ಕಾರಣ ಮಂಜು ರವರಿಗೆ ನೀರು ಕುಡಿಸುವಂತೆ ಹೇಳುತ್ತಾರೆ, ಇದೇ ಸಮಯದಲ್ಲಿ ಮಂಜುರವರು ಮಾತನಾಡಿಕೊಂಡು ಆಟ ನಿಲ್ಲಿಸಿಬಿಡಿ ಎಂದು ಹೇಳಿಕೆ ನೀಡಿದ್ದರು, ಆಗ ನೀರು ಕುಡಿಯುವಾಗ ದಿವ್ಯ ಸುರೇಶ್ ರವರು ಅರವಿಂದ್ ರವರ ಮಾತು ಕೇಳಿ ಬಾಯಲ್ಲಿ ನೀರು ಹಾಕಿಕೊಂಡು ಮಂಜುರವರ ಮೇಲೆ ಉಗಿದಿದ್ದಾರೆ, ಇದನ್ನು ನೋಡಿದ ಪ್ರೇಕ್ಷಕರು ಇಷ್ಟು ದಿವಸ ಎಲ್ಲವೂ ಮನರಂಜನೆ ರೀತಿ ಕಾಣುತ್ತಿತ್ತು ಆದರೆ ಇದು ದುರಹಂಕಾರದ ಪರಮಾವಧಿ ಈ ರೀತಿಯ ಕೆಲಸಗಳನ್ನು ನಿಮ್ಮಿಂದ ನಿರೀಕ್ಷಿಸಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.