ಹೊಸ ಧಾರವಾಹಿಗೆ ಕೈಹಾಕಿದ ಜೊತೆ ಜೊತೆಯಲಿ ನಿರ್ದೇಶಕ ! ಖ್ಯಾತ ನಟಿ ಕಿರುತೆರೆಗೆ ಎಂಟ್ರಿ ! ಯಾರು ಗೊತ್ತಾ??

43

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಜೊತೆ ಜೊತೆಯಲಿ ಧಾರವಾಹಿ ನಿರ್ದೇಶಕರಾಗಿರುವ ಆರೂರು ಜಗದೀಶ್ ರವರು ಕನ್ನಡ ಕಿರುತೆರೆಯಲ್ಲಿ ಧಾರವಾಹಿಗಳನ್ನು ನಿರ್ದೇಶಿಸುವ ಮೂಲಕ ಯಶಸ್ಸು ಕಂಡಿದ್ದಾರೆ, ಅಶ್ವಿನಿ ನಕ್ಷತ್ರ ಧಾರವಾಹಿಯಿಂದ ಆರಂಭವಾದ ಇವರ ಕಿರುತೆರೆಯ ಜರ್ನಿ ಈಗಲೂ ಕೂಡ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಯಶಸ್ವಿಯಾಗಿ ನಡೆಯುತ್ತಿದೆ.

ಕನ್ನಡ ಕಿರುತೆರೆಯಲ್ಲಿ ಅಶ್ವಿನಿ ನಕ್ಷತ್ರ ಸೇರಿದಂತೆ ಗುಪ್ತಗಾಮಿನಿ, ಜೋಡಿಹಕ್ಕಿ, ಶುಭವಿವಾಹ ಹಾಗೂ ಅರುಂಧತಿ ಯಂತಹ ಖ್ಯಾತ ಧಾರಾವಾಹಿಗಳನ್ನು ನಿರ್ದೇಶನ ಮಾಡಿರುವ ಆರೂರು ಜಗದೀಶ್ ರವರು ಇದೀಗ ಮತ್ತೊಂದು ಧಾರವಾಹಿ ಮುಹೂರ್ತ ಮುಗಿಸಿ ನಿರ್ದೇಶನ ಆರಂಭಿಸಿದ್ದಾರೆ.

ವಿಶೇಷವೇನು ಎಂದರೆ ಧಾರವಾಹಿಯಲ್ಲಿ ಮತ್ತೊಬ್ಬರು ಕನ್ನಡ ಚಿತ್ರರಂಗದ ಹಿರಿಯ ನಟಿ ಆಗಿರುವ ಉಮಾಶ್ರೀ ಅವರು ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ, ಮೂರು ಹೆಣ್ಣು ಮಕ್ಕಳು ಇರುವ ಪಾತ್ರದಲ್ಲಿ ನಟನೆ ಮಾಡಲಿರುವ ಉಮಾಶ್ರೀ ಅವರು ಹೇಗೆ ತಮ್ಮ ಮೂರು ಹೆಣ್ಣು ಮಕ್ಕಳನ್ನು ಬೆಳೆಸಿ ಸಮಾಜದಲ್ಲಿ ಉತ್ತಮ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂಬುದರ ಮೇಲೆ ಕಥೆ ಆಧಾರಿತವಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ

Get real time updates directly on you device, subscribe now.