ಮಂಜು ಪಾವಗಡ ರವರಿಗೆ ಭರ್ಜರಿ ಸಿಹಿಸುದ್ದಿ, ದಿವ್ಯ ಅರವಿಂದ್ ರವರಿಗೆ ಬಿಗ್ ಶಾಕ್. ಏನು ಗೊತ್ತಾ??

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಆರಂಭವಾದ ಮೊದಲನೇ ದಿನದಿಂದಲೂ ಕೂಡ ಮಂಜು ಪಾವಗಡ ರವರು ಬಹಳ ಅತ್ಯದ್ಭುತವಾಗಿ ಆಟವಾಡುತ್ತಿದ್ದಾರೆ ಎಂಬ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ. ಆರಂಭ ದಿನದಿಂದಲೇ ಎಲ್ಲರನ್ನೂ ನಕ್ಕು ನಲಿಸುವಲ್ಲಿ ಯಶಸ್ವಿಯಾಗಿದ್ದ ಮಂಜು ಪಾವಗಡ ರವರು ಈ ಬಾರಿಯ ವಿನ್ನರ್ ಎಂದು ಹೇಳಲಾಗುತ್ತಿತ್ತು.

ಆದರೆ ಜೋಡಿ ಟಾಸ್ಕ್ ಆರಂಭವಾದ ಬಳಿಕ ಎಲ್ಲರ ಚಿತ್ತ ಅರವಿಂದ್ ಹಾಗೂ ದಿವ್ಯ ಉರುಡುಗ ರವರ ಕಡೆ ತಿರುಗಿತ್ತು ಎಂದರೆ ತಪ್ಪಾಗಲಾರದು, ಈ ಜೋಡಿ ತೆಗೆದು ಕೊಂಡ ಒಂದು ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು, ಕೆಲವರು ಉತ್ತಮ ನಿರ್ಧಾರ ಎಂದು ಹೊಗಳಿದರು ಇನ್ನು ಕೆಲವರು ತಪ್ಪು ಎಂದಿದ್ದರು. ಆದರೆ ಈ ಚರ್ಚೆ ಬಹಳ ದೊಡ್ಡ ಮಟ್ಟದಲ್ಲಿ ನಡೆದಿತ್ತು. ಹಾಗಾಗಿ ಎಲ್ಲರ ಗಮನ ಅರವಿಂದ್ ಹಾಗೂ ದಿವ್ಯ ಉರುದುಗ ರವರ ಕಡೆ ತೆರಳಿತ್ತು, ಅಷ್ಟೇ ಅಲ್ಲದೆ ಮುಂದಿನ ಟಾಸ್ಕ್ ಅಲ್ಲಿಯೂ ಕೂಡ ಇವರಿಬ್ಬರೂ ಪ್ರತ್ಯೇಕವಾಗಿ ಬಹಳ ಅದ್ಭುತ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರನ್ನು ದಿನೇ ದಿನೇ ಗೆಲ್ಲುತ್ತಿದ್ದರು,

ಆದರೆ ಈ ಒಂದು ವಾರದಿಂದ ದಿವ್ಯ ಹಾಗೂ ಅರವಿಂದ್ ರವರು ಆಟವನ್ನು ಮರೆತಂತೆ ಕಾಣುತ್ತಿದೆ, ಅರವಿಂದ್ ರವರ ಆಟದ ಮೇಲೆ ಗಮನ ಬಿಟ್ಟು ದಿವ್ಯ ರವರ ಮೇಲೆ ಹೆಚ್ಚಿನ ಗಮನ ನೀಡುತ್ತಿದ್ದಾರೆ ಎಂದು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಈ ವಾರದ ಟಾಸ್ಕ್ ನಲ್ಲಿಯೂ ಕೂಡ ಮಂಜು ಪಾವಗಡ ರವರು ಬಹುತೇಕ ಏಕಪಕ್ಷೀಯವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಇವರ ಜೊತೆಗೆ ವೈಷ್ಣವೀ ರವರು ಅದ್ಭುತ ಪ್ರದರ್ಶನ ನೀಡುವ ಮೂಲಕ ಮತ್ತಷ್ಟು ಸದ್ದು ಮಾಡಿದ್ದಾರೆ. ಒಟ್ಟಿನಲ್ಲಿ ಇದೀಗ ಎಲ್ಲರ ಗಮನ ಕೇವಲ ಮಂಜು ಪಾವಗಡ ರವರ ಮೇಲೆ ಮಾತ್ರ ಇದೆ.

Get real time updates directly on you device, subscribe now.