ಬಿಗ್ ಬಾಸ್ ಮನೆಗೆ ತೆರಳಲು ಧಾರವಾಹಿಯಲ್ಲಿ ಟ್ವಿಸ್ಟ್ ! ಖ್ಯಾತ ನಟಿ ವೈಲ್ಡ್ ಕಾರ್ಡ್ ಎಂಟ್ರಿ. ಯಾರು ಗೊತ್ತೇ?

14

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಿ ಈಗಾಗಲೇ ಮೂರು ವಾರಗಳು ಕಳೆದು ಹೋಗಿವೆ, ಇನ್ನೇನು ನಾಲ್ಕನೇ ವಾರ ಮುಗಿಯುವ ಸಮಯ ಬಂದಿದ್ದು, ಇನ್ನು ಮುಂದಿನ ಎರಡು-ಮೂರು ವಾರಗಳಲ್ಲಿ ಒಬ್ಬರು ಸ್ಪರ್ಧಿಯು ವೈಟ್ ಕಾರ್ಡ್ ಎಂಟ್ರಿ ಯಾಗಿ ಬಿಗ್ ಬಾಸ್ ಮನೆಗೆ ತೆರಳುತ್ತಾರೆ. ಆರಂಭದಲ್ಲಿ ಹೀಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಿಗ್ ಬಾಸ್ ಮನೆಗೆ ಹಲವಾರು ನಟ ನಟಿಯರ ಹೆಸರು ಕೇಳಿ ಬಂದಿತ್ತು.

ಅದರಲ್ಲಿಯೂ ಕನ್ನಡದ ಕಿರುತೆರೆಯ ಖ್ಯಾತ ನಟಿಯಾಗಿರುವ ಕಾವ್ಯ ಗೌಡರವರ ಹೆಸರು ಬಿಗ್ ಬಾಸ್ ಮನೆಗೆ ತೆರಳುತ್ತಾರೆ ಎಂದು ಸಾಕಷ್ಟು ಬಾರಿ ಕೇಳಿ ಬಂದಿತ್ತು, ಆದರೆ ಈ ಕುರಿತು ಕಾವ್ಯ ಗೌಡರವರು ಯಾವುದೇ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ, ಅಷ್ಟೇ ಅಲ್ಲದೆ ಇತ್ತೀಚಿನ ಸಂದರ್ಶನದಲ್ಲಿ ಈ ವರ್ಷ ಮದುವೆಯಾಗುತ್ತೇನೆ ಎಂದು ಕೂಡ ಖಚಿತ ಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಗ್ ಬಾಸ್ ಮನೆಗೆ ಇವರು ಹೋಗುತ್ತಾರೋ ಅಥವಾ ಇಲ್ಲವೇ ಎಂಬ ಪ್ರಶ್ನೆ ಮೂಡಿದೆ.

ಅದೇ ಸಮಯದಲ್ಲಿ ಇದೀಗ ಬಿಗ್ ಬಾಸ್ ಕಾರ್ಯಕ್ರಮದ ಆರಂಭಕ್ಕೆ ಮುನ್ನ ಬಿಗ್ ಬಾಸ್ ಮನೆಗೆ ತೆರಳುತ್ತಾರೆ ಎಂದು ಕೇಳಿ ಬರುತ್ತಿದ್ದ ಹಿರಿಯ ನಟಿ ಹೆಸರು ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಹೌದು ಸ್ನೇಹಿತರೇ ಕನ್ನಡತಿ ಧಾರಾವಾಹಿ ಅಮ್ಮಮ ಪಾತ್ರಧಾರಿ ಚಿತ್ಕಲ ರವರು ಇದೀಗ ಧಾರವಾಹಿಯಲ್ಲಿ ಆಸ್ಪತ್ರೆ ಸೇರಿಕೊಂಡಿದ್ದಾರೆ, ಆದ ಕಾರಣ ಇವರು ಬಿಗ್ ಬಾಸ್ ಮನೆಗೆ ತೆರಳಲು ಧಾರವಾಹಿಯಲ್ಲಿ ಟ್ವಿಸ್ಟ್ ನೀಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಕೇಳಿ ಬಂದಿದೆ, ಇದರ ಕುರಿತು ಹೆಚ್ಚಿನ ಚರ್ಚೆ ಕೂಡ ನಡೆಯುತ್ತಿದ್ದು ಅಭಿಮಾನಿಗಳು ಯಾವುದೇ ಕಾರಣಕ್ಕೂ ಧಾರವಾಹಿ ಬಿಡಬಾರದು ಎಂದು ಮನವಿ ಮಾಡಿದ್ದಾರೆ.

Get real time updates directly on you device, subscribe now.