ಈ ಬಾರಿ ಬಿಗ್ ಬಾಸ್ ನಲ್ಲಿ ಗೆಲ್ಲುವ ಭರವಸೆಯ ಸ್ಪರ್ಧಿಗಳನ್ನು ಹೆಸರಿಸಿದ ಶೈನ್ ಶೆಟ್ಟಿ ಯಾರಂತೆ ಗೊತ್ತಾ??

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಗೆ ತೆರಳಿ ತಮ್ಮ ಅತ್ಯುತ್ತಮ ನಡೆಗಳ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಜನಪ್ರಿಯತೆಯನ್ನು ಪಡೆದು ಕೊಂಡು ವಿನ್ನರ್ ಆಗಿ ಹೊರ ಹೊಮ್ಮಿದ ಶೈನ್ ಶೆಟ್ಟಿ ರವರು ಇದೀಗ ಈ ಈ ಬಾರಿಯ ಸೀಸನ್ ಎಂಟರ ಬಿಗ್ ಬಾಸ್ ಕಾರ್ಯಕ್ರಮದ ಕುರಿತು ಮಾತನಾಡಿ ಹಾಗೂ ಅಲ್ಲಿನ ಸ್ಪರ್ಧಿಗಳ ಕುರಿತು ಮಾತನಾಡಿ ತಮಗೆ ಅನಿಸುವಂತೆ ಭರವಸೆಯ ಸ್ಪರ್ಧಿಗಳನ್ನು ಹೆಸರಿಸಿದ್ದಾರೆ

ಹೌದು ಸ್ನೇಹಿತರೇ ಇತ್ತೀಚಿಗೆ ಸಂದರ್ಶನದಲ್ಲಿ ಪಾಲ್ಗೊಂಡ ಶೆಟ್ಟಿ ರವರು ಬಿಗ್ ಬಾಸ್ ಮನೆಯ ಕುರಿತು ಮಾತನಾಡುವಾಗ ನಾನು ಕೂಡ ಬಿಗ್ ಬಾಸ್ ನೋಡುವಾಗ ಹಲವಾರು ಪ್ರಶ್ನೆಗಳು ಇದ್ದವು, ಅದೇಗೆ ಮನೆಯ ಸ್ಪರ್ಧಿಗಳು ಎದ್ದ ತಕ್ಷಣ ಡ್ಯಾನ್ಸ್ ಮಾಡುತ್ತಾರೆ ಅದು ಹೇಗೆ ಮೊಬೈಲ್ ಇಲ್ಲದೆ ನೂರು ದಿನ ಇರುತ್ತಾರೆ ಎಂಬ ಪ್ರಶ್ನೆಗಳು ಮೂಡಿ ಬಂದಿದ್ದವು, ಅಲ್ಲಿಂದ ಆಟಗಳು, ಮನೆಯ ವಿಚಾರಗಳು ನಿಜಕ್ಕೂ ಹಲವಾರು ಪ್ರಶ್ನೆಗಳು ಮೂಡುವಂತೆ ಮಾಡಿದ್ದವು.

ಆದರೆ ಬಿಗ್ ಬಾಸ್ ಮನೆಗೆ ನಾನು ಸ್ಪರ್ದಿಯಾಗಿ ಹೋದ ನಂತರ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು. ಇನ್ನು ಈ ಬಾರಿಯ ಬಿಗ್ ಬಾಸ್ ಕುರಿತು ಮಾತನಾಡುವುದಾದರೇ ನನಗೆ ಮೊದಲಿನಿಂದಲೂ ನಿಧಿ ಸುಬ್ಬಯ್ಯ ಅವರನ್ನು ಕಂಡರೆ ಬಹಳ ಇಷ್ಟ ಅವರು ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಭರವಸೆ ಮೂಡಿಸುತ್ತಾರೆ ಎಂಬ ಅಭಿಪ್ರಾಯ ನನ್ನದು ಇನ್ನು ಯೂಟ್ಯೂಬ್ ನಲ್ಲಿ ಸದ್ದು ಮಾಡಿರುವ ರಘು ರವರೂ ಕೂಡ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬುವುದರಲ್ಲಿ ಎರಡು ಮಾತಿಲ್ಲ, ಆದರೆ ಈಗಲೇ ಯಾರು ಗೆಲ್ಲುತ್ತಾರೆ ಎಂಬುದನ್ನು ಹೇಳುವುದು ಸುಲಭವಲ್ಲ ಆದರೆ ನನಗೆ ವೈಯಕ್ತಿಕವಾಗಿ ಇವರಿಬ್ಬರ ಮೇಲೆ ಬರವಸೆ ಇದೆ ಎಂದು ಹೇಳಿದ್ದಾರೆ.

Get real time updates directly on you device, subscribe now.