ಟಾಪ್ ಸಿನಿಮಾಗಳಿಗೆ ಟಕ್ಕರ್ ನೀಡುತ್ತಿರುವ ಯುವರತ್ನ ! ಎರಡನೇ ದಿನದ ನಿಜವಾದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ??

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಇದೀಗ ಬಿಡುಗಡೆಯಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವ ರತ್ನ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಾಲೇಜ್ ಸ್ಟೂಡೆಂಟ್ ಆಗಿ ಕಡಕ್ ಪ್ರೊಫೆಸರಾಗಿ ಕಾಣಿಸಿ ಕೊಂಡಿರುವ ಪುನೀತ್ ರಾಜಕುಮಾರ್ ರವರ ಸಿನಿಮಾದ ಪ್ರತಿ ಸೀನ್ ನಲ್ಲಿಯೂ ಕೂಡ ಪ್ರೇಕ್ಷಕರಿಗೆ ಸಾಕಷ್ಟು ಮನೋರಂಜನೆಯನ್ನು ನೀಡುತ್ತಾರೆ

ಅದರಲ್ಲಿಯೂ ಡೈಲಾಗ್ಗಳು ಬಹಳ ಅದ್ಭುತವಾಗಿದ್ದು, ಅಭಿಮಾನಿಗಳ ಬಾಯಲ್ಲಿ ಜೋರಾಗಿಯೇ ಕೇಳಿ ಬರುತ್ತಿವೆ, ಕೆಲವೊಂದು ಡೈಲಾಗ್ ಗಳಂತೂ ಬಹಳ ಅದ್ಭುತವಾಗಿ ಮೂಡಿ ಬಂದಿವೆ ಎಂದು ಜನರು ಹೇಳುತ್ತಿದ್ದಾರೆ. ಹೀಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಕೊಳ್ಳುತ್ತಿರುವ ಯುವರತ ಸಿನಿಮಾ ಬಾಕ್ಸಾಫೀಸ್ ನಲ್ಲೂ ಕೂಡ ಉತ್ತಮ ಸಾಧನೆ ಮಾಡುತ್ತಿದೆ.

ಗಾಂಧಿನಗರದ ಮೂಲಗಳ ಪ್ರಕಾರ ಮೊದಲ ದಿನವೇ ಯುವ ರತ್ನ ಸಿನಿಮಾ ಸರಿ ಸುಮಾರು 13 ರಿಂದ 17 ಕೋತಿ ಯವರೆಗೆ ಕಲೆಕ್ಷನ್ ಮಾಡುವುದರಲ್ಲಿ ಯಶಸ್ವಿಯಾಗಿತ್ತು, ಇನ್ನು ಎರಡನೇ ದಿನ ಮುಂಗಡ ಬುಕ್ಕಿಂಗ್ ಆಗಿರುವ ಟಿಕೆಟ್ ಹಾಗೂ ಥೇಟರ್ ಗಳತ್ತ ಪ್ರೇಕ್ಷಕರು ಬರುತ್ತಿರುವ ಸರಾಸರಿ ಅಂದಾಜನ್ನು ಲೆಕ್ಕ ಹಾಕಿಕೊಂಡರೇ ಯುವ ರತ್ನ ಸಿನಿಮಾ ಎರಡನೆ ದಿನದ ಕೊನೆಗೆ 25 ಕೋಟಿಗೂ ಹೆಚ್ಚು ಮಾಡಿದೆ ಎಂಬುದು ತಿಳಿದು ಬರುತ್ತದೆ. ಮೊದಲ ಎರಡು ದಿನದಲ್ಲಿ 25 ಕೋತಿ ಗಳಿಸುವುದು ಎಂದರೆ ಸುಲಭದ ಮಾತಲ್ಲ. ಈ ಚಿತ್ರ ಹೀಗೆ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಹಾರೈಸೋಣ ಏನಂತೀರಾ??

Get real time updates directly on you device, subscribe now.