ಬಿಡುಗಡೆಯಾದ ಬಹು ನಿರೀಕ್ಷಿತ ಟಿಆರ್ಪಿ ಲಿಸ್ಟ್ ! ಕನ್ನಡತಿಗೆ ಸಿಹಿಸುದ್ದಿ ! ಯಾವ ಧಾರವಾಹಿಗಳು ಎಷ್ಟನೇ ಸ್ಥಾನ ಗೊತ್ತಾ??

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಇದೀಗ ಟಿಆರ್ಪಿ ಲಿಸ್ಟಿನಲ್ಲಿ ಉತ್ತಮ ಸ್ಥಾನ ಪಡೆದು ಕೊಳ್ಳಲು ಧಾರವಾಹಿಗಳ ನಡುವೆ ಸಾಕಷ್ಟು ನೇರ ಹಣಾಹಣಿ ನಡೆಯುತ್ತಿದೆ, ಕಳೆದ ಕೆಲವು ತಿಂಗಳುಗಳಿಂದ ಧಾರವಾಹಿಗಳು ಭಾರಿ ಪೈಪೋಟಿಯಾಗಿ ಟಿಆರ್ಪಿ ಲಿಸ್ಟಿನಲ್ಲಿ ಸ್ಥಾನ ಪಡೆದುಕೊಳ್ಳಲು ಹರಸಾಹಸ ಮಾಡುತ್ತಿವೆ. ಪ್ರತಿಯೊಂದು ಧಾರವಾಹಿಗಳು ತಮ್ಮದೇ ಆದ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ ಎಂದರೆ ತಪ್ಪಾಗಲಾರದು.

ಅದೇ ಕಾರಣಕ್ಕಾಗಿ ಪ್ರತಿ ವಾರದ ಟಿಆರ್ಪಿ ಲಿಸ್ಟು ಗಳು ಕೂಡ ಬಹಳ ನಿರೀಕ್ಷೆಯನ್ನು ಮೂಡಿಸುತ್ತವೆ. ಆದರೆ ಈ ಲಿಸ್ಟಿನಲ್ಲಿ ಬದಲಾವಣೆ ತರಬೇಕು ಎಂದರೆ ಪ್ರೇಕ್ಷಕರ ಮಟ್ಟ ಗಣನೀಯವಾಗಿ ಏರಿಕೆಯಾಗಲು ಬೇಕಾಗುತ್ತದೆ ಇಲ್ಲವಾದಲ್ಲಿ ಸಾವಿರಗಳಲ್ಲಿ ಪ್ರೇಕ್ಷಕರು ಹೆಚ್ಚಿಸಿಕೊಂಡರೆ ಯಾವುದೇ ಪ್ರಯೋಜನ ಇಲ್ಲವಾದಂತಾಗಿದೆ, ಯಾಕೆಂದರೆ ಟಾಪ್ ಸ್ಥಾನಗಳಲ್ಲಿರುವ ಧಾರವಾಹಿಗಳು ಬಹಳ ಮುಂದೆ ಹೋಗಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.

ಇನ್ನು ಈ ವಾರದ ಬಹು ನಿರೀಕ್ಷಿತ ಟಿಆರ್ಪಿ ಲಿಸ್ಟ್ ಇದೆ ಬಿಡುಗಡೆಯಾಗಿದ್ದು ಟಾಪ್ ಹತ್ತು ಧಾರಾವಾಹಿಗಳ ಲಿಸ್ಟ್ ಈ ಕೆಳಗಿನಂತಿದೆ. ಟಾಪ್ 10 ನೇ ಸ್ಥಾನದಲ್ಲಿ ಕಾವ್ಯಾಂಜಲಿ ಧಾರವಾಹಿ ಸ್ಥಾನ ಪಡೆದುಕೊಂಡಿದೆ, ಇನ್ನು 9 ನೇ ಸ್ಥಾನದಲ್ಲಿ ಗಿಣಿರಾಮ, 8 ನೇ ಸ್ಥಾನದಲ್ಲಿ ಗೀತಾ ಧಾರವಾಹಿ, ಇನ್ನು ಕಳೆದ ವಾರ 9ನೇ ಸ್ಥಾನದಲ್ಲಿದ್ದ ಕನ್ನಡತಿ ಈ ಬಾರಿ 7 ನೇ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ, ಇನ್ನುಳಿದಂತೆ ಮಂಗಳಗೌರಿ 6 ನೇ ಸ್ಥಾನದಲ್ಲಿ, ಪಾರು 5 ನೇ ಸ್ಥಾನದಲ್ಲಿ, ನಾಗಿಣಿ 4 ನೇ ಸ್ಥಾನದಲ್ಲಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ಗಟ್ಟಿಮೇಳ ಧಾರವಾಹಿಯು 3 ನೇ ಸ್ಥಾನದಲ್ಲಿ ಜೊತೆ ಜೊತೆಯಲಿ 2 ನೇ ಸ್ಥಾನದಲ್ಲಿ ಹಾಗೂ ಸತ್ಯ ಧಾರವಾಹಿ ಮೊದಲನೇ ಸ್ಥಾನ ಪಡೆದುಕೊಂಡಿದೆ.

Get real time updates directly on you device, subscribe now.