ಯಪ್ಪಾ, ಮತ್ತೆ ಸಂಭಾವನೆ ಏರಿಸಿಕೊಂಡ ಪೂಜಾ ಹೆಗಡೆ, ಒಂದು ಸಿನಿಮಾ ಮಾಡಲು ಎಷ್ಟು ಕೋಟಿ ಗೊತ್ತಾ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದಲ್ಲಿ ನಟರಿಗೆ ಕೋಟಿಗಳಷ್ಟು ಹಣವನ್ನು ಸಂಭಾವನೆಯನ್ನಾಗಿ ನೀಡಲಾಗುತ್ತದೆ ಆದರೆ ಯಾವುದೇ ನಟಿಯರಿಗೂ ಕೂಡ ಇಲ್ಲಿಯವರೆಗೂ ಕೋಟಿಗಳ ಲೆಕ್ಕದಲ್ಲಿ ಸಂಭವನೆಯನ್ನು ನೀಡಿಲ್ಲ, ಇತರ ಭಾಷೆಗಳ ನಟಿಯರಿಗೆ ಮಾತ್ರ ಕೆಲವೊಮ್ಮೆ ಕೋಟಿಗಳ ರೂಪದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಂಭಾವನೆ ನೀಡಲಾಗಿದೆ.

ಆದರೆ ಇದು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿದೆ, ದಕ್ಷಿಣ ಭಾರತದ ಇತರ ಚಿತ್ರರಂಗ ಗಳಾದ ತೆಲುಗು ತಮಿಳು ಚಿತ್ರರಂಗಗಳಲ್ಲಿ ನಟಿಯರಿಗೆ ಕೋಟಿ ಕೋಟಿ ಹಣವನ್ನು ನೀಡಲಾಗುತ್ತದೆ, ಆದರೆ ಕನ್ನಡದ ಮಂಗಳೂರಿನ ಹುಡುಗಿ ಪೂಜಾ ಹೆಗಡೆ ಅವರು ಇದೀಗ ಈ ಕೋಟಿ ಕೋಟಿ ಗಳಲ್ಲಿಯೂ ಕೂಡ ತಮ್ಮ ಸಂಭಾವನೆಯನ್ನು ಹೆಚ್ಚು ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ

ಹೌದು ಸ್ನೇಹಿತರೇ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಪೂಜಾ ಹೆಗಡೆ ರವರು ಇದೀಗ ತಮಿಳು ಚಿತ್ರರಂಗಕ್ಕೆ ಕೂಡ ಬಣ್ಣ ಹಚ್ಚಲು ಸಿದ್ಧವಾಗಿದ್ದು, ವಿಜಯ್ ರವರ ಮುಂದಿನ ಸಿನಿಮಾದಲ್ಲಿ ನಟನೆ ಮಾಡಲು ಇಷ್ಟು ದಿವಸ ಎರಡು ಕೋಟಿ ಸಂಭಾವನೆ ಪಡೆದು ಕೊಳ್ಳುತ್ತಿದ್ದ ಪೂಜಾ ಹೆಗಡೆ ರವರು ಒಮ್ಮೆಲೇ ಒಂದು ಕೋಟಿ ಹೆಚ್ಚಿಗೆ ಮಾಡಿ ಮೂರು ಕೋಟಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ, ಅಚ್ಚರಿಯೇನು ಎಂದರೆ ನಿರ್ಮಾಪಕರು 3 ಕೋಟಿ ಹೇಳಿದರೂ ಕೂಡ ಒಪ್ಪಿಕೊಂಡು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

Get real time updates directly on you device, subscribe now.