ಕನ್ನಡದ ಎಲ್ಲಾ ದಾಖಲೆಗಳನ್ನು ಕುಟ್ಟಿ ಪುಡಿಪುಡಿ ಮಾಡಲು ಸ್ಟಾರ್ ನಿರ್ದೇಶಕನ ಜೊತೆ ಕೈಜೋಡಿಸಿದ ಧ್ರುವ ಸರ್ಜಾ, ಯಾರು ಗೊತ್ತೇ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಧ್ರುವ ಸರ್ಜಾ ರವರು ಅಭಿನಯಿಸಿದ ಎಲ್ಲಾ ಚಿತ್ರಗಳು ಇಲ್ಲಿಯವರೆಗೂ ಯಶಸ್ಸಿನ ಸಾಲಿಗೆ ಸೇರಿ ಕೊಂಡಿವೆ. ತಾವು ಅಭಿನಯಿಸಿದ ಮೊಟ್ಟ ಮೊದಲ ಚಿತ್ರದಿಂದಲೂ ಕೂಡ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಧ್ರುವ ಸರ್ಜಾ ರವರು ಇತ್ತೀಚೆಗೆ ಬಿಡುಗಡೆ ಯಾಗಿರುವ ಚಿತ್ರದಲ್ಲಿಯೂ ಕೂಡ ಮಾಡುವಲ್ಲಿ ಯಶಸ್ವಿಯಾಗಿದ್ದರು. ಪೊಗರು ಚಿತ್ರ ಕೇವಲ ಕನ್ನಡದಲ್ಲಷ್ಟೇ ಅಲ್ಲದೆ ಇದೀಗ ತೆಲುಗಿನಲ್ಲಿಯೂ ಕೂಡ ಯಶಸ್ಸಿನ ಸಾಲಿನ ಚಿತ್ರಗಳಿಗೆ ಸೇರಿ ಕೊಂಡಿದೆ.

ಈಗಲೂ ಕೂಡ ಚಿತ್ರ ಮಂದಿರಗಳತ್ತ ಪೊಗುರು ಚಿತ್ರ ನೋಡಲು ಸಿನಿ ಪ್ರಿಯರು ಬರುತ್ತಿದ್ದು ಪೊಗರು ಚಿತ್ರ ಬಾಕ್ಸಾಫೀಸ್ ನಲ್ಲಿ ಚೆನ್ನಾಗಿ ಸದ್ದು ಮಾಡುವಲ್ಲಿ ಯಶಸ್ವಿಯಾಗಿದೆ, ಇದಾದ ನಂತರ ಇದೀಗ ನಂದ ಕಿಶೋರ್ ಅವರ ಜೊತೆ ದುಬಾರಿ ಚಿತ್ರದಲ್ಲಿ ನಟನೆ ಮಾಡುತ್ತಿರುವ ಧ್ರುವ ಸರ್ಜಾ ರವರು ಇದಾದ ಬಳಿಕ ಕನ್ನಡದ ಮತ್ತೊಬ್ಬ ಸ್ಟಾರ್ ನಿರ್ದೇಶಕ ಜೊತೆ ಕೈ ಜೋಡಿಸ ಲಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ.

ಒಂದು ವೇಳೆ ಧ್ರುವ ಸರ್ಜಾ ಹಾಗೂ ಖ್ಯಾತ ನಿರ್ದೇಶಕನ ಕಾಂಬಿನೇಷನ್ನಲ್ಲಿ ಸಿನಿಮಾ ನಿರ್ಮಾಣ ಗೊಂಡರೇ ಕನ್ನಡದ ಎಲ್ಲ ದಾಖಲೆಗಳು ಕೂಡ ಅಚ್ಚರಿ ಪಡಬೇಕಾಗಿಲ್ಲ, ಯಾಕೆಂದರೆ ಹೇಳಿ ಕೇಳಿ ಧ್ರುವ ಸರ್ಜಾ ಅಪ್ಪಟ ಆಂಜನೇಯನ ಭಕ್ತ, ಇನ್ನು ಖ್ಯಾತ ನಿರ್ದೇಶಕ ಹರ್ಷ ಅವರು ಕೂಡ ಆಂಜನೇಯನ ಭಕ್ತರಾಗಿದ್ದು ಹಲವಾರು ಸಿನಿಮಾಗಳನ್ನು ಹನುಮಂತನ ಹೆಸರಿನಲ್ಲಿ ತೆಗೆದಿದ್ದಾರೆ, ಇಬ್ಬರು ಒಂದಾದರೇ ಸಾಮಾನ್ಯವಾಗಿ ಆಂಜನೇಯನ ಹೆಸರಿನಲ್ಲಿ ಮತ್ತೊಂದು ಚಿತ್ರ ನಿರ್ಮಾಣವಾಗುವ ಸಾಧ್ಯತೆ ಇದೆ, ಯಾವುದೇ ಹೆಸರಿನಲ್ಲಿ ನಿರ್ಮಾಣವಾದರೂ ಕೂಡ ಈ ಕಾಂಬಿನೇಷನ್ ಯಶಸ್ಸು ಕಾಣಲಿದೆ ಎಂಬುದು ಅಭಿಮಾನಿಗಳ ಲೆಕ್ಕಾಚಾರ. ಒಂದು ವೇಳೆ ಅದೇ ನಡೆದಲ್ಲಿ ಖಂಡಿತ ಕನ್ನಡದ ಎಲ್ಲಾ ದಾಖಲೆಗಳು ಪುಡಿ ಪುಡಿ ಆದರೂ ಕೂಡ ಅಚ್ಚರಿ ಪಡಬೇಕಾಗಿಲ್ಲ.

Get real time updates directly on you device, subscribe now.