ದಾಖಲೆ ನಿರ್ಮಿಸಿದ ಕಣ್ಣಿ ಅದಿರಿಂದಿ ಹಾಡಿಗೆ ಮಂಗ್ಲಿ ರವರು ಪಡೆದ ಅಸಲಿ ಸಂಭಾವನೆ ಎಷ್ಟು ಗೊತ್ತಾ?? ಇಷ್ಟೇನಾ?

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ರಾಬರ್ಟ್ ಸಿನಿಮಾ ತೆಲುಗಿನಲ್ಲಿ ಬಿಡುಗಡೆಗೂ ಮುನ್ನವೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಹಳ ಸದ್ದು ಮಾಡುವುದರಲ್ಲಿ ಯಶಸ್ವಿಯಾಗಿತ್ತು, ಇದೇ ಮೊಟ್ಟ ಮೊದಲ ಬಾರಿಗೆ ದರ್ಶನ್ ರವರ ಸಿನಿಮಾ ತೆಲುಗಿನಲ್ಲಿ ಬಿಡುಗಡೆಯಾಗುತ್ತಿರುವ ಕಾರಣ ತೆಲುಗಿನ ಸಿನಿ ಪ್ರೇಕ್ಷಕರು ಕೂಡ ಕನ್ನಡದ ಟಾಪ್ ನಟರಲ್ಲಿ ಒಬ್ಬರಾಗಿರುವ ದರ್ಶನ್ ರವರ ಸಿನಿಮಾಗಳು ಹೇಗೆ ಇರುತ್ತವೆ ಎಂಬುದನ್ನು ನೋಡಲು ತುದಿಗಾಲಲ್ಲಿ ಕಾದು ನಿಂತಿದ್ದರು. ಹೀಗೆ ಬಿಡುಗಡೆಗೂ ಮುನ್ನವೇ ರಾಬರ್ಟ್ ಸಿನಿಮಾ ಬಹಳ ಜನಪ್ರಿಯತೆಯನ್ನು ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಆದರೆ ಈ ಜನಪ್ರಿಯತೆಯನ್ನು ಮತ್ತೊಂದು ಲೆವೆಲ್ಲಿಗೆ ತೆಗೆದುಕೊಂಡು ಹೋಗಿದ್ದು, ಗಾಯಕಿ ಮಂಗ್ಲಿ ರವರು ಎಂದರೆ ತಪ್ಪಾಗಲಾರದು, ಹೌದು ಸ್ನೇಹಿತರೇ ಗಾಯಕಿ ಮಂಗ್ಲಿ ರವರು ಹಾಡಿದ ಕಣ್ಣೆ ಅದಿರಿಂದಿ ಹಾಡು ತೆಲುಗಿನಲ್ಲಿ ಸಿನಿಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು, ಒಂದೇ ಹಾಡಿನಿಂದ ರಾತ್ರೋ ರಾತ್ರಿ ಮಂಗ್ಲಿ ರವರು ಕೂಡ ಕರ್ನಾಟಕದಲ್ಲಿ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡರು, ಇವರ ಹಾಡನ್ನು ಕೇಳಿದ ಪ್ರತಿಯೊಬ್ಬರೂ ಕೂಡ ಹಾಡು ಅದ್ಭುತವಾಗಿದೆ ಎಂಬುದನ್ನು ಒಪ್ಪಿಕೊಳ್ಳುವಂತೆ ಹಾಡನ್ನು ಹಾಡಿದರು.

ನ್ಯೂಸ್ ಚಾನಲ್ ನಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದ ಮಂಗ್ಲಿ ರವರು ತೆಲುಗಿನ ಖ್ಯಾತ ಗಾಯಕರಲ್ಲಿ ಒಬ್ಬರಾಗಿದ್ದರು. ಆದರೆ ಈ ಹಾಡು ಇವರನ್ನು ಕರ್ನಾಟಕದಲ್ಲಿ ಕೂಡ ಸೆಲೆಬ್ರೆಟಿ ಮಾಡುವುದರಲ್ಲಿ ಯಶಸ್ವಿಯಾಯಿತು, ಅಷ್ಟೇ ಅಲ್ಲದೆ ರಾಬರ್ಟ ಸಿನಿಮಾಗೆ ಕೂಡ ತೆಲುಗಿನಲ್ಲಿ ಒಂದು ಬ್ರೇಕ್ ಸಿಗುವಂತೆ ಮಾಡಿದರು, ಹೀಗೆ ಇಷ್ಟೆಲ್ಲಾ ಸದ್ದು ಮಾಡಿದ ಹಾಡಿಗೆ ಮಂಗ್ಲಿ ರವರು ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬುದನ್ನು ನಾವು ನೋಡುವುದಾದರೇ, ಸ್ನೇಹಿತರೇ ಮಂಗ್ಲಿ ರವರು ಮೂಲಗಳ ಪ್ರಕಾರ 1.8 ಲಕ್ಷ ರೂಪಾಯಿಗಳನ್ನು ಸಂಭಾವನೆಯನ್ನು ಆಗಿ ಪಡೆದಿದ್ದಾರೆ ಎಂಬುದು ತಿಳಿದು ಬಂದಿದೆ. ಇವರ ಹಾಡಿನ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Get real time updates directly on you device, subscribe now.