ಗೆದ್ದಾಗ ಟ್ರಾಲ್ ಮಾಡಿದ ಚೆನ್ನೈ, ಮುಂಬೈ ಅಭಿಮಾನಿಗಳಿಗೆ ಆರ್ಸಿಬಿ ಹುಡುಗರು ಸರಿಯಾಗಿ ಉತ್ತರ ನೀಡಿದ್ದು ಹೇಗೆ ಗೊತ್ತಾ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ವಿಶ್ವದ ಇನ್ಯಾವುದೇ ಟೂರ್ನಿಗಳಲ್ಲಿ ನೋಡದ ಅಭಿಮಾನಿಗಳನ್ನು ನೀವು ಐಪಿಎಲ್ ಟೂರ್ನಿಯಲ್ಲಿ ನೋಡುತ್ತೀರಾ, ಅದರಲ್ಲಿಯೂ ವಿಶೇಷವಾಗಿ ಆರ್ಸಿಬಿ ತಂಡದ ಅಭಿಮಾನಿಗಳನ್ನು ಕಂಡರೆ ನಿಜಕ್ಕೂ ಎಲ್ಲರಿಗೂ ಒಂದು ಕ್ಷಣ ಆಶ್ಚರ್ಯವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಸಾಮಾನ್ಯ ಕ್ರಿಕೆಟ್ ಅಭಿಮಾನಿಯಿಂದ ಹಿಡಿದು ಹರ್ಷ ಭೋಗ್ಲೆ ರವರಂತಹ ಕ್ರಿಕೆಟ್ ವಿಶ್ಲೇಷಕರು ಕೂಡ ಆರ್ಸಿಬಿ ತಂಡದ ಅಭಿಮಾನಿಗಳನ್ನು ಹಾಡಿ ಹೊಗಳುತ್ತಾರೆ.

ಹರ್ಷ ಭೋಗ್ಲೆ ರವರು ಕೂಡ ನಾನು ಆರ್ಸಿಬಿ ತಂಡಕ್ಕೆ ಇರುವ ಪ್ರೀತಿ ಬೇರೆ ಇನ್ಯಾವುದೇ ತಂಡದ ಅಭಿಮಾನಿಗಳಲ್ಲಿ ಕಾಣಲು ಸಾಧ್ಯವಾಗಿಲ್ಲ, ಇಷ್ಟು ವರ್ಷ ಕಪ್ ಗೆಲ್ಲದೆ ಇದ್ದರೂ ಕೂಡ ಪ್ರತಿ ಸಲ ಟೂರ್ನಿಯ ಆರಂಭವಾಗುವ ಮುನ್ನ ಈ ಸಲ ಕಪ್ ನಮ್ದೇ ಎಂಬುವ ಘೋಷಣೆಯೊಂದಿಗೆ ಮತ್ತೆ ಸಂಪೂರ್ಣ ಹುರುಪಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ನಿಜಕ್ಕೂ ಆಶ್ಚರ್ಯ ಪಡುವ ಸಂಗತಿ ಎಂದು ಹೇಳಿಕೆ ನೀಡಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯವೇ ಆಗಿರುತ್ತದೆ.

ಇಷ್ಟೆಲ್ಲಾ ಅಭಿಮಾನಿಗಳನ್ನು ಇದ್ದಾರೆ ಎಂದ ಮೇಲೆ ಕಂಡಿತ ನಮ್ಮನ್ನು ನೋಡಿದರೆ ಉರ್ಕೊಳ್ಳೋರು ಕೂಡ ಹೆಚ್ಚಾಗಿರುತ್ತಾರೆ ಎಂಬುವುದರಲ್ಲಿ ಎರಡು ಮಾತಿಲ್ಲ ಅದರಲ್ಲಿಯೂ ಮುಂಬೈ ಹಾಗೂ ಚೆನ್ನೈ ಅಭಿಮಾನಿಗಳಿಗೆ ಆರ್ಸಿಬಿ ತಂಡ ಕಂಡರೆ ಇನ್ನಿಲ್ಲದ ಉರಿ ಕಂಡು ಬರುತ್ತದೆ. ಫಿಕ್ಸಿಂಗ್ ಮಾಡಿಕೊಂಡು ಕಪ್ ಗೆದ್ದು, ಎರಡು ವರ್ಷಗಳ ಕಾಲ ಟೂರ್ನಿಯಿಂದ ಹೊರಬಿದ್ದದ್ದರು ಕೂಡ ಚೆನ್ನೈ ಅಭಿಮಾನಿಗಳಿಗಂತೂ ಬೆಂಗಳೂರು ತಂಡವನ್ನು ಕಂಡರೆ ಹೇಳಲು ಸಾಧ್ಯವಾಗದಂತಹ ಉರಿ ಕಂಡು ಬರುತ್ತದೆ.

ಇನ್ನು ನಾವು ಮುಂಬೈ ವಿರುದ್ಧದ ಪಂದ್ಯದಲ್ಲಿ ಬೇರೆ ಗೆದ್ದುಬಿಟ್ಟಿದ್ದೇವೆ ಇಂತಹ ಸಂದರ್ಭದಲ್ಲಿ ಮೊದಲೇ ನಮ್ಮನ್ನು ಕಂಡರೆ ಆಗದ ಮುಂಬೈ ಹಾಗೂ ಚೆನ್ನೈ ಅಭಿಮಾನಿಗಳು ಆರ್ಸಿಬಿ ಅಭಿಮಾನಿಗಳ ಸಂಭ್ರಮಾಚರಣೆಯನ್ನು ನೋಡಿ ನಿಜಕ್ಕೂ ಬೇಸರ ಮಾಡಿಕೊಂಡಂತೆ ಕಾಣುತ್ತಿದೆ. ಅದೇ ಕಾರಣಕ್ಕಾಗಿ ಆರ್ಸಿಬಿ ತಂಡದ ಅಭಿಮಾನಿಗಳ ಫೇಸ್ಬುಕ್ ಪೇಜಿನಲ್ಲಿ ಹಾಗೂ ಆರ್ಸಿಬಿ ತಂಡದ ಅಫಿಶಿಯಲ್ ಪೇಜಿನಲ್ಲಿ ಕೂಡ ಬಂದು ಕಮೆಂಟ್ ಮಾಡುತ್ತಿದ್ದಾರೆ. ಮೊದಲ ಪಂದ್ಯ ಗೆಲ್ಲುವುದು ಮುಖ್ಯವಲ್ಲ ಒಮ್ಮೆಯಾದರೂ ಕಪ್ ಗೆಲ್ಲಿ ಎಂದೋ ಟ್ರೋಲ್ ಮಾಡಲು ಆರಂಭಿಸಿದ್ದಾರೆ.

ಅವರು ಟ್ರೋಲ್ ಮಾಡಿದ ತಕ್ಷಣ ಸುಮ್ಮನೆ ಕೂರುವ ಮಕ್ಕಳು ನಮ್ಮ ಕನ್ನಡಿಗರು ಅಲ್ಲವೇ ಅಲ್ಲ ಎಂಬುದು ಅವರಿಗೂ ಕೂಡ ತಿಳಿದಿರುತ್ತದೆ ಆದರೂ ಕೂಡ ಸುಖಾ ಸುಮ್ಮನೆ ಕಾಲ್ಕೆರೆದು ಕಾಮೆಂಟ್ ಬಾಕ್ಸ್ನಲ್ಲಿ ಮಾತನಾಡುತ್ತಿದ್ದಾರೆ. ಮಾತನಾಡಿದ ತಕ್ಷಣ ಆರ್ಸಿಬಿ ಅಭಿಮಾನಿಗಳ ಉತ್ತರ ಕಂಡು ಚೆನ್ನೈ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳಿಗೆ ಮತ್ತಷ್ಟು ಮುಜುಗರ ಉಂಟಾಗುವಂತೆ ಉತ್ತರ ನೀಡಿದ್ದಾರೆ.

ಹೌದು ಸ್ನೇಹಿತರೆ, ಇದೀಗ ಉತ್ತರ ನೀಡಿರುವ ಆರ್ಸಿಬಿ ಅಭಿಮಾನಿಗಳು ಮೊದಲ ಪಂದ್ಯ ಗೆದ್ದ ತಕ್ಷಣವೇ ಇಷ್ಟೊಂದು ಉರಿದುಕೊಳ್ಳುತ್ತೀದ್ದೀರಾ, ಕಪ್ ಗೆಲ್ಲುವ ಹೊತ್ತಿಗೆ ದಯವಿಟ್ಟು ಕಣ್ಮರೆಯಾಗಿ ಬಿಡಿ, ಇಲ್ಲವಾದಲ್ಲಿ ಜೈ ಆರ್ಸಿಬಿ ಜೈ ಕರ್ನಾಟಕ ಮತ್ತೆ ಎಂದು ಹೇಳಿ ಬದಲಾಗಿ ಇಲ್ಲವಾದಲ್ಲಿ ನಿಮ್ಮ ಅಳುವನ್ನು ನಾವು ನೋಡಲು ಸಾಧ್ಯವಿಲ್ಲ, ಇನ್ನು ಹೇಗಿದ್ದರೂ ಅಂಪೈರ್ ಗಳನ್ನೂ ಗಳನ್ನು ಹಾಗೂ ಫಿಕ್ಸಿಂಗ್ ಮಾಡಿಕೊಳ್ಳುವಲ್ಲಿ ನೀವು ಯಶಸ್ವಿಯಾಗಿದ್ದೀರಿ, ಈ ಬಾರಿ ಕೂಡ ಫಿಕ್ಸ್ ಮಾಡಿಕೊಂಡು ಫೈನಲ್ ವರೆಗೂ ಬರಲು ಪ್ರಯತ್ನ ಪಡಿ, ಖಂಡಿತ ನಿಮ್ಮನ್ನು ಸೋಲಿಸಿ ಫೈನಲ್ ನಲ್ಲಿ ಆರ್ಸಿಬಿ ತಂಡ ಕಪ್ಪು ಗೆಲ್ಲುತ್ತದೆ ಎಂದು ಉತ್ತರ ನೀಡಿದ್ದಾರೆ. ಇನ್ನು ಸಾವಿರಾರು ರೀತಿಯಲ್ಲಿ ಉತ್ತರ ನೀಡಿದ್ದು ಎಲ್ಲವನ್ನು ತಿಳಿಸಲು ಸಾಧ್ಯವಿಲ್ಲ.

Get real time updates directly on you device, subscribe now.