ಕನ್ನಡದ ಹುಡುಗಿ ರಶ್ಮಿಕ ರವರಿಗೆ ಖುಲಾಯಿಸಿದ ಮತ್ತೊಂದು ಅದೃಷ್ಟ ! ಏನು ಗೊತ್ತಾ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕ ಮಂದನ್ನ ರವರು ಇದೀಗ ಕೇವಲ ಕನ್ನಡ ಭಾಷೆಯಲ್ಲಿ ಅಷ್ಟೇ ಅಲ್ಲದೆ ತೆಲುಗು ತಮಿಳು ಚಿತ್ರರಂಗ ಸೇರಿದಂತೆ ಬಾಲಿವುಡ್ ಅಂಗಳದಲ್ಲಿ ಯು ಕೂಡ ತಮ್ಮ ಛಾಪು ಮೂಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲ ಚಿತ್ರರಂಗದಲ್ಲಿಯೂ ಅಭಿಮಾನಿಗಳನ್ನು ಗಳಿಸುವುದರಲ್ಲಿ ಯಶಸ್ವಿಯಾಗಿರುವ ರಶ್ಮಿಕ ಮಂದನ್ನ ರವರು ದಿನೇದಿನೇ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುತ್ತಿದ್ದಾರೆ.

ಇದೀಗ ಇತ್ತೀಚಗಷ್ಟೇ ಕಳೆದ ಕೆಲವು ದಿನಗಳ ಹಿಂದೆ ನಿಮಗೆಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ಚಿತ್ರರಂಗಕ್ಕೆ ಮಜುನು ಚಿತ್ರದ ಮೂಲಕ ಪಾದರ್ಪಣೆ ಮಾಡಲು ಸಿದ್ಧತೆ ನಡೆಸಿದ್ದಾರೆ ಈಗಾಗಲೇ ಮಜುನು ಚಿತ್ರದ ಚಿತ್ರೀಕರಣ ಆರಂಭವಾಗಿದ್ದು ಮುಂಬೈನಲ್ಲಿ ಅದೇ ಕಾರಣಕ್ಕಾಗಿ ವಿಶೇಷ ಬಂಗಲೆಯೊಂದನ್ನು ಖರೀದಿ ಮಾಡಿದ್ದಾರೆ.

ಹೀಗೆ ಬಾಲಿವುಡ್ನಲ್ಲಿ ಛಾಪು ಮೂಡಿಸುವ ಸಿದ್ಧತೆಗಳನ್ನು ಮಾಡಿಕೊಂಡು ಮೊದಲ ಚಿತ್ರದಲ್ಲಿ ನಟಿಸುತ್ತಿರುವ ಸಮಯದಲ್ಲಿಯೇ ಚಿತ್ರ ಬಿಡುಗಡೆಯಾಗದೇ ಇದ್ದರೂ ಕೂಡ ರಶ್ಮಿಕಾ ಮಂದಣ್ಣ ರವರು ಬಾಲಿವುಡ್ ನಲ್ಲಿ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ, ಗುಡ್ ಬೈ ಎಂಬ ಶೀರ್ಷಿಕೆ ಇರುವ ಚಿತ್ರಕ್ಕೆ ಸಹಿ ಹಾಕಿರುವ ರಶ್ಮಿಕಾ ಮಂದಣ್ಣ ರವರು ಬಿಡುಗಡೆಗೂ ಮುನ್ನವೇ ಬಾಲಿವುಡ್ನಲ್ಲಿ ಮತ್ತೊಂದು ಅವಕಾಶ ಬಾಚಿಕೊಂಡಿದ್ದಾರೆ. ಈ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿಯೂ ಕೂಡ ತಮ್ಮ ಛಾಪನ್ನು ಮೂಡಿಸುತ್ತಾರೆ ಎಂಬ ಭರವಸೆ ಮೂಡಿಸಿದ್ದಾರೆ.

Get real time updates directly on you device, subscribe now.