ಹೊಸ ಉದ್ಯಮ ಆರಂಭಿಸಿದ ಪ್ರಜ್ವಲ್ ದೇವರಾಜ್ ರವರ ಹೆಂಡತಿ ರಾಗಿಣಿ ! ಏನು ಗೊತ್ತಾ??

15

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ನಿಮಗೆಲ್ಲರಿಗೂ ತಿಳಿದಿರುವಂತೆ ಕೇವಲ ನಟನೆಯಷ್ಟೇ ಅಲ್ಲದೇ ಅತ್ಯದ್ಭುತ ಡ್ಯಾನ್ಸರ್ ಕೂಡ ಆಗಿದ್ದಾರೆ. ಅಷ್ಟೇ ಅಲ್ಲದೆ ಫಿಟ್ನೆಸ್ ಕುರಿತು ಸಾಕಷ್ಟು ತಿಳಿದು ಕೊಂಡಿರುವ ರಾಗಿಣಿ ರವರು ತಮ್ಮದೇ ಆದ ಅಪ್ಲಿಕೇಶನ್ ಮೂಲಕ ಹಲವಾರು ಜನರಿಗೆ ಕೋಚಿಂಗ್ ನೀಡುತ್ತಾ ಜನರನ್ನು ಫಿಟ್ ಮಾಡುವ ಉದ್ಯಮವನ್ನು ಹಲವಾರು ವರ್ಷಗಳಿಂದ ಮಾಡುತ್ತಿದ್ದಾರೆ.

ಇನ್ನು ನಟನೆ, ಜಾಹೀರಾತು ಸೇರಿದಂತೆ ಡ್ಯಾನ್ಸಿಂಗ್ ಹಾಗೂ ಫಿಟ್ನೆಸ್ ಹೀಗೆ ವಿವಿಧ ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿರುವ ರಾಗಿಣಿ ಪ್ರಜ್ವಲ್ ರವರು ಇದೀಗ ಮತ್ತೊಂದು ಉದ್ಯಮಕ್ಕೆ ಕೈಹಾಕಿದ್ದಾರೆ.

ಹೌದು ಸ್ನೇಹಿತರೇ ಇದೀಗ ಬೆಂಗಳೂರಿನ ಪ್ರತಿಷ್ಠಿತ ನಗರವಾದ ಜೆಪಿ ನಗರದಲ್ಲಿ ಆಹಾರ ವಿಭಾಗಕ್ಕೆ ಕೈ ಹಾಕಿರುವ ರಾಗಿಣಿ ಪ್ರಜ್ವಲ್ ರವರು ಬಿಸಿ ಬೆಲ್ಲಿ ಕಿಚನ್ ಎಂಬ ಹೋಟೆಲ್ ಒಂದನ್ನು ಆರಂಭಿಸಿದ್ದಾರೆ, ಇಲ್ಲಿ ರಾಗಿ ಮುಂದೆ ಇಂದ ಹಿಡಿದು ಎಳನೀರು ಮನೆ ಊಟ ಸೇರಿದಂತೆ ಐಷಾರಾಮಿ ಪದಾರ್ಥಗಳು ಕೂಡ ಸಿಗಲಿದ್ದು ಹೋಟೆಲ್ ಉದ್ಯಮಕ್ಕೆ ಕೂಡ ಈ ಮೂಲಕ ರಾಗಿಣಿ ರವರು ಎಂಟ್ರಿ ಕೊಟ್ಟಿದ್ದಾರೆ. ಈ ಉದ್ಯಮ ಕಂಡ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದು, ನಾವು ಕೂಡ ಬಂದು ಟ್ರೈ ಮಾಡುತ್ತೇವೆ ಎಂದಿದ್ದಾರೆ. ನೀವು ಕೂಡ ಒಮ್ಮೆ ಹೋಗಿ ಟ್ರೈ ಮಾಡುವುದನ್ನು ಮರೆಯಬೇಡಿ.

Get real time updates directly on you device, subscribe now.