ಶಿವಣ್ಣ ರವರ ಚಿತ್ರಕ್ಕಾಗಿ ತೆಲುಗಿನ ಬ್ಯೂಟಿಫುಲ್ ಬೆಡಗಿ ಬರುತ್ತಿದ್ದಾರೆ ಕನ್ನಡಕ್ಕೆ ! ಯಾವ ನಟಿ ಗೊತ್ತಾ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡದಲ್ಲಿ ಅಧಿಕೃತವಾಗಿ ಡಬ್ಬಿಂಗ್ ಮಾಡಲು ಶುರುವಾದ ಮೇಲೆ ಕನ್ನಡದ ಬಹುತೇಕ ನಟರು ತಮ್ಮ ಸಿನಿಮಾಗಳನ್ನು ಇತರ ಭಾಷೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುವ ಸಮಯದಲ್ಲಿ ಇತರ ಚಿತ್ರರಂಗಗಳ ನಾಯಕಿಯನ್ನು ಅಥವಾ ಇತರ ಚಿತ್ರರಂಗದಲ್ಲಿಯೂ ಕೂಡ ಪ್ರಸಿದ್ಧಿ ಪಡೆದು ಕೊಂಡಿರುವ ಕನ್ನಡದ ನಟಿಯರನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದಾರೆ

ಇತರ ಭಾಷೆಗಳ ಪ್ರೇಕ್ಷಕರಿಗೆ ನಟಿಯರ ಮುಖ ಪರಿಚಯ ಇದ್ದರೆ ಮತ್ತಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಥಿಯೇಟರ್ ನ ಕಡೆಗೆ ಸೆಳೆಯಬಹುದು ಎಂಬುದು ಗಾಂಧಿ ನಗರದ ಲೆಕ್ಕಾಚಾರವಾಗಿದೆ. ಇದೇ ಸಮಯದಲ್ಲಿ ಕನ್ನಡದ ವಿವಿಧ ನಟಿಯರು ಕೂಡ ಇತರ ಭಾಷೆಗಳಿಗೆ ನಟಿಯರಾಗಿ ಆಯ್ಕೆಯಾಗುತ್ತಿದ್ದು, ಕನ್ನಡದಲ್ಲಿ ಯಶಸ್ಸು ಕಂಡ ಕ್ಷಣ ವಿವಿಧ ಭಾಷೆಗಳ ನಿರ್ಮಾಪಕರು ಕನ್ನಡದ ನಟಿಯರಿಗೆ ಅವಕಾಶ ನೀಡುತ್ತಿದ್ದಾರೆ.

ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು ಹ್ಯಾಟ್ರಿಕ್ ಹೀರೋ ಎನಿಸಿಕೊಂಡಿರುವ ಶಿವರಾಜ್ ಕುಮಾರ್ ರವರ ಚಿತ್ರದಲ್ಲಿ ನಟನೆ ಮಾಡಲು ತೆಲುಗು ಚಿತ್ರರಂಗದ ಖ್ಯಾತ ನಟಿ ಆಗಿರುವ ಅಂಜಲಿ ರವರನ್ನು ಕನ್ನಡಕ್ಕೆ ತರಲು ಸಿದ್ಧತೆ ನಡೆಸಲಾಗಿದೆ, ಇಷ್ಟು ದಿವಸ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಂಜಲಿ ರವರು ಇನ್ನು ಮುಂದೆ ಕನ್ನಡ ಚಿತ್ರರಂಗದಲ್ಲಿಯೂ ಕೂಡ ಈ ಮೂಲಕ ಮಿಂಚಲಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Get real time updates directly on you device, subscribe now.